ಕರ್ನಾಟಕ

karnataka

ETV Bharat / entertainment

ವಿದೇಶ ಪ್ರವಾಸದಲ್ಲಿ ಮಲೈಕಾ ಅರೋರಾ - ಅರ್ಜುನ್ ಕಪೂರ್ - ಮಲೈಕಾ ಅರ್ಜುನ್ ಟ್ರಿಪ್

ನಟಿ ಮಲೈಕಾ ಅರೋರಾ ಅವರು ಗೆಳೆಯ ಅರ್ಜುನ್ ಕಪೂರ್ ಜೊತೆ ವಿದೇಶ ಪ್ರವಾಸದಲ್ಲಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Malaika Arora Arjun Kapoor
ಮಲೈಕಾ ಅರೋರಾ ಅರ್ಜುನ್ ಕಪೂರ್

By

Published : Apr 22, 2023, 5:18 PM IST

ಮಲೈಕಾ ಅರೋರಾ ಇನ್​ಸ್ಟಾ ಪೋಸ್ಟ್

ಬಾಲಿವುಡ್ ಲವ್ ಬರ್ಡ್ಸ್ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರು ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಿರುವ ಈ ಜೋಡಿ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂದು ಕೂಡ ತಮ್ಮ ರಜಾ ದಿನದ ಕ್ಷಣಗಳನ್ನು ನಟಿ ಮಲೈಕಾ ಅರೋರಾ ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅರ್ಜುನ್ ಮತ್ತು ಮಲೈಕಾ ಅವರು ಹಂಚಿಕೊಳ್ಳುವ ಪೋಸ್ಟ್​ಗಳಲ್ಲಿ ನೈಸರ್ಗಿಕ ಸೌಂದರ್ಯ, ಆಹಾರ, ಶಾಪಿಂಗ್​ ಸೇರಿದಂತೆ ಎಲ್ಲವೂ ಇರುತ್ತದೆ. ಇವರಿಬ್ಬರೂ ಕಳೆದ ಕ್ಷಣಗಳನ್ನು ನೋಡಲು ಅಭಿಮಾನಿಗಳೂ ಸಹ ಕಾತರರಾಗಿರುತ್ತಾರೆ. ಸದ್ಯ ಮಲೈಕಾ ಅರೋರಾ ಶೇರ್ ಮಾಡಿರುವ ಇನ್​ಸ್ಟಾ ಸ್ಟೋರಿನಲ್ಲಿ, ಅರ್ಜುನ್ ಜೊತೆಗಿನ ರೋಡ್ ಟ್ರಿಪ್ ಕ್ಲಿಪ್ ಇದೆ.

ಇದಕ್ಕೂ ಮುನ್ನ ಮಲೈಕಾ ತಮ್ಮ ಮತ್ತು ಅರ್ಜುನ್ ಅವರ ನೆರಳಿನ ಚಿತ್ರವನ್ನು ಹಂಚಿಕೊಂಡಿದ್ದರು. ತಮ್ಮ ಕೈಗಳಿಂದ ಹೃದಯದ ಚಿಹ್ನೆಯನ್ನು ಮಾಡುತ್ತಿರುವ ಫೋಟೋ ಅದಾಗಿತ್ತು. ಇನ್​ಸ್ಟಾಗ್ರಾಮ್​ನಲ್ಲಿ ವೈಟ್​ ಹಾರ್ಟ್​ ಎಮೋಜಿಯೊಂದಿಗೆ ತಮ್ಮ ಪ್ರೀತಿಯ ಚಿತ್ರವನ್ನು ಹಂಚಿಕೊಂಡಿದ್ದರು. ಮಲೈಕಾ ಮತ್ತು ಅರ್ಜುನ್ ಬರ್ಲಿನ್‌ನಲ್ಲಿ ಎಂಜಾಯ್​ ಮಾಡುತ್ತಿದ್ದು, ಚಿತ್ರ, ವಿಡಿಯೋಗಳು ಇಂಟರ್ನೆಟ್​​ನಲ್ಲಿ ಬಿಸಿ ಏರಿಸಿವೆ. ಫೋಟೋ, ವಿಡಿಯೋಗಳು ವೈರಲ್​​ ಆಗುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಕಿಂಗ್​​ ಖಾನ್​​ 'ಜವಾನ್​' ಸಿನಿಮಾದಲ್ಲಿ ಅಲ್ಲು ಅರ್ಜುನ್​; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ

ಮಲೈಕಾ 2019ರಲ್ಲಿ ಅರ್ಜುನ್‌ ಅವರ ಜೊತೆಗಿನ ತಮ್ಮ ಸಂಬಂಧವನ್ನು ಘೋಷಿಸಿದರು. ನಟಿ ಮಲೈಕಾ ಅರೋರಾ 49ರ ಹರೆಯದವರು. ಅರ್ಜುನ್ ಕಪೂರ್​ ವಯಸ್ಸು 37. ಈ ಹಿನ್ನೆಲೆ ಈ ಜೋಡಿ ಸಾಕಷ್ಟು ಟೀಕೆ, ಟ್ರೋಲ್​ಗಳನ್ನು ಎದುರಿಸಿದೆ. ಅಲ್ಲದೇ ನಟಿ ಮಲೈಕಾ ಅವರು 2017ರಲ್ಲಿ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಅರ್ಬಾಜ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಜೊತೆಗೂ ಅರ್ಜುನ್​ ಕಪೂರ್​ ಹೆಸರು ಕೇಳಿಬಂದಿತ್ತು. ಈ ಎಲ್ಲದರ ಹಿನ್ನೆಲೆ ಕೆಲ ನೆಟ್ಟಿಗರು ಈ ಜೋಡಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೆಲ್ಲದರ ಹೊರತಾಗಿಯೂ ಈ ಜೋಡಿಯ ಸಂಬಂಧ ಬಲವಾಗಿ ಸಾಗುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಲೈಕಾ ತಾನು ಅರ್ಜುನ್ ಜೊತೆ ಮನೆಯನ್ನು ಸ್ಥಾಪಿಸಲು ಎದುರು ನೋಡುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಟೀಕೆ, ಟ್ರೋಲ್​ಗಳನ್ನು ಎದುರಿಸಿ ಮಾದರಿ ದಂಪತಿಯಾದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಾಸ್

ಈ ಜೋಡಿಯ ಕೆಲಸದ ವಿಚಾರ ಗಮನಿಸುವುದಾದರೆ, ಅರ್ಜುನ್ ಕಪೂರ್​ ಕೊನೆಯದಾಗಿ ಆಸ್ಮಾನ್ ಭಾರದ್ವಾಜ್ ನಿರ್ದೇಶನದ ಕುಟ್ಟೆಯಲ್ಲಿ ಕಾಣಿಸಿಕೊಂಡರು. ಮುಂದೆ ಅಜಯ್ ಬಹ್ಲ್ ಅವರ ದಿ ಲೇಡಿ ಕಿಲ್ಲರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಈ ಥ್ರಿಲ್ಲರ್ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮಲೈಕಾ ಅವರು ಇತ್ತೀಚೆಗೆ ಗುರು ರಾಂಧವಾ ಅವರ ತೇರಾ ಕಿ ಖಯಾಲ್‌ ಮ್ಯೂಸಿಕ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.

ABOUT THE AUTHOR

...view details