ಕರ್ನಾಟಕ

karnataka

ETV Bharat / entertainment

ಕೆ.ಡಿ ಧ್ರುವ ಸರ್ಜಾ ಜೊತೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ರೊಮ್ಯಾನ್ಸ್?​​ - ಆ್ಯಕ್ಷನ್ ಕ್ವೀನ್ ಮಾಲಾಶ್ರೀ

ಧ್ರುವ ಸರ್ಜಾ ಅವರ ಕೆ.ಡಿ ಚಿತ್ರಕ್ಕೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ರಾಧನಾ ರಾಮ್ ಅವರನ್ನು ನಾಯಕಿಯನ್ನಾಗಿಸೋ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Radhana ram entry to KD movie
ಧ್ರುವ ಸರ್ಜಾ ಜೊತೆ ರಾಧನಾ ರಾಮ್ ನಟನೆ

By

Published : Nov 15, 2022, 5:57 PM IST

ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಶನ್​ನಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕೆ.ಡಿ. ಕೆಲ ಸಮಯದ ಹಿಂದೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮಾಡುವ ಮೂಲಕ ಭಾರತೀಯ ಸಿನಿಮಾ ರಂಗದ ಬಾಕ್ಸ್ ಆಫೀಸ್​ನಲ್ಲಿ ಸುನಾಮಿ ಎಬ್ಬಿಸೋ ಮುನ್ಸೂಚನೆ ನೀಡಿತ್ತು ಚಿತ್ರತಂಡ.

ಧ್ರುವ ಸರ್ಜಾ ಲಾಂಗ್ ಹಿಡಿದು ಬೆಂಕಿ ನಡುವೆ ನಾನು ಪಕ್ಕಾ ಕೆಡಿ ಅಂತಾ ಅಬ್ಬರಿಸಿದ್ದರು. ಚಿತ್ರದ ಪೋಸ್ಟರ್ ಸಖತ್​ ಸದ್ದು ಮಾಡಿತ್ತು. ಅಂದಿನಿಂದ ಈ ಕೆ.ಡಿ ಗೆ ಜೊತೆಯಾಗೋ ಆ ಕಿಲಾಡಿ ಬೆಡಗಿ ಯಾರು ಅಂತಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿತ್ತು.

ನಿರ್ದೇಶಕ ಪ್ರೇಮ್ ಸಿನಿಮಾ ಅಂದ ಮೇಲೆ ನಿರೀಕ್ಷೆ ಹೆಚ್ಚೇ ಅಲ್ವಾ. ಕೆ.ಡಿ ಸಿನಿಮಾಗೆ ಪಕ್ಕಾ ಪ್ಯಾನ್ ಇಂಡಿಯಾ ನಟಿಯನ್ನೇ ಕರೆದುಕೊಂಡು ಬರುತ್ತಾರೆಂದು ಅಭಿಮಾನಿಗಳು ಊಹಿಸಿದ್ದರು. ಆದ್ರೆ ಪ್ರೇಮ್ ಕೊಟ್ಟ ಸರ್​ಪ್ರೈಸ್​ ಸಮಾಚಾರವೇ ಬೇರೆ. ಹೌದು, ಧ್ರುವ ಸರ್ಜಾ ಅವರ ಕೆ.ಡಿ ಚಿತ್ರಕ್ಕೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ರಾಧನಾ ರಾಮ್ ಅವರನ್ನು ನಾಯಕಿಯನ್ನಾಗಿಸೋ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮಾತುಕತೆ ಮುಗಿಸಿದ್ದು, ಫೈನಲ್ ಆಗೋ ಎಲ್ಲಾ ಸಾಧ್ಯತೆ ಇದೆ. ವಿಚಾರ ಪಕ್ಕಾ ಆದ್ರೆ ರಾಧಾನಾರಿಗೆ ಸ್ಯಾಂಡಲ್​​ವುಡ್​ನಲ್ಲಿ ಮತ್ತೊಂದು ಬಂಪರ್ ಪ್ರಾಜೆಕ್ಟ್​ ಇದಾಗಲಿದೆ.

ಧ್ರುವ ಸರ್ಜಾ ಜೊತೆ ರಾಧನಾ ರಾಮ್ ನಟನೆ

ಇದನ್ನೂ ಓದಿ:'ಸ್ವಾತಿ ಮುತ್ತಿನ ಮಳೆ ಹನಿಯೇ' ಶೂಟಿಂಗ್ ಕಂಪ್ಲೀಟ್

ಇನ್ನು ಕೆ.ಡಿ ಪ್ರಾಜೆಕ್ಟ್​​ ಆರಂಭಿಸೋಕು ಮುನ್ನ ದೇಶಾದ್ಯಂತ ಬಿಗ್ ಸ್ಟಾರ್​ಗಳನ್ನು ಭೇಟಿ ಮಾಡಿ ಬಂದಿರೋ ಪ್ರೇಮ್, ಕೆಜಿಎಫ್ ಅಧೀರನನ್ನು ಕರೆತಂದು ಸಿನಿಪ್ರಿಯರನ್ನು ಬೆರಗಾಗಿಸಿದ್ರು. ಈಗ ಆ್ಯಕ್ಷನ್ ಕ್ವೀನ್​ ಮಗಳನ್ನು ಚಿತ್ರನಾಯಕನ ಜೋಡಿಯಾಗಿಸುವ ಸೂಚನೆ ಕೊಟ್ಟು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಜಾಸ್ತಿ ಮಾಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾಗೆ ಮತ್ತೊಬ್ಬ ಸ್ಟಾರ್ ನಟನ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಲಕ್ಕಿ ಹೀರೋಯಿನ್ ಆಗಲಿದ್ದಾರೆ.

ABOUT THE AUTHOR

...view details