ಸ್ಯಾಂಡಲ್ ವುಡ್ ನಲ್ಲಿ ಸಂಗೀತ ಮೂಲಕ ಮೋಡಿ ಮಾಡಲು ಬರುತ್ತಿದೆ ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ಸಿನಿಮಾ ಮನಸ್ಮಿತ. ಸುಮಾರು ವರ್ಷಗಳ ನಂತರ ಮ್ಯೂಸಿಕಲ್ ಲವ್ ಸ್ಟೋರಿ ಮಾದರಿಯ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮ್ಯಾಜಿಕ್ ಮಾಡಲು ಬರುತ್ತಿದ್ದು , ಸಿನಿಮಾ ಹಾಡುಗಳು ಈಗಾಗಲೇ ಗಮನ ಸೆಳೆಯುತ್ತಿದೆ.
ಈಗಾಗಲೇ ಶಂಕರ್ ಮಹದೇವನ್ ಅವರು ಹಾಡಿರುವ ಮೊದಲ ಹಾಡು ಸಿನಿಪ್ರಿಯರ ಮನಗೆದ್ದಿದ್ದು, ಏಪ್ರಿಲ್ 28 ರಂದು 2ನೇ ಹಾಡನ್ನ ಸಿನಿಮಾತಂಡ ರಿಲೀಸ್ ಮಾಡಿದೆ. ಮನಸ್ಮಿತ ಸಿನಿಮಾದ ಮೊದಲ ಹಾಡಿಗೆ ಕ್ಲಾಸಿಕ್ ಟಚ್ ನೀಡಲಾಗಿತ್ತು. ವಾರದ ಹಿಂದೆ ರಿಲೀಸ್ ಆದ ಹಾಡಿಗೆ ಸಂಗೀತ , ಸಿನಿಮಾ ಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಂಪೂರ್ಣ ಶಾಸ್ತ್ರೀಯ ಸಂಗೀತದಲ್ಲಿ ಕ್ಲಾಸಿಕಲ್ ನೃತ್ಯ ಸಂಯೋಜನೆಯ ‘ನೀಲ ಮೇಘ ಶ್ಯಾಮ’ ಹಾಡಿಗೆ ಜನರು ಫಿದಾ ಆಗಿದ್ದಾರೆ.. ಅದ್ರಲ್ಲೂ ಶಂಕರ್ ಮಹದೇವನ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡು ಜನರನ್ನ ಮೈಮರೆಸುತ್ತದೆ. ಹಾಡಿಗೆ ಮಂಜು ಎಮ್ ದೊಡ್ಡಮಣಿ ಅವರು ಅಧ್ಬುತವಾದ ಅರ್ಥಪೂರ್ಣ ಲಿರಿಕ್ಸ್ ಬರೆದಿದ್ದಾರೆ.
ಇದೀಗ ರಿಲೀಸ್ ಆಗಿರುವ 2 ನೇ ಹಾಡಂತೂ ಕಂಪ್ಲೀಟಾಗಿ ಮೆಲೋಡಿ ಹಾಡು ರೋಮ್ಯಾಂಟಿಕ್ ಮೆಲೋಡಿ ಹಾಡು ‘ಮುದ್ದಾದ ಬಾನುಲಿ ವರದಿ’ ಹಾಡು ಸಹ ಅಷ್ಟೇ ಮೋಡಿ ಮಾಡುತ್ತಿದೆ.. ನಾಯಕ ನಾಯಕಿಯ ಕೆಮಿಸ್ಟ್ರಿ ಅಧ್ಬುತವಾಗಿ ತೋರಿಸಲಾಗಿದೆ ಈ ಹಾಡಿನ ಮೂಲಕ.. ಸಾಂಗ್ ಶೂಟ್ ಮಾಡಿರುವ ಲೊಕೇಶನ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಹಾಡು ಕೇಳ್ತಿದ್ರೆ ಮನಸ್ಸಿಗೆ ಮುದ ನೀಡುತ್ತೆ.
ಮೈ ಮರೆಸುವ ಈ ಹಾಡಿಗೆ ಸಿನಿಮಾದ ಸಂಗೀತ ಜವಾಬ್ದಾರಿ ಹೊತ್ತಿರುವ ಮ್ಯೂಸಿಕ್ ಡೈರೆಕ್ಟರ್ ಹರಿಕಾವ್ಯ ಅವರೇ ಧ್ವನಿಯಾಗಿ ಜೀವ ತುಂಬಿದ್ದಾರೆ.. ಅವರ ಜೊತೆಗೆ ಹರಿಹರನ್ , ಸನಾ ಮೈದುಟ್ಟಿ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.. ಕೆ . ಕಲ್ಯಾಣ್ ಈ ಹಾಡು ರಚಿಸಿದ್ದಾರೆ. ಅಪ್ಪಣ್ಣ ಸಂತೋಷ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಹೊಸಬರ ದಂಡೇ ಇದೆ.. ಜೊತೆಗೆ ಅನುಭವಿ ನಟರ ಸಾಥ್ ಇದೆ. ಸ್ವರ ಸಂಗೀತದ ತಾಳದ ಬೆಸುಗೆ ಜೊತೆಗೆ ಪ್ರೀತಿಯ ಕಥೆ ಪ್ರೇಕ್ಷಕರ ಮನ ಗೆಲ್ಲಲು ಇದೇ ಜೂನ್ 3 ರಂದು ಬಿಗ್ ಸ್ಕ್ರೀನ್ ಗೆ ಬರುತ್ತಿದೆ.