ಕರ್ನಾಟಕ

karnataka

ETV Bharat / entertainment

ಮಗನಿಗೆ ಮಲೈಕಾ ಪ್ರೀತಿಯ ಅಪ್ಪುಗೆ; ಪಾಪ್​ಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ದೃಶ್ಯ - etv bharat kannada

Malaika Arora and son Arhaan Khan: ಗುರುವಾರ ರಾತ್ರಿ ಮಲೈಕಾ ಅರೋರಾ ಜೊತೆ ಅರ್ಹಾನ್​ ಖಾನ್​ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

Malaika Arora
ಮಗನಿಗೆ ಮಲೈಕಾ ಅರೋರಾ ಪ್ರೀತಿಯ ಅಪ್ಪುಗೆ

By ETV Bharat Karnataka Team

Published : Sep 1, 2023, 3:46 PM IST

ಬಾಲಿವುಡ್​ ಮಾಜಿ ದಂಪತಿ ಮಲೈಕಾ ಅರೋರಾ ಮತ್ತು ಅರ್ಬಾಜ್​ ಖಾನ್​ ಅವರ ಪುತ್ರ ಅರ್ಹಾನ್​ ಖಾನ್​ ಆಗಾಗ ತಮ್ಮ ಹೆತ್ತವರೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಕಳೆದ ಎರಡು ವಾರಗಳಲ್ಲಿ ಅರ್ಹಾನ್​​ ತಮ್ಮ ತಾಯಿಯೊಂದಿಗೆ ಮುಂಬೈನಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದರು. ಇದೀಗ ಗುರುವಾರ ರಾತ್ರಿ ಮತ್ತೆ ಮಲೈಕಾ ಅರೋರಾ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಮಗ ತಾಯಿಗೆ ವಿದಾಯ ಹೇಳುತ್ತಿದ್ದಂತೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಸ್ಟಾರ್​ ಕಿಡ್​ ತಮ್ಮ ಮುಂದಿನ ಅಧ್ಯಯನಕ್ಕಾಗಿ ಯುಎಸ್​ಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಮಲೈಕಾ ಅರೋರಾ ಮತ್ತು ಅರ್ಹಾನ್​ ಖಾನ್​ ಕಾಣಿಸಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ ಮಲೈಕಾ ತಮ್ಮ ಮಗನಿಗೆ ಬೆಚ್ಚಗಿನ ಅಪ್ಪುಗೆಯನ್ನು ನೀಡುವುದನ್ನು ಮತ್ತು ಅರ್ಹಾನ್​ ಹೊರಡುವುದಕ್ಕೂ ಮುನ್ನ ವಿದಾಯ ಹೇಳುತ್ತಿರುವುದನ್ನು ಕಾಣಬಹುದು.

ಏರ್​ಪೋರ್ಟ್​ ನೋಟದಲ್ಲಿ ಮಲೈಕಾ ಅರೋರಾ ಬ್ಲ್ಯಾಕ್​ ಲಾಂಗ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಕೂದಲನ್ನು ಪೋನಿಟೇಲ್​ ಕಟ್ಟಿ ನೋಡುಗರನ್ನು ಆಕರ್ಷಿಸಿದರು. ಮತ್ತೊಂದೆಡೆ, ಅರ್ಹಾನ್​ ಮ್ಯಾಚಿಂಗ್​ ಟ್ರ್ಯಾಕ್​ ಪ್ಯಾಂಟ್​ ಮತ್ತು ಕ್ಯಾಪ್​ ಹೊಂದಿರುವ ಕಪ್ಪು ಸ್ವೆಟ್​ ಶರ್ಟ್​ ಧರಿಸಿದ್ದರು. ತಾಯಿ ಮತ್ತು ಮಗನ ಪ್ರೀತಿಯ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಈ ಹಿಂದೆ ವೆಬ್​ಲಾಯ್ಡ್​ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಬಾಜ್​ ಖಾನ್​, ತನ್ನ ಮಗ ಯುಎಸ್​ನ ಲಾಂಗ್​ ಐಲ್ಯಾಂಡ್​ ಫಿಲ್ಮ್​ ಸ್ಕೂಲ್​ನಲ್ಲಿ ಫಿಲ್ಮ್​ಮೇಕಿಂಗ್​ ಅಧ್ಯಯನ ಮಾಡುತ್ತಿದ್ದಾನೆ ಎಂದು ತಿಳಿಸಿದ್ದರು. ಕರಣ್​ ಜೋಹರ್​ ಅವರ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದಲ್ಲಿ ಅರ್ಹಾನ್​ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಅರ್ಜುನ್​ ಕಪೂರ್​ ಹುಟ್ಟುಹಬ್ಬ ಆಚರಿಸಲು ಗೆಳೆಯನ ಮನೆಗೆ ಬಂದ ನಟಿ ಮಲೈಕಾ ಅರೋರಾ

