ಕರ್ನಾಟಕ

karnataka

ETV Bharat / entertainment

'ಪ್ರಾರಂಭ' ಸಿನಿಮಾದಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದ ಮನುರಂಜನ್ ರವಿಚಂದ್ರನ್ - Manuranjan Ravichandran acted in Prarambha movie

ಮುಗಿಲ್ ಪೇಟೆ ಸಿನಿಮಾ ನಂತರ ಮನು‌ರಂಜನ್‌ 'ಪ್ರಾರಂಭ' ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

'ಪ್ರಾರಂಭ' ಸಿನಿಮಾದ ದೃಶ್ಯ
'ಪ್ರಾರಂಭ' ಸಿನಿಮಾದ ದೃಶ್ಯ

By

Published : Apr 22, 2022, 10:47 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ಸಿನಿಮಾಗಳನ್ನ ಮಾಡಿ ಗಮನ ಸೆಳೆಯುತ್ತಿರುವ ನಟ ಮನುರಂಜನ್ ರವಿಚಂದ್ರನ್. ಸದ್ಯ ಲವರ್ ಬಾಯ್ ಇಮೇಜ್ ನಿಂದ ಗುರುತಿಸಿಕೊಂಡಿದ್ದಾರೆ. ತಂದೆಯ ಸ್ಟಾರ್ ಡಮ್ ಬಳಸದೆ ಮನು ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಆಗಲು‌ ಪಣ ತೊಟ್ಟಿದ್ದಾರೆ.

'ಪ್ರಾರಂಭ' ಸಿನಿಮಾದ ದೃಶ್ಯ

ಮುಗಿಲ್ ಪೇಟೆ ಸಿನಿಮಾ ನಂತರ ಮನು‌ರಂಜನ್‌ ಪ್ರಾರಂಭ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೌದು ಸದ್ಯ ಟ್ರೈಲರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರೋ 'ಪ್ರಾರಂಭ' ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಮನುರಂಜನ್ ಅವರ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರ ಬಿಡುಗಡೆಗೆ ಕ್ರೇಜಿ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮನುರಂಜನ್ ರವಿಚಂದ್ರನ್

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮನು ಕಲ್ಯಾಡಿ ಅವರೇ ಬರೆದಿದ್ದಾರೆ. ಈ ಹಿಂದೆ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು, ಈ ಬಾರಿ ರವಿಚಂದ್ರನ್‌ ಪುತ್ರನಿಗಾಗಿ ರೊಮ್ಯಾಂಟಿಕ್‌ ಲವ್‌ ಸ್ಟೋರಿಯನ್ನು ಹೆಣೆದಿದ್ದಾರೆ.
ಕ್ರೇಜಿ ಸ್ಟಾರ್ ಪುತ್ರ ಮನುರಂಜನ್ ಜೊತೆ ಕೀರ್ತಿ ಕಲ್ಕೇರಿ ರೊಮ್ಯಾನ್ಸ್ ಮಾಡಲಿದ್ದಾರೆ‌. ಮನುರಂಜನ್ ರವಿಚಂದ್ರನ್, ಕೀರ್ತಿ ಅಲ್ಲದೇ ಶ್ರೀನಿವಾಸ ಪ್ರಭು, ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ ಮುಂತಾದವರು ನಟಿಸಿದ್ದಾರೆ.

ಪ್ರಾರಂಭ ಚಿತ್ರದಲ್ಲಿ ಮನುರಂಜನ್ ರವಿಚಂದ್ರನ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿರುವ ಪ್ರಾರಂಭ ಮೇ 13ರಂದು ಬಿಡುಗಡೆ ಆಗೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ವಡ್ಡೇರಹಳ್ಳಿ ಈ ಚಿತ್ರದ ಸಹ ನಿರ್ಮಾಪಕರು. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ‌ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಓದಿ: 'ಗಾಳಿಪಟ 2' ಚಿತ್ರದಲ್ಲಿ ಕಮಾಲ್ ಮಾಡಲು ರೆಡಿಯಾದ ಗೋಲ್ಡನ್ ಸ್ಟಾರ್-ಯೋಗರಾಜ್ ಭಟ್

For All Latest Updates

ABOUT THE AUTHOR

...view details