ಹೈದರಾಬಾದ್:ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರು ಮೇಕಪ್ ಕಲಾವಿದೆ ಶುರಾ ಖಾನ್ ಜೊತೆಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಭಾಗವಹಿಸಿರದ ಮಲೈಕಾ ಅರೋರಾ, ಮಾಜಿ ಪತಿಯ ಮದುವೆ ನಂತರ ಸೋಶಿಯಲ್ ಮೀಡಿಯಾದಲ್ಲಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ. ಮಧ್ಯರಾತ್ರಿ ಸ್ನೇಹಿತರೊಂದಿಗೆ ಅವರು ಕ್ರಿಸ್‌ಮಸ್ ಹಬ್ಬ ಆಚರಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 18.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮಲೈಕಾ ಅರೋರಾ, ತಮ್ಮ ಅಭಿಮಾನಿಗಳಿಗೆ ಕೇಕ್ ಹಿಡಿದಿರುವ ಫೋಟೋ ಜೊತೆಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅರ್ಬಾಜ್ ಖಾನ್ ಮದುವೆಯಲ್ಲಿ ಮಗ ಅರ್ಹಾನ್ ಖಾನ್ ಭಾಗವಹಿಸಿದ್ದರು.
ಹಬ್ಬದ ಉಡುಗೆಯಲ್ಲಿದ್ದ ಅರೋರಾ, ಕೇಕ್ ಹಿಡಿದು ನಿಂತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. "ಮೆರಿ ಕ್ರಿಸ್‌ಮಸ್" ಎಂಬ ಶೀರ್ಷಿಕೆಯೊಂದಿಗೆ ಬೆಚ್ಚಗಿನ ಶುಭಾಶಯಗಳನ್ನು ಹೇಳಿದ್ದಾರೆ. ಬಿಳಿ ಬಣ್ಣದ ಚಿಕ್ಕ ಉಡುಗೆ ಧರಿಸಿದ್ದರು. ಕ್ರಿಸ್‌ಮಸ್ ಥೀಮ್ಗೆ ತಕ್ಕಂತೆ ಕೆಂಪು ಹೇರ್ಬ್ಯಾಂಡ್ಗಳನ್ನು ತಮ್ಮ ಸ್ಟೈಲಿಶ್ ಪೋನಿಟೇಲ್ಗೆ ಕಟ್ಟಿಕೊಂಡಿದ್ದಾರೆ. ಉಳಿದ ಫೋಟೋಗಳಲ್ಲಿ ಹಬ್ಬಕ್ಕೆ ತಿಂಡಿಗಳನ್ನು ಜೋಡಿಸಿಟ್ಟಿರುವ ಡೈನಿಂಗ್ ಟೇಬಲ್, ಹಬ್ಬದ ಅಲಂಕಾರ, ಮಗ ಅರ್ಹಾನ್ ಖಾನ್ ಮನೆಯ ನಾಯಿಯೊಂದಿಗೆ ಆಡುತ್ತಿರುವುದು ಇದೆ.