ಕರ್ನಾಟಕ

karnataka

ETV Bharat / entertainment

ಕಾರು - ಪಿಕಪ್​ ಡಿಕ್ಕಿ: ಮಲಯಾಳಂ ನಟ ಕೊಲ್ಲಂ ಸುಧಿ ದುರ್ಮರಣ - ಕೊಲ್ಲಂ ಸುಧಿ

ಮಲಯಾಳಂ ನಟ ಕೊಲ್ಲಂ ಸುಧಿ ಇಂದು ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Actor Kollam Sudhi
ಮಲಯಾಳಂ ನಟ ಕೊಲ್ಲಂ ಸುಧಿ

By

Published : Jun 5, 2023, 9:45 AM IST

Updated : Jun 5, 2023, 11:07 AM IST

ತ್ರಿಶೂರ್​ (ಕೇರಳ): ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಇಂದು ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತ್ರಿಶೂರ್​ನ ಕೈಪಮಂಗಲಂ ಪಣಾಂಬಿಕುನ್​ನಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕೊಲ್ಲ ಸುಧಿ ಮತ್ತು ತಂಡ ಕೋಯಿಕ್ಕೋಡ್​ನ ವಡಕಾರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ ಹಿಂತಿರುಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಪಿಕಪ್​ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಸುಧಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದುರದೃಷ್ಟವಶಾತ್​ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಇನ್ನೂ ಸುಧಿ ಜೊತೆ ನಟ ಬಿನು ಅಡಿಮಲಿ, ಉಲ್ಲಾಸ್​ ಆರೂರ್​ ಮತ್ತು ಮಹೇಶ್​ ಕೂಡ ಜೊತೆಗಿದ್ದರು. ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಧಿ ಕಾರಿನ ಮುಂಭಾಗದ ಸೀಟ್​ನಲ್ಲಿ ಕುಳಿತಿದ್ದರು. ಉಲ್ಲಾಸ್​ ಆರೂರ್ ಕಾರು ಡ್ರೈವ್​ ಮಾಡುತ್ತಿದ್ದರು. ಚಾಲಕ ನಿದ್ರೆಗೆ ಜಾರಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಸುಧಿಗೆ ತಲೆಗೆ ಪೆಟ್ಟಾದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕೇರಳ ಸಿಎಂ ಸಂತಾಪ: ಕೊಲ್ಲಂ ಸುಧಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸಂತಾಪ ಸೂಚಿಸಿದ್ದಾರೆ. ಒಬ್ಬ ಅದ್ಭುತ ಕಲಾವಿದನ ನಿಧನಕ್ಕೆ ಇಡೀ ಮಲಯಾಳಂ ಚಿತ್ರರಂಗವೇ ಕಣ್ಣೀರಿಟ್ಟಿದೆ. ಮಾಲಿವುಡ್​ ಸೆಲೆಬ್ರಿಟಿಗಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಕೊಲ್ಲಂ ಸುಧಿ ಅವರನ್ನು ಭಾವನಾತ್ಮಕವಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಕೆಲವರು ಟ್ವೀಟ್​ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಕೇವಲ ಒಂದು ಹಾಡಿಗೆ ನಡೆದ ಗಲಾಟೆ... ಕೊಲೆಯಲ್ಲಿ ಅಂತ್ಯ

ಪ್ರತಿಭಾವಂತ ಕಲಾವಿದ ಕೊಲ್ಲಂ ಸುಧಿ: ಮಲಯಾಳಂ ರಿಯಾಲಿಟಿ ಶೋಗಳ ಮೂಲಕ ಕೊಲ್ಲಂ ಸುಧಿ ಪ್ರೇಕ್ಷಕರಿಗೆ ಪರಿಚಯವಾದರು. 16 ನೇ ವಯಸ್ಸಿನಲ್ಲಿಯೇ ಕಲಾ ಕ್ಷೇತ್ರಕ್ಕೆ ಕಾಲಿಟ್ಟ ಸುಧಿ ಮಿಮಿಕ್ರಿ ವೇದಿಕೆಗಳ ಮೂಲಕ ಮಲಯಾಳಿಗರ ನೆಚ್ಚಿನ ತಾರೆಯಾದರು. ಕಿರುತೆರೆ ಜೊತೆಗೆ ಬೆಳ್ಳಿತೆರೆಯ ಮೂಲಕವೂ ಪ್ರೇಕ್ಷಕರಿಗೆ ಚಿರಪರಿಚಿತರು. 2015 ರಲ್ಲಿ ತೆರೆಕಂಡ ಕಾಂತಾರಿ ಚಿತ್ರದ ಮೂಲಕ ಸುಧಿ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರದಲ್ಲಿ ಅವರು ಕಟ್ಟಪ್ಪನಾಯಿಲೆ ಋತ್ವಿಕ್ ರೋಷನ್, ಕುಟ್ಟನಾಡನ್ ಮಾರ್ಪಪ್ಪ, ತೀಟ್ಟ ರಪ್ಪೈ, ವಕತಿರಿವು, ಅಂತರಾಷ್ಟ್ರೀಯಂ ಲೋಕಲ್ ಸ್ಟೋರಿ, ಎಸ್ಕೇಪ್, ಕೇಸು ಈ ವೀಡಿಂಟೆ ನಾಧನ್, ಎಸ್ಕೇಪ್, ಮತ್ತು ಸ್ವರ್ಗತೀಲೆ ಕಟ್ಟುರುಂಬು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಶಾಶ್ವತ ಅಪಾಯದ ವಲಯ: ಕೊಲ್ಲಂ ಸುಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಸ್ಥಳ ಶಾಶ್ವತ ಅಪಾಯಕಾರಿ ವಲಯವಾಗಿದೆ. ಕೈಪಮಂಗಲವು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಧಿ ಕಾರು ಅಪಘಾತವಾಗಿದೆ. ಇಲ್ಲಿ ವಾರದ ಹಿಂದೆ ಟ್ಯಾಂಕರ್​ ಮತ್ತು ಲಾರಿ ಡಿಕ್ಕು ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ರಸ್ತೆ ತಿರುವು ಇರುವುದು ಚಾಲಕರ ದೃಷ್ಟಿಗೆ ಗೋಚರಿಸದ ಕಾರಣ ಇಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತದೆ.

ಇದನ್ನೂ ಓದಿ:ಕರ್ನಾಟಕ ಮೂಲದ ಬಾಲಿವುಡ್​ ಹಿರಿಯ ನಟಿ ಸುಲೋಚನಾ ಲಾತ್ಕರ್​ ನಿಧನ

Last Updated : Jun 5, 2023, 11:07 AM IST

ABOUT THE AUTHOR

...view details