ಬಾಲಿವುಡ್ ಕಿಂಗ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಸಿನಿಮಾ ವೀಕ್ಷಣಗೆ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರೂ ಉತ್ಸುಕರಾಗಿದ್ದಾರೆ.
ದೇಶ ಮಾತ್ರವಲ್ಲದೇ ಸಾಗರೋತ್ತರ ಪ್ರದೇಶಗಳಲ್ಲೂ ಜವಾನ್ನ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್ ಜೋರಾಗೇ ನಡೆದಿದೆ. ಜವಾನ್ ಸದ್ಯ ಟ್ರೆಂಡಿಗ್ನಲ್ಲಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡ ಜವಾನ್ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ, ಸದ್ಯ ಗುಂಟೂರು ಕಾರಂ ಸಿನಿಮಾ ಸಲುವಾಗಿ ಸುದ್ದಿಯಲ್ಲಿರುವ ಮಹೇಶ್ ಬಾಬು ಸಾಮಾಜಿಕ ಜಾಲತಾಣ X (ಹಿಂದಿನ ಟ್ವಿಟರ್) ನಲ್ಲಿ ಜವಾನ್ ಕುರಿತು ಬರೆದುಕೊಂಡಿದ್ದಾರೆ. ''ಈ ಸಮಯ ಜವಾನ್ಗಾಗಿ. ನಟ ಶಾರುಖ್ ಖಾನ್ ಅವರ ಪವರ್ ಎಲ್ಲೆಡೆ ಪ್ರದರ್ಶನವಾಗುತ್ತಿದೆ. ಎಲ್ಲ ಮಾರುಕಟ್ಟೆಗಳಲ್ಲಿ (ಬಹುಭಾಷೆ) ಸಾರ್ವಕಾಲಿಕ ಬ್ಲಾಕ್ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಲು ಚಿತ್ರತಂಡಕ್ಕೆ ಶುಭ ಕೋರುತ್ತೇನೆ. ಸಿನಿಮಾವನ್ನು ಸಂಪೂರ್ಣ ಕುಟುಂಬಸ್ಥರೊಂದಿಗೆ ವೀಕ್ಷಿಸಲು ಎದುರು ನೋಡುತ್ತಿದ್ದೇನೆ'' ಎಂದು ಟಾಲಿವುಡ್ ಆ್ಯಕ್ಷನ್ ಪ್ರಿನ್ಸ್ ಟ್ವೀಟ್ ಮಾಡಿದ್ದಾರೆ. ತೆಲುಗು ಸೂಪರ್ ಸ್ಟಾರ್ನ ಈ ಟ್ವೀಟ್ ಜವಾನ್ ಸಿನಿಮಾ ಮೇಲಿನ ಉತ್ಸಾಹ ಮತ್ತು ನಿರೀಕ್ಷೆ ಬಗ್ಗೆ ಒತ್ತಿ ಹೇಳುತ್ತಿದೆ.