ಆಗ್ರಾ(ಉತ್ತರ ಪ್ರದೇಶ):ಮೈಕ್, ಪತಿನೆಟ್ಟಂ ಪಡಿ ಚಿತ್ರದಲ್ಲಿ ನಟಿಸಿ ಮಲೆಯಾಳಂ ಚಿತ್ರರಂಗದಲ್ಲಿ ಗುರುರುತಿಸಿಕೊಂಡ ಅಕ್ಷಯ್ ರಾಧಾಕೃಷ್ಣನ್ ತಮ್ಮ ನಾಯಿಯೊಂದಿಗೆ ಪ್ರವಾಸದಲ್ಲಿದ್ದಾರೆ. ಅವರ ವೆಳ್ಳಿಪ್ಪಮ್ ಎಂಬ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಅಕ್ಷಯ್ ರಾಧಾಕೃಷ್ಣನ್ ಅವರು ಶ್ವಾನ ಪ್ರೇಮಿಯಾಗಿದ್ದು, ಅವರ ಇತ್ತಿಚೆಗೆ ನಾಯಿಯ ಜೊತೆಗೆ ತಾಜ್ಮಹಲ್ನಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡದ ಹಿಟ್ ಸಿನಿಮಾ ಚಾರ್ಲಿ 777 ನಾಯಿ ಮತ್ತು ಧರ್ಮ ಎಂಬ ಪಾತ್ರದ ನಡುವೆ ಇದೆ. ಸಿನಿಮಾದಲ್ಲಿ ನಾಯಿಗೆ ಅನಾರೋಗ್ಯ ಇದ್ದು, ಅದರ ಕೊನೆ ಆಸೆ ಈಡೇರಿಸಲು ನಾಯಕ ಹಿಮಾಲಯಕ್ಕೆ ಪ್ರಯಾಣ ಬೆಳೆಸುತ್ತಾನೆ. ಆದರೆ, ಅಕ್ಷಯ್ ರಾಧಾಕೃಷ್ಣನ್ ತಮ್ಮ ಸ್ನೆಹಿತೆ ನೀರ್ಜಾ ಲೇಹ್-ಲಡಾಖ್ ಪ್ರವಾಸ ಬೆಳೆಸಿದ್ದು ನಾಯಿಯನ್ನು ಕರೆದೊಯ್ದಿದ್ದಾರೆ.