ಕರ್ನಾಟಕ

karnataka

ETV Bharat / entertainment

ಹೊಸ ವರ್ಷಕ್ಕೆ ರಿಲೀಸ್ ಆಯ್ತು ಮಧುಪಾನದ ಹೊಸ ಪಾಠ ಆಲ್ಬಂ ಸಾಂಗ್ - madhupanada hosa pata

ಮಧುಪಾನದ ಹೊಸ ಪಾಠ ಆಲ್ಬಂ ಸಾಂಗ್ - ಹೊಸ ವರ್ಷಕ್ಕೆ ಬಿಡುಗಡೆ ಅದ ಪಾರ್ಟಿ ಸಾಂಗ್ - ಸ್ನೇಹಿತರ ತಂಡದಿಂದ ನಿರ್ಮಾಣವಾಗಿದೆ ಈ ಹಾಡು.

madhupanada hosa pata album song
ಮಧುಪಾನದ ಹೊಸ ಪಾಠ ಆಲ್ಬಂ ಸಾಂಗ್

By

Published : Jan 4, 2023, 7:51 PM IST

ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಹಾಗೂ ಉತ್ತಮ ಕಂಟೆಂಟ್ ಇರುವ ಚಿತ್ರಗಳು ಮೂಡಿ ಬರುತ್ತಿವೆ. ಇಡೀ ಭಾರತೀಯ ಚಿತ್ರರಂಗವೇ ಸೌತ್​ ಸಿನಿಮಾ, ಸ್ಯಾಂಡಲ್​ವುಡ್​ ಸಿನಿಮಾಗಳ ಬಗ್ಗೆ ಮಾತನಾಡುವಂತಾಗಿದೆ. ಕಾಂತಾರ, ಕೆಜಿಎಫ್ 1 ಮತ್ತು ಕೆಜಿಎಫ್​​ 2ಗಳಂತಹ ಸಿನಿಮಾಗಳು ದೇಶದೆಲ್ಲೆಡೆ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಬಳಿಕ ಸ್ಯಾಂಡಲ್​ವುಡ್​ ಪ್ರತಿಷ್ಠೆ ಮತ್ತಷ್ಟು ಹೆಚ್ಚಿದೆ. ಕನ್ನಡ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಮಧುಪಾನದ ಹೊಸ ಪಾಠ ಆಲ್ಬಂ ಸಾಂಗ್ ಟೀಮ್

ಅದರಲ್ಲೂ ಸೂಪರ್​ ಹಿಟ್​ ಸಿನಿಮಾಗಳ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ನಿಂದ ಮುಂದಿನ ಐದು ವರ್ಷಗಳಲ್ಲಿ ಚಿತ್ರರಂಗದಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದು, ಕಲಾವಿದರಿಗೆ, ಸಿನಿ ಕಾರ್ಮಿಕರಿಗೆ ಪ್ರೋತ್ಸಾಹ ನೀಡಿದಂತಿದೆ. ಉತ್ತಮ ಕಥೆಗಳ ಜೊತೆಗೆ ಮೇಕಿಂಗ್​ ವಿಷಯದಲ್ಲೂ ಸ್ಯಾಂಡಲ್​ವುಡ್​ ಹೆಸರು ಮಾಡುತ್ತಿದ್ದು, ಹೊಸ ಪ್ರತಿಭೆಗಳ ಎಂಟ್ರಿ ಆಗುತ್ತಿದೆ.

ಮಧುಪಾನದ ಹೊಸ ಪಾಠ ಆಲ್ಬಂ ಸಾಂಗ್:ಪ್ರತಿಭಾನ್ವಿತ ಟೀಮ್ ಒಂದು ಹೊಸ ವರ್ಷಕ್ಕೆ ಆಲ್ಬಂ ಸಾಂಗ್ ಮೂಲಕ ಸ್ಯಾಂಡಲ್ ವುಡ್​​ಗೆ ಎಂಟ್ರಿ ಕೊಟ್ಟಿದೆ. ಅವರೆಲ್ಲ ಸುಮಾರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಸ್ನೇಹಿತರು. ಅಂತಹ ಸ್ನೇಹ ವೃಂದದಿಂದ ಮಧುಪಾನದ ಹೊಸ ಪಾಠ ಎಂಬ ಪಾರ್ಟಿ ಸಾಂಗ್ ಹೊಸ ವರ್ಷದ ಹೊಸ್ತಿಲಿನಲ್ಲಿ ಬಿಡುಗಡೆ ಆಗಿದೆ. ಈ ಕುರಿತು ಇತ್ತೀಚೆಗೆ ಆಲ್ಬಂ ಸಾಂಗ್ ತಂಡದ ಸದಸ್ಯರು ಮಾಹಿತಿ ಹಂಚಿಕೊಂಡರು.

