ಕರ್ನಾಟಕ

karnataka

ETV Bharat / entertainment

ತಂದೆಯ ಜನ್ಮದಿನದಂದೇ ಮಹೇಶ್ ಬಾಬು ಹೊಸ ಸಿನಿಮಾ ಶೀರ್ಷಿಕೆ, ಟೀಸರ್ ಅನಾವರಣ

ತೆಲುಗು ನಟ ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ಟೈಟಲ್​, ಟೀಸರ್​ ರಿಲೀಸ್​ ಆಗಿದೆ.

Guntur Kaaram
ಗುಂಟೂರು ಕಾರಂ

By

Published : Jun 1, 2023, 12:21 PM IST

ತಂದೆ, ಹಿರಿಯ ನಟ ದಿ.ಕೃಷ್ಣ ಅವರ ಜನ್ಮದಿನದಂದು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ಮುಂಬರುವ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಹಂಚಿಕೊಳ್ಳುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ನಿನ್ನೆ ರಾತ್ರಿ ದಕ್ಷಿಣದ ಬಹುಬೇಡಿಕೆಯ ನಟ ಮಹೇಶ್ ಬಾಬು ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ. ಪೋಸ್ಟ್​ಗೆ "ಇಂದು ಎಲ್ಲವೂ ಹೆಚ್ಚು ವಿಶೇಷವಾಗಿದೆ, ಇದು ನಿಮಗಾಗಿ ಅಪ್ಪಾ" ಎಂದು ಶೀರ್ಷಿಕೆ ನೀಡಿದ್ದಾರೆ. ಗುಂಟೂರು ಕಾರಂ ಚಿತ್ರದ ಪೋಸ್ಟರ್ ಟೀಸರ್​ ಅನ್ನೂ ಹಂಚಿಕೊಂಡಿದ್ದು, "ದಹಿಸುವ! # GunturKaaram" ಎಂದು ಬರೆದುಕೊಂಡಿದ್ದಾರೆ.

ಮಹೇಶ್ ಬಾಬು ಅವರ ಮುಂಬರುವ ಬಹುನಿರೀಕ್ಷಿತ ಚಿತ್ರಕ್ಕೆ ತಾತ್ಕಾಲಿಕವಾಗಿ SSMB28 ಎಂದು ಹೆಸರಿಡಲಾಗಿತ್ತು. ಬಹು ಸಮಯದಿಂದ SSMB28 ಎಂದೇ ಕರೆಯಲಾಗುತ್ತಿತ್ತು. ಇದೀಗ ಚಿತ್ರದ ಫೈನಲ್​​ ಟೈಟಲ್ ಅನಾವರಣಗೊಂಡಿದೆ. 'ಗುಂಟೂರು ಕಾರಂ'​​ ಮಹೇಶ್ ಬಾಬು ಸಿನಿಮಾ ಶೀರ್ಷಿಕೆ. ಹೆಸರೇ ಹೇಳುವಂತೆ ಸಿನಿಮಾ ಸಖತ್​ ಮಾಸ್​ ಆಗಿರಲಿದೆ. 'ಗುಂಟೂರು ಕಾರಂ' ಸಿನಿಮಾ ಮುಂದಿನ ವರ್ಷ ಜನವರಿ 13 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಒಂದು ನಿಮಿಷ ನಾಲ್ಕು ಸೆಕೆಂಡ್​ಗಳ ವಿಡಿಯೋದುದ್ದಕ್ಕೂ ಮಹೇಶ್ ಅವರ ಮಾಸ್ ಫೈಟ್​ಗಳು ತುಂಬಿವೆ. ಸಿನಿಮಾದಲ್ಲಿ ಮಹೇಶ್ ಬಾಬು ಅವರ ಮ್ಯಾನರಿಸಂ ಮತ್ತು ಬಾಡಿ ಲಾಂಗ್ವೇಜ್ ಹೇಗಿರಲಿದೆ ಎಂಬುದನ್ನು ತೋರಿಸಲು ಟೀಸರ್ ಬಿಡುಗಡೆ ಮಾಡಲಾಗಿದೆ. ಮಹೇಶ್ ಅವರ ಮಾಸ್​, ಸ್ಟೈಲಿಶ್ ಲುಕ್, ಬೀಡಿ ಸೇದಿಕೊಂಡು ನಡೆಯುವುದು, 'ಬೀಡಿ 3ಡಿಯಲ್ಲಿ ಕಾಣಿಸುತ್ತದೆಯೇ' ಎಂದು ಹೇಳುವುದು ಎಲ್ಲವೂ ಆಕರ್ಷಕವಾಗಿದೆ. ಬಾಂಬ್ ಸ್ಫೋಟಗೊಂಡು ಗಾಳಿಯಲ್ಲಿ ಜೀಪ್ ಜಿಗಿಯುವ ದೃಶ್ಯವನ್ನು ಸಹ ಹಾಕಲಾಗಿದೆ. ಕಥೆ, ಇತರೆ ಪಾತ್ರಗಳ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಈ ಟೀಸರ್ ನಟ ಕೃಷ್ಣ ಅವರಿಗೆ ನಮನ ಸಲ್ಲಿಸುವ ಮೂಲಕ ಕೊನೆಗೊಂಡಿದೆ. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರಕ್ಕೂ ಮೊದಲು ನಟ ಮತ್ತು ನಿರ್ದೇಶಕರು ಬ್ಲಾಕ್​ಬಸ್ಟರ್ ಹಿಟ್ ಚಿತ್ರಗಳಾದ ಅತಡು ಮತ್ತು ಖಲೇಜಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 12 ವರ್ಷಗಳ ನಂತರ ಈ ನಟ ನಿರ್ದೇಶಕ ಜೋಡಿ ಮತ್ತೊಂದು ಬಿಗ್​ ಬಜೆಟ್​ ಸಿನಿಮಾ ಮಾಡುತ್ತಿದೆ.

ಇದನ್ನೂ ಓದಿ:ಮಹೇಶ್ ಬಾಬು ನಟನೆಯ SSMB28 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಇಂದು ಮೇರು ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ಘಟ್ಟಮನೇನಿ ಕೃಷ್ಣ ಅವರ ಜನ್ಮದಿನ. ಘಟ್ಟಮನೇನಿ ಶಿವರಾಮ ಕೃಷ್ಣ ಮೂರ್ತಿ ಸುಮಾರು 350 ಚಲನಚಿತ್ರಗಳನ್ನು ಮಾಡಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 2009ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ಆರೋಗ್ಯ ಸಮಸ್ಯೆಗಳಿಂದಾಗಿ ಹೈದರಾಬಾದ್‌ನಲ್ಲಿ ನವೆಂಬರ್ 15, 2022ರಂದು ನಿಧನರಾದರು.

ಇದನ್ನೂ ಓದಿ:ದೇಗುಲ ದರ್ಶನ ಪಡೆದ ಸಾರಾ ಅಲಿ ಖಾನ್ ಟ್ರೋಲ್​: ನನ್ನ ನಂಬಿಕೆ, ಭೇಟಿ ಮುಂದುವರಿಸುವೆ ಎಂದ ನಟಿ

ABOUT THE AUTHOR

...view details