ಕರ್ನಾಟಕ

karnataka

ETV Bharat / entertainment

ಮಲೈಕಾ ಅರೋರಾ ಜೊತೆಗೆ ಹೆಜ್ಜೆ ಹಾಕಿದ ಪುತ್ರ ಅರ್ಹಾನ್ ಖಾನ್: ನೆಟ್ಟಿಗರಿಗೆ ಪ್ರತಿಕ್ರಿಯೆ ಹೀಗಿದೆ ನೋಡಿ... - ಇನಸ್ಟಾಗ್ರಾಮ್​

ಬುಧವಾರ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮಲೈಕಾ ಅರೋರಾ ತನ್ನ ಮಗ ಅರ್ಹಾನ್ ಖಾನ್ ಜೊತೆ ಕಾಣಿಸಿಕೊಂಡಿದ್ದಾಳೆ. ತಾಯಿ-ಮಗ ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕಿದ ವೇಳೆಯಲ್ಲಿ, ಮಲೈಕಾ ಅರೋರಾ ಅವರು ಅಥ್ಲೀಸರ್ ಉಡುಗೆಯಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದರು.

Malaika Arora with son Arhaan Khan
ಮಲೈಕಾ ಅರೋರಾ ಜೊತೆ ಹೆಜ್ಜೆ ಹಾಕಿದ ಅರ್ಹಾನ್ ಖಾನ್

By

Published : May 10, 2023, 7:24 PM IST

ಹೈದರಾಬಾದ್:ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ತಮ್ಮ ಮಗ ಅರ್ಹಾನ್ ಖಾನ್ ಅವರೊಂದಿಗೆ ಮುಂಬೈನ ಬಾಂದ್ರಾದಲ್ಲಿ ಬುಧವಾರ ಕಾಣಿಸಿಕೊಂಡರು. ತಾಯಿ-ಮಗ ಇಬ್ಬರೂ ತಮ್ಮ ವಿಶಿಷ್ಟ ಉಡುಗೆಯಲ್ಲಿ ಕಾಣಿಸಿಕೊಂಡರು. ಮಲೈಕಾ ಮತ್ತು ಅವರ 20 ವರ್ಷದ ಮಗ ಅರ್ಬಾಜ್ ಖಾನ್ ಆಕರ್ಷಕ ನೋಟದ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿಚ್ಛೇದನಕ್ಕಿಂತಲೂ ಹೆಚ್ಚು ನೋವಾಗಿದ್ದು ನನ್ನ ಹೆಸರು ಬೇರೆಯವರೊಂದಿಗೆ ತಳುಕು ಹಾಕಿದಾಗ; ನಾಗ ಚೈತನ್ಯ

ಇನಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?:ಇನಸ್ಟಾಗ್ರಾಮ್​ನಲ್ಲಿ ಪಾಪರಾಜಿ ಖಾತೆಯಿಂದ ತಾಯಿ ಹಾಗೂ ಪುತ್ರನ ಜೋಡಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಮಲೈಕಾ ಬಿಳಿ ಟಾಪ್ ಮತ್ತು ಕಪ್ಪು ಯೋಗ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು. ಮತ್ತೊಂದೆಡೆ, ಅವಳ ಮಗ ಕಪ್ಪು ಬಣ್ಣದ ಉಡುಪಿನಲ್ಲಿ ಕಪ್ಪಾಗಿ ಕಾಣುತ್ತಿದ್ದನು. ಮಲೈಕಾ ಹಾಗೂ ಅವರ 20 ವರ್ಷದ ಮಗ ಅರ್ಹಾನ್ ಖಾನ್ ಆಕರ್ಷಕ ನೋಟಕ್ಕೆ ನೆಟ್ಟಿಗರು ಹೀಗೆ ಪ್ರತಿಕ್ರಿಯಿಸಿದ್ದಾರೆ.. ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಾಮೆಂಟ್​ಗಳು ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಹೃದಯ, ಕಣ್ಣುಗಳು ಮತ್ತು ಕೆಂಪು ಹೃದಯದ ಎಮೋಜಿಗಳನ್ನು ಸಮೇತ ಕಾಮೆಂಟ್​ ಮಾಡಿದರು. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಇನ್​​ಸ್ಟಾಗ್ರಾಂ ಬಳಕೆದಾರರು, "ಲಡ್ಕಾ ಬಡಾ ಹ್ಯಾಂಡ್ಸಮ್ ಹೈ ಅಚ್ಚಾ ಲಗ್ತಾ ಹೈ'' (ಹುಡುಗ ತುಂಬಾ ಸುಂದರವಾಗಿದ್ದಾನೆ, ನೋಡಲು ಚೆನ್ನಾಗಿ ಕಾಣುತ್ತಾನೆ)" ಎಂದು ಕಾಮೆಂಟ್ ಮಾಡಿದ್ದಾರೆ. "ತುಂಬಾ ಚೆನ್ನಾಗಿದೆ, ಸುಂದರ ತಾಯಿ ಮತ್ತು ಸುಂದರ ಮಗ" ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ಪರ್ಫೆಕ್ಟ್​ ಮಾರ್ನಿಂಗ್​ ಶುರುವಾಗುವುದೇ ಹೀಗಂತೆ!

ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳಿಸುತ್ತಿರುವ ಮಾಜಿ ದಂಪತಿ:ಅವರ ವಿಚ್ಛೇಧನ ನಂತರವೂ, ಮಲೈಕಾ ಮತ್ತು ಅರ್ಬಾಜ್ ತಮ್ಮ ಮಗ ಅರ್ಹಾನ್‌ನೊಂದಿಗೆ ಸಹ - ಪೋಷಕರಾಗಿ ಮುಂದುವರಿಯುತ್ತಾರೆ. ಆಗಾಗ್ಗೆ ಪುತ್ರನೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಓದುತ್ತಿರುವ ಅರ್ಹಾನ್‌ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲು ಹಾಗೂ ಡ್ರಾಪ್ ಮಾಡಲು ಮಾಜಿ ದಂಪತಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ:ದಿ ಎಲಿಫೆಂಟ್ ವಿಸ್ಪರರ್ಸ್​ನ ಆಸ್ಕರ್​ ವಿಜೇತ ದಂಪತಿ ಬೊಮ್ಮನ್ ಬೆಳ್ಳಿ ಗೌರವಿಸಿದ ಸಿಎಸ್​​ಕೆ

ಅರ್ಬಾಜ್‌ನಿಂದ ಬೇರ್ಪಟ್ಟ ನಂತರ, ಮಲೈಕಾ ಪ್ರಸ್ತುತ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆಕೆ ಆಗಾಗ್ಗೆ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅರ್ಜುನ್‌ನೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅರ್ಬಾಜ್ ಖಾನ್ ಮಾಡೆಲ್, ನಟಿ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಆದರೆ, ಮಲೈಕಾ ಮತ್ತು ಅರ್ಬಾಜ್ ದಂಪತಿ 2022ರಲ್ಲಿ ಬೇರ್ಪಟ್ಟರು.

ಇದನ್ನೂ ಓದಿ:ಕರ್ನಾಟಕ ಎಲೆಕ್ಷನ್​: ಡಾಲಿ ಧನಂಜಯ್, ರಿಷಬ್​ ಶೆಟ್ಟಿ ಮತದಾನ

ಇದನ್ನೂ ಓದಿ:ಮತ ಚಲಾಯಿಸಿದ ರಾಕಿಭಾಯ್​: ಸಿನಿಮಾ, ರಾಜಕೀಯ, ಪ್ರಚಾರದ ಬಗ್ಗೆ ಯಶ್​ ಮನದಾಳದ ಮಾತು

ABOUT THE AUTHOR

...view details