ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದು. ಇದೀಗ ಹ್ಯಾಂಡ್ಸಮ್ ಲುಕ್ ಕಾಪಾಡಿಕೊಳ್ಳಲು ಸಹಾಯ ಮಾಡುವ ವರ್ಕೌಟ್ ವಿಡಿಯೋವನ್ನು ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಫ್ಯಾನ್ಸ್ ನಟನಿಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಜಿಮ್ನಲ್ಲಿ ದೇಹವನ್ನು ದಂಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡ ಮಹೇಶ್ ಬಾಬು, ತಮ್ಮ ಶನಿವಾರದ ದಿನಚರಿಯನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆ.
47 ವರ್ಷ ವಯಸ್ಸಾದರೂ, 20ರಂತೆ ಕಾಣುವ ಈ ಹೀರೋನ ಇನ್ಸ್ಟಾ ಪೋಸ್ಟ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಮ್ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ನನ್ನ ಶನಿವಾರದ ಸಿಜಲ್ ಸೆಟ್! ನನ್ನ ನೆಚ್ಚಿನ ಸ್ಕಿಲ್ ಮಿಲ್ ಫಿನಿಶರ್ ಜೊತೆ. 1 ನಿಮಿಷ ಲ್ಯಾಂಡ್‌ಮೈನ್ ಪ್ರೆಸ್, 1 ನಿಮಿಷ ಕೆಟಲ್‌ಬೆಲ್ ಸ್ವಿಂಗ್, 1 ನಿಮಿಷ ಸ್ಕಿಲ್‌ಮಿಲ್ ಓಟ. ನೀವು ಎಷ್ಟು ಸೆಟ್ ಮಾಡಬಹುದು?" ಎಂದು ತಮ್ಮ ಫ್ಯಾನ್ಸ್ಗೆ ಪ್ರಶ್ನೆ ಎಸಗಿದ್ದಾರೆ.
ಜೊತೆಗೆ ವಿಡಿಯೋಗೆ ನಟ ತಮ್ಮ ಜಿಮ್ ತರಬೇತುದಾರರಾದ ಮಿನಾಶ್ ಗೇಬ್ರಿಯಲ್ ಮತ್ತು ಹೀತ್ ಮ್ಯಾಥ್ಯೂಸ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಮಹೇಶ್ ಪೋಸ್ಟ್ ಹಂಚಿಕೊಂಡ ಕೂಡಲೇ ಅವರ ಅಭಿಮಾನಿಗಳು ನಟನನ್ನು ಹೊಗಳಲು ಕಮೆಂಟ್ ವಿಭಾಗವನ್ನು ಆಯ್ದುಕೊಂಡಿದ್ದಾರೆ. ಮಹೇಶ್ ವರ್ಕೌಟ್ ವಿಡಿಯೋಗೆ ಪ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಫಿಟ್ನೆಸ್ ಮೇಲಿನ ಪ್ರೀತಿಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:Actor Komal: ಭಯದ ಜೊತೆ ನಗಿಸಲು ಮತ್ತೆ ಬಂದ್ರು 'ನಮೋ ಭೂತಾತ್ಮ 2' ಗ್ಯಾಂಗ್; ಹಾರರ್ ಟೀಸರ್ ನೋಡಿ..