ಕರ್ನಾಟಕ

karnataka

ETV Bharat / entertainment

ತಂದೆ ಪ್ರತಿಮೆ ಅನಾವರಣಗೊಳಿಸಿದ ಕಮಲ್​ ಹಾಸನ್​ಗೆ ಕೃತಜ್ಞತೆ ಸಲ್ಲಿಸಿದ ನಟ ಮಹೇಶ್​ ಬಾಬು

Actor Krishna's statue in Vijayawada: ವಿಜಯವಾಡದಲ್ಲಿ ತಂದೆ, ದಿವಂಗತ ನಟ ಘಟ್ಟಮನೇನಿ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಖ್ಯಾತ ನಟ ಕಮಲ್​ ಹಾಸನ್​ಗೆ ಮಹೇಶ್​ ಬಾಬು ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸಿದರು.

Mahesh Babu shares 'heartfelt gratitude' as Kamal Haasan unveils late actor Krishna's statue in Vijayawada
ತಂದೆಯ ಪ್ರತಿಮೆಯನ್ನು ಅನಾವರಣಗೊಳಿಸಿದ ಕಮಲ್​ ಹಾಸನ್​ಗೆ ಕೃತಜ್ಞತೆ ಸಲ್ಲಿಸಿದ ನಟ ಮಹೇಶ್​ ಬಾಬು

By ETV Bharat Karnataka Team

Published : Nov 10, 2023, 4:33 PM IST

ತೆಲುಗು ಚಿತ್ರರಂಗದ ಹಿರಿಯ ನಟ, ದಿವಂಗತ ಘಟ್ಟಮನೇನಿ ಕೃಷ್ಣ ಅವರ ಪ್ರತಿಮೆಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಸ್ಥಾಪಿಸಲಾಗಿದೆ. ಗುರುನಾನಕ್​ ಕಾಲೋನಿಯಲ್ಲಿರುವ ಈ ಪ್ರತಿಮೆಯನ್ನು ಇಂದು ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್​ ಹಾಸನ್​ ಅನಾವರಣಗೊಳಿಸಿದರು. ಈ ವೇಳೆ ವೈಎಸ್​ಆರ್​ಸಿಪಿ ಪೂರ್ವ ಕ್ಷೇತ್ರದ ಉಸ್ತುವಾರಿ ದೇವಿನೇನಿ ಅವಿನಾಶ್​ ಸಾಥ್​ ನೀಡಿದರು. ಇದೀಗ, ಕೃಷ್ಣ ಅವರಿಗೆ ನೀಡಿದ ಗೌರವಕ್ಕಾಗಿ ಕಮಲ್​ ಹಾಸನ್​ ಹಾಗೂ ದೇವಿನೇನಿ ಅವಿನಾಶ್​ ಅವರಿಗೆ ನಟ ಮಹೇಶ್​ ಬಾಬು ಆತ್ಮೀಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ದಿವಂಗತ ಘಟ್ಟಮನೇನಿ ಕೃಷ್ಣ ಅವರ ಪುತ್ರ ನಟ ಮಹೇಶ್​ ಬಾಬು. ತಂದೆಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಲು ನಟ ಇನ್​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡರು. "ವಿಜಯವಾಡದಲ್ಲಿ ಕೃಷ್ಣ ಅವರ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮ ಅಲಂಕರಿಸಿದ ಕಮಲ್​ ಹಾಸನ್​ ಸರ್​ ಮತ್ತು ದೇವಿನೇನಿ ಅವಿನಾಶ್​ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ತಂದೆಯವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಿರುವುದು ನಿಜಕ್ಕೂ ಗೌರವ. ಅವರು ಬಿಟ್ಟುಹೋದ ಪರಂಪರೆಗೆ ಇದು ಸಲ್ಲಿಸಿದ ಗೌರವ. ಅಲ್ಲದೇ, ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಎಲ್ಲಾ ಅಭಿಮಾನಿಗಳಿಗೆ ನನ್ನ ಹೃದಯದ ಅಂತರಾಳದಿಂದ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮುಂದಿನ ಸಂಕ್ರಾಂತಿಗೆ 'ಗುಂಟೂರು ಖಾರಂ' ತೆರೆಗೆ: ಸಿನಿಮಾದ ಮತ್ತೊಂದು ಹೊಸ ಅಪ್ಡೇಟ್ ಗೊತ್ತೇ?

ಇನ್ನೂ, ಪ್ರತಿಮೆಯನ್ನು ಅನಾವರಣಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದ ದೇವಿನೇನಿ ಅವಿನಾಶ್​ ಅವರು, ತೆಲುಗು ಜನರ ನೆಚ್ಚಿನ ನಟನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ತೆಲುಗು ಚಲನಚಿತ್ರೋದ್ಯಮಕ್ಕೆ ಕೃಷ್ಣ ಅವರ ಮಹತ್ವದ ಕೊಡುಗೆಗಳನ್ನು ಒತ್ತಿ ಹೇಳಿದರು. ಇಡೀ ಚಲನಚಿತ್ರ ರಂಗಕ್ಕೆ ನಗರದ ನಿವಾಸಗಳ ಪರವಾಗಿ ಕೃತಜ್ಞತೆ ಸಲ್ಲಿಸಿದ ಅವಿನಾಶ್​, ಹತ್ತು ದಿನಗಳ ಅವಧಿಯಲ್ಲಿ ಕೃಷ್ಣನ ಪ್ರತಿಮೆಯ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟ ಸಿಎಂ ಜಗನ್​ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು.

ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ ಅವರನ್ನು ಎಲ್ಲರೂ ಪ್ರೀತಿಯಿಂದ ಕೃಷ್ಣ ಎಂದೇ ಕರೆಯುತ್ತಿದ್ದರು. ಅವರು 1965ರಲ್ಲಿ ಅದುರ್ತಿ ಸುಬ್ಬಾ ರಾವ್​ ಅವರ ಪ್ರೇಮ ಕಥೆ ತೇನೆ ಮನಸುಲು ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸರಿಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಚಿತ್ರೋದ್ಯಮದ ಅಭೂತಪೂರ್ವ ಸಾಧನೆ ಗುರುತಿಸಿ 2009ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟ 2022ರ ನವೆಂಬರ್​ 15ರಂದು ನಿಧನರಾದರು.

ಇದನ್ನೂ ಓದಿ:'ಗುಂಟೂರು ಖಾರಂ' ಚಿತ್ರದ 'ದಮ್​ ಮಸಾಲ' ಸಾಂಗ್​ ಪ್ರೋಮೋ​ ಔಟ್​

ABOUT THE AUTHOR

...view details