ಕರ್ನಾಟಕ

karnataka

ETV Bharat / entertainment

ಚೊಚ್ಚಲ ಚಿತ್ರದಲ್ಲೇ ಮಾಲಾಶ್ರೀ ಪುತ್ರಿಗೆ ಅದ್ಭುತ ಯಶಸ್ಸು: ವಿದೇಶದಲ್ಲಿ ಅಮ್ಮ-ಮಗಳ ಡ್ಯಾನ್ಸ್ - Aradhana Ram

ಹಿರಿಯ ನಟಿ ಮಾಲಾಶ್ರೀ, ಪುತ್ರಿ ಆರಾಧನಾ ರಾಮ್ ಪ್ಯಾರಿಸ್​​ನಲ್ಲಿ ಸಖತ್​ ಎಂಜಾಯ್​ ಮಾಡಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ.

Malashree Aradhana Ram
ಮಾಲಾಶ್ರೀ - ಆರಾಧನಾ ರಾಮ್

By ETV Bharat Karnataka Team

Published : Jan 2, 2024, 3:08 PM IST

ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಅಭಿನಯದ 'ಕಾಟೇರ' ಸಿನಿಮಾ ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ ಸಂಖ್ಯೆ ಕೂಡ ಹುಬ್ಬೇರಿಸುವಂತಿದೆ. ಚೊಚ್ಚಲ ಚಿತ್ರದಲ್ಲೇ ಮಾಲಾಶ್ರೀ ಪುತ್ರಿಗೆ ಅದ್ಭುತ ಯಶಸ್ಸು ಸಿಕ್ಕಿದೆ. ಶ್ರಮ, ಪ್ರತಿಭೆ, ಅಮೋಘ ಅಭಿನಯ, ಅದೃಷ್ಟ ಸೇರಿದಂತೆ ಓರ್ವ ನಟಿಗೆ ಬೇಕಾದ ಎಲ್ಲಾ ಅಂಶಗಳು ಆರಾಧನಾ ರಾಮ್ ಅವರಲ್ಲಿವೆ ಅಂತಾರೆ ಅಭಿಮಾನಿಗಳು.

ದಿ. ರಾಮು ಮತ್ತು ಹಿರಿಯ ನಟಿ ಮಾಲಾಶ್ರೀ ದಂಪತಿ ಪುತ್ರಿ ಆರಾಧನಾ ರಾಮ್ ನಟನೆಯ ಮೊದಲ ಸಿನಿಮಾವಿದು. ಚೊಚ್ಚಲ ಚಿತ್ರದಲ್ಲೇ ಸ್ಟಾರ್ ನಟನೊಂದಿಗೆ ನಟಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡರು. ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಜೊತೆ ಪ್ರಮುಖ ಪಾತ್ರದಲ್ಲಿ ಆರಾಧನಾ ರಾಮ್ ಕಾಣಿಸಿಕೊಂಡಿದ್ದು, ಇವರ ನಟನೆಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ತೆರೆಕಂಡ ದಿನ ತಾಯಿ ಮಗಳಿಬ್ಬರೂ ಈ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಇದೀಗ ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಿ ಗಮನ ಸೆಳೆದಿದ್ದಾರೆ.

ಹೌದು, ಹಿರಿಯ ನಟಿ ಮಾಲಾಶ್ರೀ ಮತ್ತು ನಟಿ ಆರಾಧನಾ ರಾಮ್ ತಮ್ಮ ಮೆಚ್ಚಿನ ತಾಣವಾಗಿಯೋ ಪ್ಯಾರಿಸ್​ನಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಇಬ್ಬರೂ ಡ್ಯಾನ್ಸ್ ಮಾಡಿ, ಅಭಿಮಾನಿಗಳಿಗೆ ಶುಭ ಕೋರಿರುವ ವಿಡಿಯೋವನ್ನು ಆರಾಧನಾ ರಾಮ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ವಿದೇಶದಲ್ಲಿ ಅಮ್ಮ-ಮಗಳು ಸಖತ್​ ಎಂಜಾಯ್​ ಮಾಡಿದ್ದು, ಈ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:'ಕಾಟೇರ' ಪೈರಸಿ ಮಾಡಿದರೆ ಸ್ಪೆಷಲ್‌ ಟ್ರೀಟ್‌ಮೆಂಟ್: ನಟ ದರ್ಶನ್ ಎಚ್ಚರಿಕೆ

ತಾಯಿ ಜೊತೆಗಿನ ಸುಂದರ ವಿಡಿಯೋ ಹಂಚಿಕೊಂಡ ನಟಿ ಆರಾಧನಾ ರಾಮ್, ''ಹೊಸ ವರ್ಷ ಪವಾಡ, ಸಂತೋಷಗಳಿಂದ ತುಂಬಿರಲಿ. 2024ರಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಸಂತೋಷ, ಯಶಸ್ಸು ಮತ್ತು ಸಮೃದ್ಧಿಯಿಂದ ತುಂಬಿದ ವರ್ಷ ನಿಮ್ಮದಾಗಲಿ ಎಂದು ಬಯಸುತ್ತೇನೆ. ಹೊಸ ವರ್ಷದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ಲಿಯೋ' ಮೀರಿಸಿದ 'ಸಲಾರ್'​; ಜೈಲರ್, ಬಾಹುಬಲಿ ದಾಖಲೆ ಮುರಿಯಲು ಸಜ್ಜು

'ಕಾಟೇರ' ಸಿನಿಮಾ ತೆರೆಕಂಡ ದಿನ ಮಗಳೊಂದಿಗೆ ಸಿನಿಮಾ ವೀಕ್ಷಿಸಿ, ಮಾಧ್ಯಮದವರ ಜೊತೆ ಮಾಲಾಶ್ರೀ ಮಾತನಾಡಿದ್ದರು. ಮೊದಲ ಚಿತ್ರವೇ ಇಷ್ಟು ದೊಡ್ಡ ಮಟ್ಟದಾಗಿದ್ದು, ಮಗಳಿಗೆ ಪವರ್​ಫುಲ್​ ರೋಲ್​ ಸಿಕ್ಕಿದ್ದು ಬಹಳ ಖುಷಿಯ ವಿಚಾರ. ಮಗಳು ದೊಡ್ಡ ಮಟ್ಟದ ಸಿನಿಮಾ ಮಾಡಬೇಕು ಎಂಬ ಆಸೆ ನನಗೆ ಮತ್ತು ರಾಮು ಅವರಿಗೆ ಇತ್ತು. ನಮ್ಮ ಕನಸು ನನಸಾಗಿದ್ದು, ಬಹಳ ಹೆಮ್ಮೆಯ ಕ್ಷಣ ಎಂದು ತಿಳಿಸಿದ್ದರು. ತಂದೆಯ ಆಶೀರ್ವಾದದಿಂದ ಇದು ಸಾಧ್ಯವಾಯಿತು. ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಎಂದು ನಟಿ ಆರಾಧನಾ ರಾಮ್ ಸಂತಸ ವ್ಯಕ್ತಪಡಿಸಿದ್ದರು.

ABOUT THE AUTHOR

...view details