ಮಲೈಕಾ ಅರೋರಾ ಮತ್ತು ಅರ್ಬಾಜ್​ ಖಾನ್​ 1998 ರಲ್ಲಿ ಮದುವೆಯಾದರು. ಅವರಿಬ್ಬರ ಪ್ರತ್ಯೇಕತೆಯ ವದಂತಿಗಳು 2016ರ ಮಾರ್ಚ್​ ತಿಂಗಳಿನಿಂದ ಪ್ರಾರಂಭವಾಯಿತು. 2017 ರಲ್ಲಿ ಇವರಿಬ್ಬರು ಅಧಿಕೃತವಾಗಿ ವಿಚ್ಛೇದನ ಪಡೆದರು. ಅದಾಗ್ಯೂ ತಮ್ಮ ಮಗ ಅರ್ಹಾನ್​ ಖಾನ್​ಗೆ ಪೋಷಕರಾಗಿ ಮುಂದುವರೆಯುತ್ತಿದ್ದಾರೆ.

ಮಲೈಕಾ ಅರೋರಾ ಬಗ್ಗೆ..:ಮಲೈಕಾ ಅರೋರಾ ಫಿಟ್ನೆಸ್​ ಮತ್ತು ಫ್ಯಾಷನ್​ಗೆ ಫೇಮಸ್​. ಇವರು ತಮ್ಮ ಆರೋಗ್ಯಕರ ಜೀವನಶೈಲಿ ಮತ್ತು ಎಕ್ಸ್ಟ್ರಾಡಿನರಿ ಫ್ಯಾಷನ್​ ಆಯ್ಕೆಗಳಿಗಾಗಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. 49 ವರ್ಷದ ಈ ನಟಿ ತಮ್ಮದೇ ಫಿಟ್ನೆಸ್​ ಸ್ಟುಡಿಯೋ ಹೊಂದಿದ್ದು, ಫುಡ್​ ಡೆಲಿವರ್​ ಸರ್ವಿಸ್​ ನ್ಯೂಡ್​ ಬೌಲ್​ ಅನ್ನು ಕೂಡ ನಿರ್ವಹಿಸುತ್ತಿದ್ದಾರೆ. ಜೊತೆಗೆ ದಿ ಲೇಬಲ್​ ಲೈಫ್​ ಕ್ಲಾತ್​ ಬ್ರಾಂಡ್​ನ ಸ್ಟೈಲ್​ ಎಡಿಟರ್​ ಕೂಡ ಆಗಿದ್ದಾರೆ.

ಅವರು ಸೋಷಿಯಲ್​ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಹೆಚ್ಚು ಸನಿಹವಾಗಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಫ್ಯಾನ್ಸ್​ ಕೂಡ ಹೆಚ್ಚಿನದಕ್ಕಾಗಿ ಹಂಬಲಿಸುತ್ತಾರೆ. ಅವರ ಮನಮೋಹಕ ಜೀವನದ ಮುಂದಿನ ನೋಟಕ್ಕಾಗಿ ನಿರೀಕ್ಷಿಸುತ್ತಾರೆ. ನಟಿ ಮಲೈಕಾ ಅರೋರಾ, ಅರ್ಬಾಜ್​ ಖಾನ್ ಅವರೊಂದಿಗಿನ ವಿಚ್ಛೇದನ ಬಳಿಕ ನಟ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದಾರೆ. ​

ಇದನ್ನೂ ಓದಿ:ಬ್ರೇಕಪ್ ವದಂತಿ: ಊಹಾಪೋಹಗಳಿಗೆ ತೆರೆ ಎಳೆದ ಮಲೈಕಾ - ಅರ್ಜುನ್

ABOUT THE AUTHOR

...view details