ಹೈದರಾಬಾದ್: 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಜಾಯ್ಸ್ ಅರೋರಾ ಅವರಿಗೆ ಪುತ್ರಿ, ಬಾಲಿವುಡ್ ನಟಿ ಮಲೈಕಾ ಅರೋರಾ ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಕುಟುಂಬದ ಸದಸ್ಯರಿರುವ ಕೆಲವು ಫೋಟೊವನ್ನು ಥ್ರೋಬ್ಯಾಕ್ನಲ್ಲಿ ಹಂಚಿಕೊಳ್ಳುವ ಮೂಲಕ ತಾಯಿ ಜಾಯ್ಸ್ ಅರೋರಾ ಅವರಿಗೆ ಮಲೈಕಾ ವಿಶ್ ಮಾಡಿದ್ದಾರೆ.
ಮಲೈಕಾ ಅವರ ಸಹೋದರಿ ಅಮೃತಾ ಅರೋರಾ ಕೂಡ ಥ್ರೋಬ್ಯಾಕ್ ಸೇರಿದಂತೆ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಾಯಿಗೆ ಶುಭಾಶಯ ತಿಳಿಸಿದ್ದಾರೆ. ಮಲೈಕಾ ಮತ್ತು ಅಮೃತಾ ಅವರ ಆತ್ಮೀಯ ಸ್ನೇಹಿತೆಯೂ ಆಗಿರುವ ಕರೀನಾ ಕಪೂರ್ ಕೂಡ ಜಾಯ್ಸ್ ಅರೋರಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಇಂದು ನನ್ನ ತಾಯಿಯ ಜನ್ಮದಿನ. ನನ್ನ ತುಂಬಿದ ಮನಸ್ಸಿನಿಂದ ನಿಮಗೆ ಶುಭಾಶಯಗಳು. ಇಂದಿನ ಈ ಖುಷಿ ಘಳಿಗೆಯನ್ನು ನನಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಲೈಕಾ ಅರೋರಾ ಫೋಟೋಗಳಿಗೆ ಶೀರ್ಷಿಕೆ ಹಾಕಿದ್ದಾರೆ. ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು, ಸ್ನೇಹಿತರು ಕಾಮೆಂಟ್ ಮಾಡಿದ್ದಾರೆ.
ನಟ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರೀತಿಯ ಜಾಯ್ಸ್ ಅರೋರಾ ಅವರಿಗೆ ಜನ್ಮದಿನದ ಶುಭಾಶಯಗಳು. ಆರೋಗ್ಯಕರ ಜೀವನ ನಿಮ್ಮದಾಗಿರಲಿ ಎಂದು ಹರಸಿ ಕಾಮೆಂಟ್ ಮಾಡಿದ್ದಾರೆ. ಜನ್ಮದಿನದ ಶುಭಾಶಯಗಳು ಜಾಯ್ಸ್ ಚಿಕ್ಕಮ್ಮ ಎಂದು ನಟಿ ಸೋಫಿ ಚೌಧರಿ ಕೂಡ ವಿಶ್ ಮಾಡಿದ್ದಾರೆ.
ಮಲೈಕಾ ಸಹೋದರಿ ಅಮೃತಾ ಅರೋರಾ ಕೂಡ ತಾಯಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಾ ನಿಮ್ಮಂತ ತಾಯಿಯನ್ನು ಪಡೆದಿರುವುಕ್ಕೆ ನಾನೇ ಪುಣ್ಯವಂತೆ. ಇದೊಂದೇ ಜನುಮವಲ್ಲ, ಬರುವ ಜನ್ಮದಲ್ಲಿಯೂ ನೀವೇ ನನ್ನ ತಾಯಿಯಾಗಬೇಕೆಂದು ಆ ದೇವರಲ್ಲಿ ಬೇಡಿಕೊಳ್ಳುವೆ ಎಂದು ಭಾವನಾತ್ಮಕ ಶೀರ್ಷಿಕೆ ಹಾಕಿದ್ದಾರೆ.
49 ವರ್ಷದ ಮಲೈಕಾ ಅರೋರಾ ಬಾಲಿವುಡ್ನ ಹಲವು ಚಿತ್ರಗಳ ವಿಶೇಷ ಹಾಡುಗಳಿಗೆ ಸೊಂಟ ಬಳುಕಿಸಿದವರು. ಫಿಟ್ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಈ ಬೆಡಗಿ, ಬಾಲಿವುಡ್ನ ಹಲವು ನಟಿ-ನಟಿಯರಿಗೆ ಮಾದರಿ ಕೂಡ ಹೌದು. ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ. ಸದ್ಯ ತಾರೆಯು ಬಾಲಿವುಡ್ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದು ತಮ್ಮಿಬ್ಬರ ಜೋಡಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕವೂ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.
ಇದನ್ನೂ ಓದಿ:ಮಾಜಿ ವಿಶ್ವ ಸುಂದರಿಗೆ ಹೃದಯಾಘಾತ.. ಎರಡು ದಿನಗಳ ಬಳಿಕ ಬಹಿರಂಗಪಡಿಸಿದ ನಟಿ ಸುಶ್ಮಿತಾ ಸೇನ್