'ಆರ್ಎಕ್ಸ್ 100' ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಅಜಯ್ ಭೂಪತಿ. ಇದೀಗ ಅವರು 'ಮಂಗಳವಾರಂ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸಿದ್ದು, ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದೇ ನವೆಂಬರ್ 17 ರಂದು ತೆರೆ ಕಾಣಲಿದೆ. ಇಂದು ಚಿತ್ರತಂಡ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇಷ್ಟು ದಿನ ಟೀಸರ್, ಪೋಸ್ಟರ್ ಹಾಗೂ ಹಾಡುಗಳಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರದ ಟ್ರೇಲರ್ ಅನ್ನು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅನಾವರಣಗೊಳಿಸಿದ್ದಾರೆ.
ಟ್ರೇಲರ್ ಹೇಗಿದೆ?:'ಮಂಗಳವಾರಂ' ಸಿನಿಮಾದ ಟ್ರೇಲರ್ ಸಖತ್ ಹಾರರ್ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಬಹಳ ರೋಚಕವಾಗಿ ಟ್ರೇಲರ್ನಲ್ಲಿ ತೋರಿಸಿದ್ದಾರೆ. ಇಡೀ ಸಿನಿಮಾವನ್ನು ಕಟ್ ಮಾಡಿ ಟ್ರೇಲರ್ನಲ್ಲಿ ಕಥೆ ಹೇಳಿರುವ ರೀತಿ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಿದೆ. ಸಂಪೂರ್ಣವಾಗಿ ಥ್ರಿಲ್ಲಿಂಗ್ ಅಂಶಗಳಿಂದ ಕೂಡಿರುವ ಟ್ರೇಲರ್ ಅನ್ನೇ ನಿರ್ದೇಶಕರು ಕೈಬಿಟ್ಟಿದ್ದಾರೆ. ಚಿತ್ರದ ಕಥೆಯನ್ನು ಬಹಿರಂಗಪಡಿಸದೇ ಕೆಲವು ದೃಶ್ಯಗಳನ್ನು ಹೈಲೈಟ್ ಮಾಡಿರುವುದು ವಿಶೇಷ ಮತ್ತು ಆಕರ್ಷಕ.
ಚಿರಂಜೀವಿ ಶುಭಹಾರೈಕೆ: 'ಮಂಗಳವಾರಂ' ಟ್ರೇಲರ್ ಬಿಡುಗಡೆಗೊಳಿಸಿದ ಮೆಗಾಸ್ಟಾರ್ ಚಿರಂಜೀವಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, "ಮಂಗಳವಾರಂ ಚಿತ್ರದ ನಿರ್ಮಾಪಕರಾದ ಸ್ವಾತಿ ರೆಡ್ಡಿ ಗುಣಪತಿ ಮತ್ತು ಸುರೇಶ್ ವರ್ಮಾ ನನ್ನ ಆತ್ಮೀಯ ಸ್ನೇಹಿತರು. ಅದರಲ್ಲೂ ಸ್ವಾತಿ ತುಂಬಾ ಡೈನಾಮಿಕ್ ಹುಡುಗಿ. ಇಂತಹ ಯಂಗ್ ಸ್ಟಾರ್ ನಿರ್ಮಾಪಕರೊಂದಿಗೆ ಅಜಯ್ ಭೂಪತಿಯಂತಹ ಪ್ರತಿಭಾವಂತ ನಿರ್ದೇಶಕರ ಜೊತೆ ಮೊದಲ ಪ್ಯಾನ್ ಇಂಡಿಯಾ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ಹಳ್ಳಿಗಾಡಿನ ಆ್ಯಕ್ಷನ್ ಥ್ರಿಲ್ಲರ್ ಆಗಿ ತಯಾರಾಗಿರುವ ಈ ಸಿನಿಮಾದ ಟ್ರೈಲರ್ ನನ್ನ ಕೈಯಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ. ಚಿತ್ರವು ಯಶಸ್ವಿಯಾಗಲಿ ಮತ್ತು ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.