ಸ್ನೇಹಿತರ ತಂಡದಿಂದ ನಿರ್ಮಾಣವಾದ ಹಾಡು: ಈ ಆಲ್ಬಂ ಸಾಂಗ್​ನಲ್ಲಿ ಅಭಿನಯಿಸಿ ಹಾಗೂ ನಿರ್ಮಾಣ ಮಾಡಿರೋ ಕಂಗ್ಲೀಷ್ ಡ್ಯಾಡಿ ಚಿಕ್ಕು ಅಂದ್ರೆ ಚಿಕ್ಕ ವೆಂಕಟ ರಾಮು ಮಾತನಾಡಿ, ನನಗೆ ಕೆಲವು ವರ್ಷಗಳಿಂದ ರ್ಯಾಪರ್ ಆಗಬೇಕೆಂಬ ಕನಸು ಇದೆ. ಎಷ್ಟೋ ಖ್ಯಾತ ರ್ಯಾಪರ್​ಗಳು ನನಗೆ ಸ್ಫೂರ್ತಿ. ಇಪ್ಪತ್ತು ವರ್ಷಗಳಾದರೂ ನಾನು ಒಂದು ಆಲ್ಬಂ ಸಾಂಗ್ ಬಿಡುಗಡೆ ಮಾಡಲು ಆಗಿರಲಿಲ್ಲ. ಆನಂತರ ನನ್ನ ಗೆಳೆಯ ದಕ್ಷಿಣಮೂರ್ತಿ ಸಿಕ್ಕರು. ಈ ಆಲ್ಬಂ ಸಾಂಗ್ ಮಾಡುವ ವಿಚಾರ ತಿಳಿಸಿದರು. ಬಳಿಕ "ಮಧುಪಾನದ ಹೊಸಪಾಠ" ಆಲ್ಬಂ ಸಾಂಗ್ ನಿರ್ಮಾಣವಾಯಿತು ಎಂದರು. ಸಾಹಿತ್ಯ ಬರೆದು‌ ಹಾಡಿರುವ ಜೊತೆಗೆ ಅಭಿನಯವನ್ನೂ ಮಾಡಿರುವ ಖುಷಿ ಇದೆ ಎಂದು ಚಿಕ್ಕ ವೆಂಕಟ ರಾಮು ತಿಳಿಸಿದರು.

ಇದನ್ನೂ ಓದಿ:ವೇದ ಸಿನಿಮಾ ಪ್ರಚಾರ: ಕೋಟೆನಾಡಿಗೆ ಆಗಮಿಸಿದ ಕರುನಾಡ ಚಕ್ರವರ್ತಿ

ಈ ಆಲ್ಬಂ ಸಾಂಗ್​ನಲ್ಲಿ ನಟಿಸಿರುವ ಮತ್ತೋರ್ವ ನಟ ದಕ್ಷಿಣಮೂರ್ತಿ ಮಾತನಾಡಿ, ನನಗೆ ಮೊದಲಿನಿಂದಲೂ ಕಲಾವಿದನಾಗಬೇಕು ಎಂಬ ಕನಸು. ಅದು ಆಗಿರಲಿಲ್ಲ.‌ ಚಿಕ್ಕು (ಚಿಕ್ಕ ವೆಂಕಟ ರಾಮು) ಅವರು ಈ ಹಾಡಿನ ಬಗ್ಗೆ ಹೇಳಿದಾಗ, ಹಾಡು ಇಷ್ಟವಾಯಿತು. ಬಳಿಕ ಹಾಡನ್ನು ನಿರ್ಮಾಣ ಮಾಡಿದೆವು. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಆರವ್ ರಿಶಿಕ್ ಸಂಗೀತ ನೀಡಿದ್ದಾರೆ. ಈ ಆಲ್ಬಂ ಹಾಡಿಗೆ ಆರ್ಟಿಸ್ಟಿಕ್ ಡೈರೆಕ್ಟರ್ ಆಗಿ ಶಕ್ತಿ ಆರ್, ನೃತ್ಯ ನಿರ್ದೇಶಕ ಹಾಗೂ ಸಂಕಲನಕಾರರಾಗಿ ಶಿವಾಸ್ ಕೆ ಫಣಿ ಹಾಗೂ ಛಾಯಾಗ್ರಾಹಕರಾಗಿ ನಿರಂಜನ್ ಬೋಪ್ಪಣ್ಣ ಕಾರ್ಯ ನಿರ್ವಹಿಸಿದ್ದಾರೆ. ಸ್ನೇಹಿತರೇ ಸೇರಿ ಮಾಡಿರುವ ಈ ಹಾಡು ಇದಾಗಿದೆ ಎಂದರು. ಈ ಮಧುಪಾನದ ಹೊಸ ಪಾಠ ಆಲ್ಬಂ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಅವಿನಾಶ್ ಚೆಬ್ಬಿ ಮುಖ್ಯ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.

ಇದನ್ನೂ ಓದಿ:ಪಠಾಣ್: ಅಶ್ಲೀಲ ದೃಶ್ಯ ತೆಗೆಯಲು ಡಿಜಿಪಿಗೆ ಪತ್ರ ಬರೆದ ಮಕ್ಕಳ ಕಲ್ಯಾಣ ಸಮಿತಿ

ABOUT THE AUTHOR

...view details