ಹೈದರಾಬಾದ್ (ತೆಲಂಗಾಣ):ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅವರು ರಜಾ ದಿನಗಳನ್ನು ಸಂಭ್ರಮಿಸುತ್ತಾರೆ. ಸಾಲು ಸಾಲು ಚಿತ್ರಗಳೊಂದಿಗೆ ಮುಂದಡಿ ಇಡುತ್ತಿರುನ ಹೀರೋ ಸ್ವಲ್ಪ ಗ್ಯಾಪ್ ಸಿಕ್ಕರೂ ಸಾಕು ಫ್ಯಾಮಿಲಿ ಸಮೇತ ಟೂರ್ ಹೋಗ್ತಾರೆ. ಈಗಾಗಲೇ ಫ್ರಾನ್ಸ್ ಮತ್ತು ಜರ್ಮನಿಗೆ ಪ್ರವಾಸ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಮಹೇಶ್ ಮತ್ತೊಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದರು. ಈ ಬಾರಿ ಅವರು ದುಬೈಗೆ ತೆರಳಿದ್ದರು. ಆದರೆ, ಮಹೇಶ್ ದುಬೈ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ.
ಸಿನಿಮಾ ಹಾಗೂ ವ್ಯಾಪಾರದ ಮೂಲಕ ಎರಡೂ ಕೈಗಳಲ್ಲೂ ಸಂಪಾದನೆ ಮಾಡುತ್ತಿರುವ ಮಹೇಶ್ ದುಬೈನಲ್ಲಿ ದುಬಾರಿ ಬೆಲೆಯ ವಿಲ್ಲಾ(ಐಷಾರಾಮಿ ಮನೆ) ಖರೀದಿಸಿದ್ದಾರಂತೆ. ಈ ವಿಲ್ಲಾದ ನೋಂದಣಿ ಪ್ರಕ್ರಿಯೆಗಾಗಿ ದುಬೈಗೆ ತೆರಳಿದ್ದರು ಎಂಬ ವರದಿಗಳಿವೆ. ಈ ನೋಂದಣಿ ಪ್ರಕ್ರಿಯೆಗೆ ಎರಡು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಮಹೇಶ್ ಬಾಬು ತುಟಿಬಿಚ್ಚಿಲ್ಲ.
'ಸರ್ಕಾರ ವಾರಿ ಪಾಟ' ಸಿನಿಮಾ ಕಳೆದ ವರ್ಷ ಮೇ 12 ರಂದು ಬಿಡುಗಡೆಯಾಗಿತ್ತು. ಆ ಸಿನಿಮಾ ಹೆಚ್ಚು ಚಿತ್ರಮಂದಿರಗಳಲ್ಲಿ ಸದ್ದು ಮಾಡಿರಲಿಲ್ಲ. ಸದ್ಯ ಸ್ಟಾರ್ ಹೀರೋ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ SSMB 28 ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು ಒಂದಷ್ಟು ಅಡೆತಡೆಗಳು ಎದುರಾಗಲಿವೆ. ಇದಕ್ಕೆ ಕಾರಣ ನಾಯಕ ಮಹೇಶ್ ಮತ್ತು ತ್ರಿವಿಕ್ರಮ್ ನಡುವೆ ಸಾಮರಸ್ಯದ ಕೊರತೆ ಎಂಬ ವರದಿಗಳಿವೆ.