ಕರ್ನಾಟಕ

karnataka

ETV Bharat / entertainment

ಮಹೇಶ್ ಬಾಬು ನಟನೆಯ SSMB28 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ - SSMB28 ಚಿತ್ರದ ಫಸ್ಟ್ ಲುಕ್

ತಮ್ಮ ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಮಹೇಶ್ ಬಾಬು ಅವರು ಬಹು ನಿರೀಕ್ಷಿತ SSMB28 ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

Mahesh Babu drops first look poster from SSMB28, pens note remembering late father Krishna
Mahesh Babu drops first look poster from SSMB28, pens note remembering late father Krishna

By

Published : May 31, 2023, 5:37 PM IST

ಹೈದರಾಬಾದ್:ಟಾಲಿವುಡ್ ನಟ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ SSMB28 ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್​ ಅನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು ಫ್ಯಾನ್ಸ್​ ಫಿದಾ ಆಗಿದ್ದಾರೆ. ತಮ್ಮ ತಂದೆ ಕೃಷ್ಣ ಅವರಿಗೆ ಅರ್ಪಿಸಿದ್ದಾರೆ. ಇಂದು ಕೃಷ್ಣ ಅವರ ಜನ್ಮದಿನದ. ಈ ನೆನಪಿಗಾಗಿ ಮಹೇಶ್ ಬಾಬು ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. "ಇಂದು ಬಹಳ ವಿಶೇಷ ದಿನವಾಗಿದೆ! ನೀವು ಇದಕ್ಕೆ ಅರ್ಹರು" ಎಂದು ಟ್ವೀಟ್​ಗೆ ಶೀರ್ಷಿಕೆ ಬರೆದಿದ್ದಾರೆ.

ಅವರು ಪೋಸ್ಟರ್​ ಹಂಚಿಕೊಳ್ಳುತ್ತಿದ್ದಂತೆ ಚಿತ್ರದ ಬಗ್ಗೆ ಅಭಿಮಾನಿಗಳ ಕ್ರೇಜ್​ ಇಮ್ಮಡಿಗೊಂಡಿದ್ದು, ತಲೆಗೆ ಬಟ್ಟೆ ಕಟ್ಟಿಕೊಂಡು ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿರುವುದನ್ನು ಪೋಸ್ಟರ್​ನಲ್ಲಿ ಕಾಣಬಹುದು. ಮಹೇಶ್ ಬಾಬು ಅವರ 28 ಚಿತ್ರ ಇದಾಗಿದ್ದು, ಸದ್ಯಕ್ಕೆ SSMB28 ತಾತ್ಕಾಲಿಕ ಹೆಸರು ಇಡಲಾಗಿದೆ.

12 ವರ್ಷಗಳ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಮಹೇಶ್ ಬಾಬು ಅವರಿಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವುದರಿಂದ ಅಭಿಮಾನಿಗಳ ಕೌತುಕ ಹೆಚ್ಚಾಗುತ್ತಿದೆ. 12 ವರ್ಷದ ಹಿಂದೆ ಇದೇ ಜೋಡಿ ಅಥಡು ಮತ್ತು ಖಲೇಜಾ ಎಂಬ ಹಿಟ್​ ಸಿನಿಮಾಗಳನ್ನು ನೀಡಿತ್ತು. ಇದೀಗ ಮತ್ತೆ ಒಂದಾಗಿದ್ದಾರೆ. SSMB28 ಚಿತ್ರವು ಇವರ ಕಾಂಬಿನೇಷನ್​ನಲ್ಲಿ ಸಿದ್ಧಗೊಳ್ಳುತ್ತಿರುವುದು ಮೂರನೇ ಚಿತ್ರವಾಗಿದೆ.

ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಎಸ್ ಥಮನ್ ಸಂಗೀತದ ಹೊಣೆ ಹೊತ್ತಿದ್ದಾರೆ. ಸಂಕ್ರಾಂತಿಯ ಹಬ್ಬದ ಪ್ರಯುಕ್ತ ಜನವರಿ 13, 2024 ರಂದು SSMB28 ಚಿತ್ರ ಬಿಡುಗಡೆಯಾಗಲಿದೆ. ಇನ್ನು ಕೃಷ್ಣ ಅವರ ಜನುಮದಿನದ ಪ್ರಯುಕ್ತ ಅವರ ನಟನೆಯ 'ಮೋಸಗಾಳ್ಳಕು ಮೋಸಗಾಳ್ಳು' ಚಿತ್ರ ಕೂಡ ಮರು ಬಿಡುಗಡೆಯಾಗಿದೆ.

ಚಿತ್ರದ ಮರು ಬಿಡುಗಡೆ ಬಗ್ಗೆ ಮಹೇಶ್ ಅವರು ತಮ್ಮ ತಂದೆ ಕೃಷ್ಣ ಹಾಗೂ ಅವರ ಅಭಿನಯದ ಮೊಸಗಲ್ಲಕು ಮೊಸಗಾಡು ಬಗ್ಗೆಯೂ ಕೆಲವು ಸಾಲುಗಳನ್ನು ಸಹ ಬರೆದಿದ್ದಾರೆ. "ಆ ದಿನಗಳಲ್ಲಿಯೇ ಹಾಲಿವುಡ್ ಸಿನಿಮಾಗಳ ಸರಿಸಮಾನ ಚಿತ್ರಗಳನ್ನು ನೀಡಿದ ಶ್ರೇಯಸ್ಸು ನಿಮಗೆ ಸಲ್ಲುತ್ತದೆ. ಇತ್ತೀಚೆಗೆ ತೆಲುಗು ಚಿತ್ರರಂಗ ಮತ್ತಷ್ಟು ಬೆಳೆದಿದೆ.

ಹಾಲಿವುಡ್​ ಮತ್ತು ಬಾಲಿವುಡ್​ ಸೇರಿದಂತೆ ಎಲ್ಲ ಚಿತ್ರರಂಗಗಳು ನಮ್ಮನ್ನು ಗಮನಿಸುತ್ತಿವೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. 1971 ಆಗಸ್ಟ್ 27 ರಂದು ಬಿಡುಗಡೆಯಾದ 'ಮೋಸಗಾಳ್ಳಕು ಮೋಸಗಾಳ್ಳು' ಚಿತ್ರವು ಟಾಲಿವುಡ್​ನ ಹಿಟ್​ ಚಿತ್ರಗಳಲ್ಲಿ ಒಂದು. ಅಂದು 100 ದಿನ ಪೂರೈಸುವ ಮೂಲಕ ದಾಖಲೆ ಬರೆದಿತ್ತು. ಅಲ್ಲದೇ ಈ ಚಿತ್ರದ ಬಳಿಕ ಕೃಷ್ಣ ಭಾರತೀಯ ಚಿತ್ರರಂಗದ ಗಮನ ಸೆಳೆದರು.

ಇನ್ನು SSMB28 ಚಿತ್ರದ ಬಳಿಕ ಮಹೇಶ್​ ಬಾಬು ಅವರಿಗೆ ಆರ್​ಆರ್​ಆರ್​ ಖ್ಯಾತಿಯ ಎಸ್​ಎಸ್​ ರಾಜಮೌಳಿ ಆ್ಯಕ್ಷನ್​ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ SSMB29 ಎಂದು ತಾತ್ಕಾಲಿಕ ಹೆಸರು ಕೊಡಲಾಗಿದೆ. ಚಿತ್ರದ ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ ಎಂಬ ಮಾತು ಇದೆ. ಚಿತ್ರದ ಚಿತ್ರೀಕರಣ ಭಾಗಶಃ ದಟ್ಟಾರಣ್ಯದಲ್ಲೇ ನಡೆಯಲಿದೆ ಎಂದು ರಾಜಮೌಳಿ ಅವರೇ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: ಉಚಿತ ಅಕ್ಕಿ ಕೊಟ್ಟರೆ ಸೋಮಾರಿಗಳಾಗ್ತಾರೆ ಎಂಬುದು ತಪ್ಪು ಹೇಳಿಕೆ: ಡಾಲಿ ಧನಂಜಯ್

ABOUT THE AUTHOR

...view details