ನಟ ಅರ್ಜುನ್ ಕಪೂರ್ ಮತ್ತು ನಟಿ ಮಲೈಕಾ ಅರೋರಾ ಬಾಲಿವುಡ್ನ ಲವ್ ಬರ್ಡ್ಸ್ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ಬಾಲಿವುಡ್ ಜೋಡಿ ತಾವು ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಮಂಗಳವಾರದಂದು ನಟಿ ಮಲೈಕಾ ಅರೋರಾ ತಮ್ಮ ಇನ್ಸ್ಟಾ ಪೇಜ್ನಲ್ಲಿ ಗೆಳೆಯ ಅರ್ಜುನ್ ಕಪೂರ್ ಜೊತೆಗಿನ ಒಂದೆರಡು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಚಳಿಗಾಲದ ಉಡುಗೆ ತೊಟ್ಟು ಒಟ್ಟಿಗೆ ಸೆಲ್ಫಿಗೆ ಪೋಸ್ ನೀಡಿರುವುದನ್ನು ಕಾಣಬಹುದು.
ಮಲೈಕಾ ಹಂಚಿಕೊಂಡಿರುವ ಪೋಸ್ಟ್‌ಗೆ ವಿಶೇಷವಾಗಿ ಶೀರ್ಷಿಕೆ ನೀಡಿದ್ದಾರೆ. ''ಬೆಚ್ಚಗಿನ ಮತ್ತು ಸ್ನೇಹಶೀಲ. ನಿಮ್ಮ ಸುತ್ತಲೂ ನಾನು ಹೀಗೆಯೇ ಭಾವಿಸುತ್ತೇನೆ ಅರ್ಜುನ್ ಕಪೂರ್" ಎಂದು ಬರೆದುಕೊಂಡಿದ್ದಾರೆ. ಮಲೈಕಾರ ಈ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ. ಸುಸ್ಸಾನೆ ಖಾನ್ "ಲವ್ ಯೂ ಬೋತ್" ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ದಂಪತಿಗಳ ಮೇಲೆ ತಮ್ಮ ಪ್ರೀತಿಯ ಮಳೆಯನ್ನೇ ಹರಿಸಿದರು. ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, "ಇದು ರಬ್ ನೆ ಬನಾ ದಿ ಜೋಡಿಯ ಪರಿಪೂರ್ಣ ಉದಾಹರಣೆಯಾಗಿದೆ" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ಸುಂದರ ಜೋಡಿ" ಎಂದು ಕಮೆಂಟ್ ಮಾಡಿದ್ದಾರೆ.
ನಟ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಸಾಲ್ಸ್‌ಬರ್ಗ್‌ನ (Salsburgh, ಸ್ಕಾಟ್ಲೆಂಡ್) ಸುಂದರವಾದ ಹಿಮಭರಿತ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕೆಲವು ಸಮಯದಿಂದ ಡೇಟಿಂಗ್ನಲ್ಲಿದ್ದಾರೆ. ಆದರೆ, ಅವರ ನಡುವಿನ 12 ವರ್ಷಗಳ ವಯಸ್ಸಿನ ಅಂತರದಿಂದಾಗಿ ಸಾಕಷ್ಟು ಟ್ರೋಲ್, ಟೀಕೆ ಎದುರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈಗಲೂ ಇವರ ಸಂಬಂಧದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಎಲ್ಲ ಟ್ರೋಲಿಂಗ್‌ಗಳ ನಂತರವೂ, ಮಲೈಕಾ ಮತ್ತು ಅರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದರಿಂದ ಹಿಂದೆ ಸರಿದಿಲ್ಲ. ಸಿನಿಮಾ ಈವೆಂಟ್ಗಳಲ್ಲಿ ಮ್ಯಾಚಿಂಗ್ ಡ್ರೆಸ್ ತೊಟ್ಟು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಪಾಪರಾಜಿಗಳ ಕ್ಯಾಮರಾ ಎದುರು ಪ್ರೇಮಿಗಳಂತೆ ನಿಲ್ಲುತ್ತಾರೆ.