ಹೈದ್ರಾಬಾದ್: 90ರ ದಶಕದಲ್ಲಿ 'ದಿಲ್ ಸೆ' ಚಿತ್ರದ 'ಚೆಯ್ಯ ಚೆಯ್ಯ' ಹಾಡಿನಲ್ಲಿ ಕುಣಿದು ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದ ನಟಿ ಮಲೈಕಾ ಅರೋರಾ, ಈ ಹಾಡು ತೆರೆಕಂಡು 20 ದಶಕಗಳಿಗೂ ಹೆಚ್ಚು ಸಮಯವಾದರೂ ಅದೇ ಚಾರ್ಮ್ ಅನ್ನು ಈ ನಟಿ ಉಳಿಸಿಕೊಂಡಿದ್ದಾರೆ. ನಿಜ ಹೇಳಬೇಕು ಎಂದರೆ, ವಯಸ್ಸಾದಂತೆ ನಟಿ ಮಲೈಕಾಗೆ ಯೌವನ ಮರಳುತ್ತಿದೆ. ಅದಕ್ಕೆ ಸಾಕ್ಷಿಯಂತಿದೆ ಗುರು ರಾಂಧವಾ ಜೊತೆಗಿನ 'ತೆರಾ ಕಿ ಖಯಾಲ್'ನ ಹಾಡು. ಕಳೆದ ವಾರ ಬಿಡುಗಡೆಯಾದ ಈ ಹಾಡು ಈಗಾಗಲೇ ಅನೇಕ ಮಂದಿಯನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದು, ಈಗಾಗಲೇ 12 ಲಕ್ಷ ವೀಕ್ಷಣೆ ಪಡೆದಿದೆ. ಟಿ ಸೀರಿಸ್ ಯೂಟ್ಯೂಬ್ ಚಾನಲ್ನಲ್ಲಿ ಸದ್ದು ಮಾಡುತ್ತಿರುವ ಈ ಹಾಡಿನಲ್ಲಿ ನೋಡುಗರನ್ನು ಮೋಡಿ ಮಾಡುವಂತೆ ನಡು ಬಳುಕಿಸಿದ್ದಾರೆ ನಟಿ ಮಲೈಕಾ. ಇದೇ ವೇಳೆ ಅನೇಕರಿಂದ ಟೀಕೆಗೆ ಒಳಗಾಗಿದ್ದಾರೆ ಈ ನಟಿ. ಕಾರಣ ಅವರ ವಯಸ್ಸು.
ಹಾಡಿನ ಯಶಸ್ಸಿನ ಬೆನ್ನಲ್ಲೇ ಬುಧವಾರ ನಟಿ ಮಲೈಕಾ, 'ತೆರಾ ಕಿ ಖಯಾಲ್' ಹಾಡಿನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುರು ರಾಂಧವ ಜೊತೆಗಿನ ಈ ಫೋಟೋ ಡಬ್ ಮಾಡಿ ಹಲವರ ಗಮನ ಸೆಳೆದಿದ್ದಾರೆ.
ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅನೇಕ ನೆಟಿಜನ್ಗಳು ಆಕೆಯನ್ನು ಟ್ರೋಲ್ ಮಾಡಿ, ಕೆಂಗಣ್ಣು ಬೀರಿದ್ದಾರೆ. ವಯಸ್ಸಿಗೆ ಮೀರಿ ಹಾಟ್ ಹಾಕಿ ಕಾಣಿಸಿಕೊಂಡು ನೃತ್ಯ ಮಾಡಿದ್ದಕ್ಕೆ ಅನೇಕ ಮಂದಿ ಆಕೆಯ ವಯಸ್ಸನ್ನು ಪರಿಗಣನೆ ಮಾಡಿ ಟೀಕಿಸಿದ್ದಾರೆ. 49 ವರ್ಷ ವಯಸ್ಸಾದರೂ ಇನ್ನು 20ರ ಚೆಲುವೆಯಂತೆ ಬಳಕುತ್ತಿರುವ ನಟಿಗೆ, ಯಾರಿಗೆ ಗೊತ್ತು ಮುನ್ನಿ ಎಷ್ಟು ದಿನಗಳ ಕಾಲ.. ಎಂದಿದ್ದಾರೆ. ಮತ್ತೊಬ್ಬರು, ದೇವರೇ ಸೃಷ್ಟಿಸಿದ ಜೋಡಿ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದಿದ್ದಾರೆ.