ಕರ್ನಾಟಕ

karnataka

ETV Bharat / entertainment

ದುಬಾರಿ ಬೆಲೆಯ ಕಾರು ಖರೀದಿಸಿದ ಸೌತ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು.. ಬೆರಗಾಗಿಸುವಂತಿದೆ ಬೆಲೆ - ರೇಂಜ್​ ರೋವರ್

ಮಹೇಶ್​ ಬಾಬು ಅವರು ಇತ್ತೀಚೆಗೆ ತಮ್ಮ ಅಚ್ಚುಮೆಚ್ಚಿನ ದುಬಾರಿ ಕಾರೊಂದನ್ನು ಮನೆಗೆ ತಂದಿದ್ದಾರೆ.

mahesh-babu-became-the-first-star-to-buy-such-a-luxury-car-the-price-will-blow-your-mind
ದುಬಾರಿ ಬೆಲೆಯ ಕಾರು ಖರೀದಿಸಿದ ಸೌತ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು.. ಬೆಲೆ ಕೇಳಿದರೆ ಶಾಕ್​ ಆಗ್ತೀರಾ..

By

Published : Jun 24, 2023, 11:09 PM IST

Updated : Jun 26, 2023, 12:27 PM IST

ಮುಂಬೈ :ಭಾರತೀಯ ಚಿತ್ರರಂಗದಲ್ಲಿ ಹಲವು ನಟ ನಟಿಯರು ತಮ್ಮಲ್ಲಿ ದುಬಾರಿ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಎಲ್ಲ ನಟ ನಟಿಯರಿಗೆ ದುಬಾರಿ ಕಾರು ಹೊಂದುವುದು ಒಂದು ಪ್ರತಿಷ್ಠೆಯ ವಿಷಯವಾಗಿಯೂ ಚಾಲ್ತಿಯಲ್ಲಿದೆ. ಅದಲ್ಲದೆ ಸಿನೆಮಾ ರಂಗದ ಖ್ಯಾತ ತಾರೆಯರು ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುವಾಗ ತಮ್ಮದೇ ಐಷಾರಾಮಿ ಕಾರುಗಳಲ್ಲಿ ಆಗಮಿಸುತ್ತಾರೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ದಕ್ಷಿಣ ಚಿತ್ರರಂಗದ ಸೂಪರ್​ ಸ್ಟಾರ್ ಎಂದೇ ಖ್ಯಾತರಾದ ಪ್ರಿನ್ಸ್​​ ಮಹೇಶ್​ ಬಾಬು ಅವರು ದುಬಾರಿ ಕಾರು ಖರೀದಿ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಮಹೇಶ್​ ಬಾಬು ಅವರು ಇತ್ತೀಚೆಗೆ ತಮ್ಮ ಅಚ್ಚುಮೆಚ್ಚಿನ ದುಬಾರಿ ಕಾರೊಂದನ್ನು ಮನೆಗೆ ತಂದಿದ್ದಾರೆ. ಮಹೇಶ್ ಬಾಬು ಅವರ ಬಳಿ ದುಬಾರಿ ಕಾರುಗಳ ಕಲೆಕ್ಷನ್​ಗಳೇ ಇವೆ. ಇದಕ್ಕೆ ಹೊಸ ರೇಂಜ್​ ರೋವರ್ ಕಾರೊಂದು​ ಸೇರ್ಪಡೆಯಾಗಿದೆ. ಮಹೇಶ್ ಬಾಬು ಅವರು ಸುಮಾರು 5.4 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ರೇಂಜ್​ ರೋವರ್​ ಕಾರನ್ನು ಖರೀದಿಸಿದ್ದು, ಗೋಲ್ಡನ್​ ಬಣ್ಣದ ರೇಂಜ್​ ರೋವರ್​ ಕಾರು ಖರೀದಿ ಮಾಡಿದ ಹೈದರಾಬಾದ್​​ನ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಮಹೇಶ್​ ಬಾಬು ಪಾತ್ರರಾಗಿದ್ದಾರೆ.

