ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರದ ಪೋಸ್ಟರ್ ಹಂಚಿಕೊಂಡು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಪ್ರಸ್ತುತ ಚಿತ್ರಕ್ಕೆ SSMB 28 ಎಂದು ಹೆಸರಿಡಲಾಗಿದ್ದು, ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
ಭಾನುವಾರ ಸಂಜೆ ಟ್ವಿಟರ್‌ನಲ್ಲಿ ಮಹೇಶ್ ಬಾಬು ತನ್ನ ಮುಂಬರುವ ಪ್ರಾಜೆಕ್ಟ್ SSMB 28 ಪೋಸ್ಟರ್ ಹಂಚಿಕೊಂಡರು. ರಿಲೀಸ್ ಆದ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಅವರರಗಡ್ ಲುಕ್ ನೋಡಬಹುದು. ಸಿಗಾರ್ ಸೇದುತ್ತಾ ಬರುತ್ತಿದ್ದು, ವಿಲನ್‌ಗಳು ಅವರ ಮುಂದೆ ಮಂಡಿಯೂರಿ ಕುಳಿತಿರುವ ದೃಶ್ಯವಿದೆ. ಪೋಸ್ಟರ್‌ನಲ್ಲಿ "13.01.2024! #Save The Date" ಎಂಬ ಶೀರ್ಷಿಕೆಯೊಂದಿಗೆ ಸಿನಿಮಾ ಬಿಡುಗಡೆ ದಿನವನ್ನು ಮಹೇಶ್ ಬಾಬು ಪ್ರಕಟಿಸಿದ್ದಾರೆ.
SSMB 28 ಕುರಿತು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಇದೇ ವೇಳೆ ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಸಿನಿಮಾ ಕೂಡ ಮುಂದಿನ ವರ್ಷದ ಜನವರಿ 12 ರಂದು ಸಂಕ್ರಾಂತಿ ಗಿಫ್ಟ್ ಆಗಿ ಬಿಡುಗಡೆಯಾಗಲಿದೆ. ಎರಡೂ ಸಿನಿಮಾಗಳು ಸಂಕ್ರಾಂತಿಯಂದೇ ರಿಲೀಸ್ ಆಗುತ್ತಿರುವುದು ಸದ್ಯದ ಹಾಟ್ ಟಾಪಿಕ್. ಒಂದೇ ದಿನದ ಅಂತರದಲ್ಲಿ ಎರಡು ದೊಡ್ಡ ಸಿನಿಮಾಗಳು ತೆರೆ ಕಂಡರೆ ಏಟು ಬೀಳೋದು ಗ್ಯಾರಂಟಿ ಅನ್ನೋದು ಒಟ್ಟು ಲೆಕ್ಕಾಚಾರ.
ದಿಢೀರ್ ಆಗಿ ಮಹೇಶ್ ಬಾಬು ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೇ "ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ" ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತಾ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.