ಸ್ಯಾಂಡಲ್ವುಡ್ನಲ್ಲಿ ನಿರ್ದೇಶನದ ಜೊತೆಗೆ ನಟನಾಗಿ ಗುರುತಿಸಿಕೊಂಡವರಲ್ಲಿ ಜೋಗಿ ಪ್ರೇಮ್ ಪ್ರಮುಖರು. ಸದ್ಯ ಧ್ರುವ ಸರ್ಜಾ ಸಿನಿಮಾ ನಿರ್ದೇಶಿಸುತ್ತಿರುವ ಪ್ರೇಮ್, ನಟನಾಗಿ ತೆರೆ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ. ಯವ ನಿರ್ದೇಶಕ ಎಂ.ಶಶಿಧರ್ ಅವರು ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಇದೊಂದು ಸೌತ್ ಇಂಡಿಯಾದ ಮೊಟ್ಟ ಮೊದಲ ಝೋಂಬಿ ಚಿತ್ರವಾಗಿದ್ದು, ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇರಲಿದೆಯಂತೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಲು ಚಿತ್ರ ತಂಡದವರು ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಚಿತ್ರದಲ್ಲಿ ಬಹು ಭಾಷಾ ಕಲಾವಿದರೂ ಇದ್ದಾರೆ.
ಚಿತ್ರ ಪ್ರೇಮಿಗಳಿಗೆ ಮತ್ತು ಪ್ರೇಮ್ ಅಭಿಮಾನಿಗಳಿಗೆ ಹೊಸ ಅನುಭವ ಕೊಡಲು ಪ್ರೇಮ್ ಅವರನ್ನು ಈ ಹಿಂದೆ ಯಾರೂ ನೋಡಿರದ ರೀತಿಯಲ್ಲಿ ಹೊಸ ಗೆಟಪ್ ಮತ್ತು ಡಿಫರೆಂಟ್ ಲುಕ್ನಲ್ಲಿ ತೋರಿಸಲು ನಿರ್ದೇಶಕರು ತಯಾರಿ ಮಾಡಿಕೊಂಡಿದ್ದಾರೆ.
ಮೈಸೂರಿನವರಾದ ಎಂ.ಶಶಿಧರ್ (28 ) ಅವರು ಎಂ.ಎಸ್.ಸಿ ಇನ್ ಫಿಲ್ಮ್ ಮೇಕಿಂಗ್ ಕಲಿತವರಾಗಿದ್ದು, VFX ನಲ್ಲಿ ಪರಿಣಿತಿ ಹೊಂದಿದ್ದಾರೆ. ಈಗಾಗಲೇ ಎಲ್ಲಾ ಭಾಷೆಗೆ ಡಬ್ ಆಗಿರುವ, ಸಾಯಿ ಕುಮಾರ್, ಸಂಪತ್ ರಾಜ್, ಅರುಣ್ ಸಾಗರ್, ದೇವಗಿಲ್, ರಾಹುಲ್ ದೇವ್ ಅಂತಹ ತಾರಾ ಬಳಗವಿರುವ ಘಾರ್ಗಾ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಘಾರ್ಗಾ ಚಿತ್ರದ ಮೂಲಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಗನಾದ ಅರುಣ್ ರಾಮ್ ಪ್ರಸಾದ್ ಅವರನ್ನು ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಪರಿಚಯಿಸಿದ್ದಾರೆ.
ಇದನ್ನೂ ಓದಿ:ನಾನಿ ಅಭಿನಯದ ದಸರಾ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಲಿದ್ದಾರೆ ಮಹಾನಟಿ!
ನಿರ್ಮಾಣದ ವಿಚಾರಕ್ಕೆ ಬಂದರೆ ಈ ಹಿಂದೆ ಶಿವರಾಜ್ಕುಮಾರ್ ಅಭಿನಯದ ಪ್ರೇಮ್ ನಿರ್ದೇಶನದ ಜೋಗಿ ಚಿತ್ರಕ್ಕೆ ಬಂಡವಾಳ ಹೂಡಿದ 'A2 FILMS ' ಹಾಗು ಪ್ರೇಮ್ ಡ್ರೀಮ್ಸ್ ಜೊತೆಯಾಗಿ ಬಂಡವಾಳ ಹೂಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಹು ಭಾಷಾ ನಟ ನಟಿಯರು ಅಭಿನಯಿಸಲಿದ್ದಾರೆ. ಇದೇ ತಿಂಗಳು 22ಕ್ಕೆ ಪ್ರೇಮ್ ಹುಟ್ಟು ಹಬ್ಬ ಇರುವುದರಿಂದ ಚಿತ್ರದ ಫಸ್ಟ್ ಲುಕ್ ಬಿಡಲು ಚಿತ್ರ ತಂಡ ತೀರ್ಮಾನಿಸಿದೆ.