ಮಹೇಶ್​ ಬಾಬು ತೆಲುಗು ಸಿನೆಮಾ ರಂಗದಲ್ಲೇ ಅತೀ ಶ್ರೀಮಂತ ನಟರಲ್ಲಿ ಒಬ್ಬರು. ಇವರು ಕಾರಿನ ಬಗ್ಗೆ ಹೆಚ್ಚಿನ ಕ್ರೇಜ್​ ಹೊಂದಿದ್ದಾರೆ. ಈ ಟಾಲಿವುಡ್​ ಪ್ರಿನ್ಸ್​ ಬಳಿ ಹಲವು ಐಷಾರಾಮಿ ಕಾರುಗಳು ಸಹ ಇವೆ. ಇದಕ್ಕೆ ರೇಂಜ್​ ರೋವರ್​ ಎಸ್​ವಿ ಹೊಸ ಸೇರ್ಪಡೆಯಾಗಿದೆ. ಇದರ ಬೆಲೆ ಸುಮಾರು 5.4 ಕೋಟಿ ಎಂದು ಹೇಳಲಾಗಿದೆ.

ಈ ರೇಂಜ್​ ರೋವರ್​ ಕಾರು ವಿವಿಧ ಖ್ಯಾತ ನಟರ ಅಚ್ಚುಮೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಇದೇ ರೀತಿಯ ಕಾರು ಮಲಯಾಳಂ ಖ್ಯಾತ ನಟ ಮೋಹನ್​ ಲಾಲ್​​ ಸೇರಿದಂತೆ ಜೂನಿಯರ್​ ಎನ್​​ಟಿಆರ್​​, ಚಿರಂಜೀವಿ ಮುಂತಾದ ನಟರ ಬಳಿ ಇದೆ. ಈ ಗುಂಪಿಗೆ ಮಹೇಶ್​ ಬಾಬು ಸೇರಿದ್ದು, ಗೋಲ್ಡನ್​ ಬಣ್ಣದ ರೇಂಜ್​ ರೋವರ್ ಖರೀದಿ ಮಾಡಿದ ಮೊದಲ ಹೈದರಾಬಾದ್​​ನ ವ್ಯಕ್ತಿಯಾಗಿದ್ದಾರೆ. ರೇಂಜ್​ ರೋವರ್​ ಭಾರತದಲ್ಲಿ ಮಾರಾಟವಾಗುತ್ತಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.

ಮಹೇಶ್ ಬಾಬು ಅವರ ಸಿನೆಮಾ ವಿಚಾರವಾಗಿ ಮಾತನಾಡುವುದಾದರೆ, ಇವರು ಈಗಾಗಲೇ ತ್ರಿವಿಕ್ರಮ್​ ನಿರ್ದೇಶನ ಸಿನೆಮಾ ಗುಂಟೂರು ಕರಮ್​ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಟೀಸರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಸಿನೆಮಾದ ಟೀಸರ್​ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಕ್ಷನ್​ ಡ್ರಾಮಾ ಕಥಾ ಹಂದರ ಹೊಂದಿರುವ ಸಿನೆಮಾ ಇದಾಗಿದ್ದು, 2024ರಲ್ಲಿ ತೆರೆ ಕಾಣಲಿದೆ. ಸಿನೆಮಾದಲ್ಲಿ ಶ್ರೀ ಲೀಲಾ, ಜಗಪತಿ ಬಾಬು, ಮೀನಾಕ್ಷಿ ಚೌಧರಿ ಮುಂತಾದ ಖ್ಯಾತ ನಟ ನಟಿಯರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ :ಉಪ್ಪಿ ಹುಟ್ಟುಹಬ್ಬಕ್ಕೆ ಪತ್ನಿಯ ಅಡ್ವಾನ್ಸ್​ ಗಿಫ್ಟ್​​​​... ಮನೆಗೆ ಬಂತು ದುಬಾರಿ ಕಾರು!

Last Updated : Jun 26, 2023, 12:27 PM IST

ABOUT THE AUTHOR

...view details