ಕರ್ನಾಟಕ

karnataka

ETV Bharat / entertainment

'ಗುಂಟೂರು ಕಾರಂ' ಸಿನಿಮಾದ ಪ್ರೀ-ರಿಲೀಸ್: ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿದ ಮಹೇಶ್ ಬಾಬು - ಗುಂಟೂರು ಕಾರಂ

'ಗುಂಟೂರು ಕಾರಂ' ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ತವರೂರಿನಲ್ಲಿ ಆಯೋಜಿಸಿರುವುದಕ್ಕೆ ನಟ ಮಹೇಶ್ ಬಾಬು ಸಂತಸ ವ್ಯಕ್ತಪಪಡಿಸಿದರು. ಈ ಸಮಾರಂಭವನ್ನು ಟೈಮ್​ಲೆಸ್ ಮೆಮೊರಿ ಎಂದು ಕರೆದಿದ್ದಾರೆ. ಪ್ರಿ-ರಿಲೀಸ್ ಈವೆಂಟ್‌ಗೆ ಆಗಮಿಸಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರವು ಸಂಕ್ರಾಂತಿ ಮುನ್ನ ಅಂದರೆ, ಜನವರಿ 12 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

Mahesh Babu  Namrata Shirodkar  Guntur Kaaram pre release  ಗುಂಟೂರು ಕಾರಂ  ನಟ ಮಹೇಶ್ ಬಾಬು
'ಗುಂಟೂರು ಕಾರಂ' ಸಿನಿಮಾದ ಪ್ರೀ-ರಿಲೀಸ್: ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿದ ಮಹೇಶ್ ಬಾಬು

By ETV Bharat Karnataka Team

Published : Jan 10, 2024, 4:19 PM IST

ಹೈದರಾಬಾದ್: ಗುಂಟೂರು ಕಾರಂ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದ ನಂತರ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು, ತಮ್ಮ ಅಭಿಮಾನಿಗಳಿಗೆ ಸ್ಮರಣೀಯ ರಾತ್ರಿಗಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವ ಪೋಸ್ಟ್​ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೂಪರ್‌ಸ್ಟಾರ್ ಮಹೇಶ್​ ಬಾಬು ತಮ್ಮ ತವರು ಗುಂಟೂರಿನಲ್ಲಿ ಅಭಿಮಾನಿಗಳ ಗುಂಪು ಉದ್ದೇಶಿಸಿ ಇನ್​​​​ಸ್ಟಾಗ್ರಾಂನಲ್ಲಿ ಈ ರೀತಿ ಬರೆದುಕೊಂಡಿದ್ದು, "ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು, 'ಗುಂಟೂರು ಕಾರಂ' ಸಿನಿಮಾದ ಪ್ರೀ- ರಿಲೀಸ್ ಕಾರ್ಯಕ್ರಮ ನನ್ನ ತವರು ಮನೆಯಲ್ಲಿ ಆಯೋಜಿಸಿರುವುದಕ್ಕೆ ತುಂಬಾ ಖುಷಿ ತಂದಿದೆ. ನಾನು ನನ್ನ ಹೃದಯದಲ್ಲಿ ಹಿಡಿದಿಟ್ಟುಕೊಳ್ಳುವ ಸಾರ್ವಕಾಲಿಕ ಸ್ಮರಣಿಯ ಕಾರ್ಯಕ್ರಮ ಇದಾಗಿದೆ. ನಿಮ್ಮೆಲ್ಲರನ್ನೂ ಹೃದಯ ಪೂರ್ವಕವಾಗಿ ಪ್ರೀತಿಸುತ್ತೇನೆ. ನನ್ನ ಸೂಪರ್‌ಫ್ಯಾನ್ಸ್ ಆದ ನಿಮ್ಮನ್ನು ಮತ್ತೆ ಅತಿ ಶೀಘ್ರದಲ್ಲಿ ನೋಡಲು ಎದುರು ನೋಡುತ್ತಿದ್ದೇನೆ. ಸಂಕ್ರಾಂತಿ ಹಬ್ಬ ಈಗ ಶುರುವಾಗಿದೆ. ಕಾರ್ಯಕ್ರಮದ ಉದ್ದಕ್ಕೂ ಎಲ್ಲ ಬೆಂಬಲ ಮತ್ತು ಸಹಾಯಕ್ಕಾಗಿ ಗುಂಟೂರು ಪೊಲೀಸರಿಗೆ ವಿಶೇಷ ಧನ್ಯವಾದಗಳು'' ಎಂದು ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ನಮ್ರತಾ ಇನಸ್ಟಾಗ್ರಾಂನಲ್ಲಿ ಆಸಕ್ತಿದಾಯಕ ಪೋಸ್ಟ್:ಮಹೇಶ್ ಬಾಬು ಅಭಿಮಾನಿಗಳಿಗಾಗಿ ನಮ್ರತಾ ಅವರು ಇನಸ್ಟಾಗ್ರಾಂನಲ್ಲಿ ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಹಲವರು ಮಹೇಶ್ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಅನೇಕರು ಅವರನ್ನು ಬೆಂಬಲಿಸುತ್ತಾರೆ. ಪ್ರತಿ ಪ್ರಯತ್ನದಲ್ಲೂ ಜೊತೆಯಾಗಿ ನಿಲ್ಲುವ ಮೂಲಕ, ಹೆಚ್ಚು ಕೆಲಸ ಮಾಡಲು ಸಹಾಯ ಮಾಡುತ್ತಿದೆ. (ಗುಂಟೂರು ಕಾರಂ ಪ್ರೀ ರಿಲೀಸ್ ಈವೆಂಟ್ ಕುರಿತು) ಗುಂಟೂರಿನಲ್ಲಿ ಅಭಿಮಾನಿಗಳು ತೋರುತ್ತಿರುವ ಪ್ರೀತಿಯನ್ನು ನೋಡಿ ಹೆಮ್ಮೆಯಿಂದ ಒಂದು ವಿಷಯ ಹೇಳಲು ಬಯಸುತ್ತೇನೆ. ಮಹೇಶ್ ಅಭಿಮಾನಿಗಳಿಗೆ ನೀವು ಭಾವುಕರಾಗಿದ್ದೀರಿ. ಈ ಪ್ರೀತಿ ಹೀಗೆ ಮುಂದುವರೆಯಲಿ ಎಂದು ನಾನು ಬಯಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ನಮ್ರತಾ ಹಂಚಿಕೊಂಡ ವಿಡಿಯೋದಲ್ಲೇನಿದೆ?:ಮಹೇಶ್ ಅಭಿನಯದ 'ಗುಂಟೂರು ಕಾರಂ' ಚಿತ್ರ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12ರಂದು ತೆರೆಗೆ ಬರಲಿದೆ. ಈ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮಹೇಶ್ ಭಾವುಕರಾದರು. "ನೀವು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತೀರಿ. ಸಂಕ್ರಾಂತಿ ನನಗೆ ಮತ್ತು ನನ್ನ ತಂದೆಗೆ ತುಂಬಾ ಸರಿಹೊಂದುವ ಹಬ್ಬ. ಆ ಸೀಸನ್‌ನಲ್ಲಿ ನಮ್ಮ ಚಿತ್ರ ಬಿಡುಗಡೆಯಾದರೆ ಅದು ಬ್ಲಾಕ್‌ಬಸ್ಟರ್ ಆಗಲಿದೆ. ಈ ಬಾರಿಯೂ ಅದೇ ಪುನರಾವರ್ತನೆಯಾಗಲಿದೆ. ಆದರೆ, ಈಗ ನನ್ನ ತಂದೆ ಇಲ್ಲ. ಅವರು ಇದ್ದಿದ್ದರೆ, ನನ್ನ ಸಿನಿಮಾಗಳನ್ನು ನೋಡುತ್ತಾ ನನ್ನ ದಾಖಲೆಗಳು ಮತ್ತು ಕಲೆಕ್ಷನ್‌ಗಳ ಬಗ್ಗೆ ಮಾತನಾಡುತ್ತಾ ಆನಂದಿಸುತ್ತಿದ್ದರು. ಪ್ರಸ್ತುತ ಇವೆಲ್ಲವನ್ನೂ ನೀವೇ ಹೇಳಬೇಕು. ಇನ್ಮುಂದೆ ನೀನೇ ನನ್ನ ತಾಯಿ ಮತ್ತು ತಂದೆ’’ ಎಂದು ತಿಳಿಸಿರುವ ವಿಡಿಯೋವನ್ನು ನಮ್ರತಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು:ಮಹೇಶ್ ಬಾಬು ಚಿತ್ರ ಗುಂಟೂರು ಕಾರಂ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರು ಶ್ರಮಿಸುತ್ತಿದ್ದು, ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಚಿತ್ರವನ್ನು 2005ರಲ್ಲಿ ಅಥಡು ಮತ್ತು 2010ರಲ್ಲಿ ಖಲೇಜಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಗುಂಟೂರು ಕಾರಂ ಸಿನಿಮಾದಲ್ಲಿ ನಟ ಮಹೇಶ್ ಮತ್ತು ಚಲನಚಿತ್ರ ನಿರ್ಮಾಪಕ ತ್ರಿವಿಕ್ರಮ್ ಶ್ರೀನಿವಾಸ್ ಜೋಡಿ ಒಂದಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ, ಜಗಪತಿ ಬಾಬು, ಜಯರಾಮ್, ರಮ್ಯಾ ಕೃಷ್ಣನ್, ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್ ಮತ್ತು ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬ್ಯುಸಿ ಶೆಡ್ಯೂಲ್​ನಿಂದ ಶೀಟ್​ ಮಾಸ್ಕ್​ ಮೂಲಕ ತ್ವಚೆ ಆರೈಕೆಗೆ ಮುಂದಾದ ರಶ್ಮಿಕಾ ಮಂದಣ್ಣ

ABOUT THE AUTHOR

...view details