ಕರ್ನಾಟಕ

karnataka

ETV Bharat / entertainment

'ಹೆಣ್ಣು ಮಕ್ಕಳು ನಿಜಕ್ಕೂ ವಿಶೇಷ..' ಆಲಿಯಾ-ರಣ್‌ಬೀರ್‌ ದಂಪತಿಗೆ ಮಹೇಶ್​ ಬಾಬು ಅಭಿನಂದನೆ - ಆಲಿಯಾ ಭಟ್​ ರಣ್​ಬೀರ್​ ಮಗಳು

ಆಲಿಯಾ ಭಟ್​ ಹಾಕಿರುವ ಪೋಸ್ಟ್​ ರಿ ಶೇರ್​ ಮಾಡಿರುವ ಮಹೇಶ್​ ಬಾಬು, ಹೆಣ್ಣು ಮಕ್ಕಳು ನಿಜಕ್ಕೂ ವಿಶೇಷ! ಆಲಿಯಾ ಭಟ್​ ಹಾಗೂ ರಣ್​ಬೀರ್​ ಗೆ ಅಭಿನಂದನೆಗಳು ಎಂದು ಕ್ಯಾಪ್ಷನ್​ ನೀಡಿದ್ದಾರೆ.

Mahesh Babu and Raliya couple
ಮಹೇಶ್​ ಬಾಬು ಮತ್ತು ರಲಿಯಾ ಜೋಡಿ

By

Published : Nov 7, 2022, 7:23 AM IST

ಬಾಲಿವುಡ್​ ಸ್ಟಾರ್​ ಜೋಡಿಗಳಾದ ಆಲಿಯಾ ಭಟ್​ ಹಾಗೂ ರಣ್​ಬೀರ್​ ಕಪೂರ್​ ಭಾನುವಾರ(ನಿನ್ನೆ) ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಈ ಸಿಹಿ ಸುದ್ದಿಯನ್ನು ಆಲಿಯಾ ಭಟ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಟಾಲಿವುಡ್​ ಸ್ಟಾರ್​ ಮಹೇಶ್​ ಬಾಬು ಕೂಡಾ ಅಭಿನಂದನೆ ತಿಳಿಸಿದ್ದಾರೆ.

ಆಲಿಯಾ ಭಟ್​ ಹಾಕಿರುವ ಪೋಸ್ಟ್​ ರಿ ಶೇರ್​ ಮಾಡಿರುವ ಮಹೇಶ್​ ಬಾಬು, "ಹೆಣ್ಣು ಮಕ್ಕಳು ನಿಜಕ್ಕೂ ವಿಶೇಷ. ಆಲಿಯಾ ಭಟ್​ ಹಾಗೂ ರಣ್​ಬೀರ್‌ಗೆ ಅಭಿನಂದನೆಗಳು" ಎಂದಿದ್ದಾರೆ.

"ನಮ್ಮ ಜೀವನದ ಅತ್ಯುತ್ತಮ ಸುದ್ದಿ ಇದು. ಎಂತಹ ಮ್ಯಾಜಿಕಲ್​ ಹುಡುಗಿ. ನಾವು ಪೋಷಕರಾಗಿದ್ದೇವೆ. ಪ್ರೀತಿ ತುಂಬಿ ತುಳುಕುತ್ತಿದೆ" ಎಂದು ಆಲಿಯಾ ಭಟ್‌ ಸೋಶಿಯಲ್ ಮೀಡಿಯಾ ಪೋಸ್ಟ್​ನಲ್ಲಿ ನಿನ್ನೆ ಖುಷಿ ಹಂಚಿಕೊಂಡಿದ್ದರು.

ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಾಲಿಯಾ ಕುಟುಂಬದಲ್ಲಿ ಸಂತಸ

ABOUT THE AUTHOR

...view details