ಕರ್ನಾಟಕ

karnataka

ETV Bharat / entertainment

Mahesh Babu: ಈ ಸಲ ಮಹೇಶ್​ ಬಾಬು ಬರ್ತ್‌ಡೇ ಎಲ್ಲಿ ಗೊತ್ತೇ? ಈ ದೇಶದಲ್ಲಂತೆ!

Mahesh Babu Birthday: ಸೂಪರ್​ ಸ್ಟಾರ್ ಮಹೇಶ್​ ಬಾಬು ವಿದೇಶದಲ್ಲಿ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.

Mahesh babu
ಮಹೇಶ್​ ಬಾಬು ಬರ್ತ್​ ಡೇ

By

Published : Aug 6, 2023, 8:09 PM IST

ಮಹೇಶ್​ ಬಾಬು. ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ಪ್ರಸಿದ್ಧ ನಟ. ಆಗಸ್ಟ್ 9ರಂದು ಟಾಲಿವುಡ್​ ನಟ 48ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇವರು ಈ ಬಾರಿಯೂ ಹೊರ ದೇಶದಲ್ಲೇ ಬರ್ತ್ ಡೇ ಸೆಲೆಬ್ರೇಟ್​ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಮಹೇಶ್​ ಬಾಬು ಕುಟುಂಬ ಎರಡು ವಾರಗಳ ಹಿಂದೆ ಲಂಡನ್​ ಪ್ರವಾಸಕ್ಕೆ ತೆರಳಿದ್ದು ನಿಮಗೆ ಗೊತ್ತೇ ಇದೆ. ಇದೀಗ ಸೂಪರ್ ಸ್ಟಾರ್​ ಕುಟುಂಬ ಸಮೇತ ಸ್ಕಾಂಟ್ಲೆಂಡ್​ಗೆ ಭೇಟಿ ಕೊಟ್ಟಿದ್ದಾರೆ. ಸ್ಕಾಂಟ್ಲೆಂಡ್​ನ ಗಾಲ್ಫ್​ ರೆಸಾರ್ಟ್ ಒಂದರಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.

ಮಹೇಶ್​ ಬಾಬು ಜನ್ಮದಿನ ಆಚರಿಕೊಂಡ ಬಳಿಕವೂ ಒಂದು ವಾರಗಳ ಕಾಲ ಅಲ್ಲೇ ತಂಗಲಿದ್ದಾರಂತೆ. ಆಗಸ್ಟ್ 16ರಂದು ತವರಿಗೆ ವಾಪಸಾಗಲಿದ್ದಾರೆ. ಅಲ್ಲಿಂದ ಮರಳಿದ ಬಳಿಕ ತಮ್ಮ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​ ಗುಂಟೂರು ಕಾರಂ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 20ಕ್ಕೆ ಗುಂಟೂರು ಕಾರಂ ಶೂಟಿಂಗ್​ ಸೆಟ್​​ಗೆ ಎಂಟ್ರಿ ಕೊಡಲಿದ್ದಾರೆ.

'ಗುಂಟೂರು ಕಾರಂ' ಸಿನಿಮಾ: ತ್ರಿವಿಕ್ರಮ್​ ಅವರ 'ಗುಂಟೂರು ಕಾರಂ' ಸಿನಿಮಾ ಸೆಟ್ಟೇರಿದ ದಿನದಿಂದಲೂ ಹಲವು ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಕಲಾವಿದರಿಂದ ಹಿಡಿದು ಚಿತ್ರತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣ ವಿಳಂಬವಾಗುತ್ತಿದೆ. ಕ್ಯಾಮರಾಮ್ಯಾನ್​ ಕೂಡ ಬದಲಾಗುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಡಿತ್ತು. ಹಾಗಾಗಿ 10-12 ದಿನಗಳಲ್ಲಿ ಹೊಸ ಸಿನಿಮಾಟೋಗ್ರಾಫರ್​ ಫೈನಲ್​​ ಮಾಡಿ ಶೂಟಿಂಗ್​ ಶೀಘ್ರವೇ ಶುರುವಾಗಲಿದೆ ಎಂಬ ಮಾಹಿತಿ ಇದೆ. ನಾಯಕ ನಟನ ಹೊರತಾಗಿ ಇತರೆ ಪಾತ್ರಗಳ ಶೂಟಿಂಗ್​ ಅನ್ನು ಶೀಘ್ರವೇ ಆರಂಭಿಸಲು ನಿರ್ಧರಿಸಲಾಗಿದೆಯಂತೆ. ನಟನ ಹುಟ್ಟುಹಬ್ಬದಂದು ಗುಂಟೂರು ಕಾರಂ ಚಿತ್ರದಿಂದ ಸರ್ಪ್ರೈಸ್​ ಅನ್ನು ಸಹ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಮಹೇಶ್​ ಬಾಬು ಪೋಸ್ಟರ್ ಅಥವಾ ಸಿನಿಮಾದ ಸಣ್ಣ ವಿಡಿಯೋ ತುಣುಕು ಅನಾವರಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:OMG 2 vs Gadar 2: ಒಂದೇ ದಿನ 2 ಸಿನಿಮಾ ತೆರೆಗೆ; ಮತ್ತೊಮ್ಮೆ ಅಕ್ಷಯ್​ ಕುಮಾರ್​ಗೆ ಹಿನ್ನಡೆ?

ಮಹೇಶ್​ ಬಾಬು ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ SSMB 29. ಇದು ತಾತ್ಕಾಲಿಕ ಶೀರ್ಷಿಕೆಯಷ್ಟೇ. ಆರ್​ಆರ್​ಆರ್​ ಖ್ಯಾತಿಯ ಸ್ಟಾರ್​ ನಿರ್ದೇಶಕ ಎಸ್.ಎಸ್.ರಾಜಮೌಳಿ ಜೊತೆ ಕೈ ಜೋಡಿಸಲಿದ್ದಾರೆ. ಸಿನಿಮಾ ಪ್ರೀ ಪ್ರೊಡಕ್ಷನ್​ ಹಂತದಲ್ಲಿದ್ದು, ಸಾಕಷ್ಟು ತಯಾರಿ ನಡೆಯಬೇಕಿದೆ. ಚಿತ್ರವನ್ನು ಮಹೇಶ್​ ಬಾಬು ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಚಿಯಾನ್​​ ವಿಕ್ರಮ್​ ನಟನೆಯ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್​ ಸೇತುಪತಿ?

ABOUT THE AUTHOR

...view details