ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಪ್ರತಿ ಬಾರಿಯೂ ತಮ್ಮ ಫ್ಯಾಷನ್ ಸೆನ್ಸ್ನಿಂದ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲರಾಗುವುದಿಲ್ಲ. ಬೆಡಗು ಬಿನ್ನಾಣ ಪ್ರದರ್ಶನದಲ್ಲಿ ಈ ತಾರೆ ಸದಾ ಮುಂದು. ಅವರು ತೊಡುವ ಪ್ರತಿ ವಸ್ತ್ರವೂ ವಿಭಿನ್ನ. ಅದು ಗೌನ್, ಏರ್ಪೋರ್ಟ್ ಲುಕ್ ಅಥವಾ ಸೊಗಸಾದ ಸಾಂಪ್ರದಾಯಿಕ ಉಡುಗೆ ಯಾವುದೇ ಇರಲಿ ಅಂದಚಂದ ಪ್ರದರ್ಶನದಲ್ಲಿ ಸದಾ ಮುಂದು. ಇವರು ತೊಡುವ ಉಡುಗೆ ಟ್ರೆಂಡ್ ಕೂಡ ಆಗುತ್ತೆ.
ಇತ್ತೀಚೆಗೆ ದುಬೈನಲ್ಲಿ ಈವೆಂಟ್ ಒಂದರಲ್ಲಿ ನಟಿ ಮಲೈಕಾ ಅರೋರಾ ಭಾಗಿ ಆಗಿದ್ದರು. ಬಾಲಿವುಡ್ ಬೆಡಗಿ ಎಂದಿನಂತೆ ಈ ಕಾರ್ಯಕ್ರಮದಲ್ಲೂ ಬಹಳ ಆಕರ್ಷಕವಾಗಿ ಕಾಣುತ್ತಿದ್ದರು. ಈ ಸಂದರ್ಭದಲ್ಲಿ, ಅಭಿಮಾನಿಗಳು ಸೆಲ್ಫಿಗಾಗಿ ನಟಿಯನ್ನು ಸುತ್ತುವರೆದರು. ಮಲೈಕಾ ಅವರ ಭದ್ರತಾ ತಂಡವು ಅಭಿಮಾನಿಗಳನ್ನು ದೂರ ಸರಿಸುತ್ತಿರುವುದು ಕಂಡು ಬಂದಿತು. ಆ ವೇಳೆ ನಟಿ ಪರಿಸ್ಥಿತಿ ನಿಭಾಯಿಸಿದ ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಂಪಾದಿಸಿದೆ.
ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಅಭಿಮಾನಿಗಳ ಗುಂಪೊಂದು ಮಲೈಕಾ ಅರೋರಾ ಜೊತೆ ಸೆಲ್ಫಿಗೆ ವಿನಂತಿಸುತ್ತಿರುವುದು ಕಂಡುಬಂದಿದೆ. ಬಾಲಿವುಡ್ ಬ್ಯೂಟಿ ತಮ್ಮ ಅಭಿಮಾನಿಗಳಿಗಾಗಿ ಕೆಲ ಸಮಯ ಮೀಸಲಿಟ್ಟರು. ಆ ಸಂದರ್ಭ ಭದ್ರತಾ ಸಿಬ್ಬಂದಿ ನಟಿಯ ರಕ್ಷಣೆ ದೃಷ್ಟಿಯಿಂದ ಅಭಿಮಾನಿಗಳನ್ನು ದೂರ ಸರಿಸುತ್ತಿರುವುದು ಕಂಡು ಬಂದಿದೆ. ಆದರೆ, ಅಭಿಮಾನಿಗಳನ್ನು ತಳ್ಳದಂತೆ ಭದ್ರತಾ ಸಿಬ್ಬಂದಿಗೆ ಮಲೈಕಾ ಅರೋರಾ ಮನವಿ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ದುಬೈನಲ್ಲಿ ನಡೆದ ಈವೆಂಟ್‌ನಲ್ಲಿ ನಟಿ ಮಲೈಕಾ ಅರೋರಾ ಅವರು ಬ್ಲ್ಯಾಕ್ ಬ್ಯಾಕ್ ಲೆಸ್ ಫಿಶ್ ಕಟ್ ಗೌನ್ ಧರಿಸಿದ್ದರು. 49ರ ಈ ಹರೆಯದಲ್ಲೂ ಯುವತಿಯರೂ ನಾಚುವಂತಹ ಸೌಂದರ್ಯ, ಮನಮೋಹಕ ನೋಟ. ಫಿಟ್ನೆಸ್ ಐಕಾನ್ಗೆ ಅಭಿಮಾನಿಗಳು ಫಿದಾ. ತೆರೆದ ಕೂಡಲು, ಡಾರ್ಕ್ ಲಿಪ್ಸ್ಟಿಕ್, ಎಲ್ಲವೂ ಚೆಲುವೆಯ ನೋಟವನ್ನು ಬೆರಗುಗೊಳಿಸುವಂತಿತ್ತು. ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾದರು.