ಕರ್ನಾಟಕ

karnataka

ETV Bharat / entertainment

ನಟ ವಿಶಾಲ್ ಆಸ್ತಿ ವಿವರ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟ ವಿಶಾಲ್ ಆಸ್ತಿ ವಿವರ ಒಳಗೊಂಡು ಅಫಿಡವಿಟ್ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದಾರೆ.

By

Published : Aug 27, 2022, 12:48 PM IST

madras high court order to actor Vishal should submit all his assets details
ನಟ ವಿಶಾಲ್ ಆಸ್ತಿ ವಿವರ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ಲೈಕಾ ಕಂಪನಿ ದಾಖಲಿಸಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟ ವಿಶಾಲ್ ಮದ್ರಾಸ್ ಹೈಕೋರ್ಟ್​ಗೆ ಇಂದು ಹಾಜರಾಗಿದ್ದರು. ವಿಶಾಲ್ ಆಸ್ತಿ ವಿವರಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ನಟ ವಿಶಾಲ್ ಅವರು ತಮ್ಮ ನಿರ್ಮಾಣ ಸಂಸ್ಥೆ ವಿಶಾಲ್ ಫಿಲ್ಮ್ ಫ್ಯಾಕ್ಟರಿ ನಿರ್ಮಾಣಕ್ಕಾಗಿ ಅನ್ಬುಚೆಜಿಯನ್ ಅವರ ಗೋಪುರಂ ಫಿಲ್ಮ್ಸ್ (Anbuchezhian's Gopuram Films)ನಿಂದ 21 ಕೋಟಿ 29 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ನಂತರ ಲೈಕಾ ಕಂಪನಿ (Leica Productions) ಈ ಸಾಲದ ಮೊತ್ತವನ್ನು ಪಾವತಿಸಿತ್ತು.

ಸಾಲದ ಪಾವತಿಗೆ ಸಂಬಂಧಿಸಿದಂತೆ ವಿಶಾಲ್ ಮತ್ತು ಲೈಕಾ ನಡುವಿನ ಒಪ್ಪಂದದಲ್ಲಿ, ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿ ಮಾಡುವವರೆಗೆ ವಿಶಾಲ್ ಫಿಲ್ಮ್ ಕಂಪನಿಯ ಎಲ್ಲ ಚಿತ್ರಗಳ ಹಕ್ಕುಗಳನ್ನು ಲೈಕಾಗೆ ನೀಡಲಾಗುವುದು ಎಂದು ಖಾತರಿಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಲೈಕಾ ಕಂಪನಿಯು ತಮಗೆ ಬರಬೇಕಿದ್ದ 21 ಕೋಟಿ 29 ಲಕ್ಷ ರೂಪಾಯಿಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ.

ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ನ್ಯಾಯಾಲಯ ಮೂರು ವಾರದೊಳಗೆ 15 ಕೋಟಿ ರೂಪಾಯಿಯನ್ನು ಹೈಕೋರ್ಟ್ ಮುಖ್ಯ ರಿಜಿಸ್ಟ್ರಾರ್ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ವಿಶಾಲ್ ಕಡೆಯವರಿಗೆ ಸೂಚಿಸಿತ್ತು. ಇಂದು ಮತ್ತೆ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಲಯದ ಆದೇಶದಂತೆ ನಟ ವಿಶಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದು, ಪ್ರಕರಣದ ವಿಚಾರಣೆ ನಡೆಯಿತು.

ಇದನ್ನೂ ಓದಿ:ಓದೆಲಾ ರೈಲ್ವೆ ಸ್ಟೇಷನ್​ನಲ್ಲಿ ಕನ್ನಡದ ಸಿಂಹ… ವಸಿಷ್ಠನ ಅಭಿನಯಕ್ಕೆ ತೆಲುಗು ಪ್ರೇಕ್ಷಕ ಫಿದಾ

ವಾದ ವಿವಾದ ಆಲಿಸಿ, ವಿಶಾಲ್ ಆಸ್ತಿ ವಿವರಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಲಾಗಿದೆ. ಅಲ್ಲದೇ ಪ್ರತಿ ದಿನವೂ ವಿಶಾಲ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ABOUT THE AUTHOR

...view details