ಕರ್ನಾಟಕ

karnataka

ETV Bharat / entertainment

'ಗುಂಟೂರು ಖಾರಂ' ಚಿತ್ರದ 'ದಮ್​ ಮಸಾಲ' ಸಾಂಗ್​ ಪ್ರೋಮೋ​ ಔಟ್​ - ಈಟಿವಿ ಭಾರತ ಕನ್ನಡ

Dum Masala song from Guntur Kaaram: 'ಗುಂಟೂರು ಖಾರಂ' ಚಿತ್ರದ ಮೊದಲ ಹಾಡಿನ ಪ್ರೋಮೋ ಇಂದು ಬಿಡುಗಡೆಯಾಗಿದೆ.

Mahesh Babu keeps swag on in Dum Masala song from Guntur Kaaram - watch
'ಗುಂಟೂರು ಖಾರಂ' ಚಿತ್ರದ 'ದಮ್​ ಮಸಾಲ' ಸಾಂಗ್​ ಪ್ರೋಮೋ​ ಔಟ್​

By ETV Bharat Karnataka Team

Published : Nov 5, 2023, 5:39 PM IST

ಸೌತ್​​ ಸೂಪರ್‌ ಸ್ಟಾರ್ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್​ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ'. ಈ ಚಿತ್ರದ ಮೇಲೆ ಸಿನಿ ಪ್ರೇಮಿಗಳಿಗೆ ಮುಗಿಲೆತ್ತರದ ನಿರೀಕ್ಷೆಯಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್​ಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಚಿತ್ರದ ಮೊದಲ ಸಾಂಗ್​ ರಿಲೀಸ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಅದಕ್ಕೂ ಮುನ್ನವೇ ಲೀಕೇಜ್​ ರಾಕ್ಸ್​ ಹಾಡಿನ ಆಡಿಯೋ ಕ್ಲಿಪ್​ ಲೀಕ್ ಮಾಡಿ ನಿರ್ಮಾಪಕರಿಗೆ ಶಾಕ್​ ನೀಡಿದೆ. ಹೀಗಾಗಿ ಚಿತ್ರತಂಡ, ಲೇಟೆಸ್ಟ್​ ಸಾಂಗ್​ ಪ್ರೋಮೋ ಬಿಡುಗಡೆ ಮಾಡಿದೆ.

ಹಾಡಿನ ಮೊದಲ ಒಂದು ಪ್ಯಾರಾವನ್ನು ಮಾತ್ರ ರಿಲೀಸ್​ ಮಾಡಲಾಗಿದೆ. 'ದಮ್​ ಮಸಾಲಾ' ಎಂಬ ಶೀರ್ಷಿಕೆಯಡಿ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ನವೆಂಬರ್​ 7ರಂದು ಪೂರ್ತಿ ಹಾಡು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಪ್ರೋಮೋ ನೋಡಿದ್ರೆ, ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ತಮನ್​ ಸಂಗೀತ ಅದ್ಭುತ. ಈ ಹಾಡು ಖಂಡಿತ ದಾಖಲೆ ಸೃಷ್ಟಿಸಲಿದೆ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಸಂಚಿತ್​ ಹೆಗ್ಡೆ ಮತ್ತು ತಮನ್ ಈ​ ಹಾಡಿಗೆ ಧ್ವನಿಯಾಗಿದ್ದಾರೆ. ಸರಸ್ವತಿ ಪುತ್ರ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ನೀಡಿದ್ದಾರೆ.

ಪೂರ್ತಿ ಹಾಡು ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್​ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ನವೆಂಬರ್ 7ರಂದು ನಿರ್ದೇಶಕರು ತಮ್ಮ 52ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಲು ಚಿತ್ರತಯಾರಕರು ನಿರ್ಧರಿಸಿದ್ದಾರೆ. ಈಗ ಜಸ್ಟ್ ಸಾಂಗ್​ ಝಲಕ್​​ ಮಾತ್ರ ತೋರಿಸಲಾಗಿದೆ.

ಇದನ್ನೂ ಓದಿ:Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ಮಹೇಶ್​ ಬಾಬು ಅವರ 28ನೇ ಸಿನಿಮಾವಾದ 'ಗುಂಟೂರು ಖಾರಂ' ಚಿತ್ರೀಕರಣ ನಾನಾ ಕಾರಣಗಳಿಂದ ವಿಳಂಬವಾಗುತ್ತಾ ಬಂತು. ಅಂತಿಮವಾಗಿ, ಡಿಸೆಂಬರ್ ಮೊದಲ ವಾರದೊಳಗೆ ಶೂಟಿಂಗ್​​ ಪೂರ್ಣಗೊಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ಮಹೇಶ್ ಬಾಬು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು 'ಗುಂಟೂರು ಖಾರಂ' ವೀಕ್ಷಣೆಗೆ ಎದುರು ನೋಡುತ್ತಿದ್ದಾರೆ. ಏಕೆಂದರೆ ಇದು ಯಶಸ್ವಿ ನಟ-ನಿರ್ದೇಶಕ ಜೋಡಿ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದ ಬಹುನಿರೀಕ್ಷಿತ ಚಿತ್ರ.

ಕೊನೆಯದಾಗಿ 2010ರಲ್ಲಿ ಮೂಡಿಬಂದ ಖಲೇಜಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2005ರಲ್ಲಿ ಬಂದ ಅಥಡು ಸಿನಿಮಾದಲ್ಲಿ ಮೊದಲ ಬಾರಿಗೆ ಸಹಕರಿಸಿದ್ದರು. ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್​​​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಮಹೇಶ್​​ ಬಾಬು ಜೊತೆ ಜಯರಾಮ್, ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು ಮತ್ತು ರಮ್ಯಾ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.

ಆರಂಭದಲ್ಲಿ ಚಿತ್ರಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಶೂಟಿಂಗ್​​ಗೆ ಡೇಟ್ಸ್ ಕೊರತೆ ಹಿನ್ನೆಲೆಯಲ್ಲಿ ನಟಿ ಪ್ರಾಜೆಕ್ಟ್​​​ನಿಂದ ದೂರ ಸರಿಯಬೇಕಾಯಿತು. ಪರಿಣಾಮ, ಕನ್ನಡತಿ ಶ್ರೀಲೀಲಾ ಮೈನ್​ ಲೀಡ್​ ರೋಲ್ ಆರಿಸಿಕೊಂಡರೆ, ಮೀನಾಕ್ಷಿ ಚೌಧರಿ ಎರಡನೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಎಸ್ ತಮನ್ ಸಂಗೀತ ಸಂಯೋಜನೆ, ರವಿ ಕೆ.ಚಂದ್ರನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಮುಂದಿನ ವರ್ಷ ಜನವರಿ 12 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ:ಸಿನಿಮಾಗಳ ಮುಹೂರ್ತ ಪೂಜೆಯಲ್ಲಿ ನಟ ಮಹೇಶ್​ ಬಾಬು ಭಾಗಿಯಾಗಲ್ಲ! ಯಾಕೆ ಗೊತ್ತೇ?

ABOUT THE AUTHOR

...view details