ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ದಕ್ಷಿಣ ಚಿತ್ರರಂಗದ ಜನಪ್ರಿಯ ತಾರಾ ದಂಪತಿ. ಪವರ್ಫುಲ್ ಸೆಲೆಬ್ರಿಟಿ ಕಪಲ್ಗೆ ಗೌತಮ್ ಮತ್ತು ಸಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸಿತಾರಾ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಜನಪ್ರಿಯರಾಗಿರುವ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದ್ರೆ ಗೌತಮ್ ಅವರು ಸೋಷಿಯಲ್ ಮೀಡಿಯಾ ಬಳಸೋದು ತೀರಾ ಕಡಿಮೆ. ಖಾಸಗಿತನಕ್ಕೆ ಹೆಚ್ಚು ಒತ್ತು ಜೊಡುತ್ತಾರೆ. ಇದೀಗ ಗೌತಮ್ ಅವರ ದೊಡ್ಡ ಮನಸ್ಸಿನ ಬಗ್ಗೆ ತಾಯಿ, ನಟಿ ನಮ್ರತಾ ಶಿರೋಡ್ಕರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾಗಳಿಂದ ದೂರ ಉಳಿದಿರುವ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ. ಸಿನಿಮಾ ಮಾಡದಿದ್ದರೇನಂತೆ? ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಪುತ್ರ ಗೌತಮ್ ಘಟ್ಟಮನೇನಿ ಕುರಿತಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಮಗನ ಮಹಾ ಮನಸ್ಸಿನ ಬಗ್ಗೆ ಹೇಳಿಕೊಂಡಿರುವ ಈ ಪೋಸ್ಟ್ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಮಹೇಶ್ ಬಾಬು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಹೀರೋ. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೈನ್ಬೋ ಹಾಸ್ಪಿಟಲ್ ಜೊತೆಗೂಡಿ ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಪುಟ್ಟ ಮಕ್ಕಳು ಹೃದಯ ಶಸ್ತ್ರಚಿಕಿತ್ಸೆ ಮೂಲಕ ಮರುಜನ್ಮ ಪಡೆದಿದ್ದಾರೆ. ಈ ಹಿನ್ನೆಲೆ ಟಾಲಿವುಡ್ ಹೀರೋ ಮಹೇಶ್ ಬಾಬು ಅವರ ಮಗ ಗೌತಮ್ ಘಟ್ಟಮನೇನಿ ಆಗಾಗ್ಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಕೆಲ ಸಮಯ ಕಳೆದು ಬರುತ್ತಾರೆ.