ಇಂಡೋ ಕೆನಡಿಯನ್ ಹಾಸ್ಯನಟಿ ಲಿಲ್ಲಿ ಸಿಂಗ್ (comedian Lilly Singh) ಅವರು ಶುಕ್ರವಾರದಂದು ಸೂಪರ್ ಮಾಡೆಲ್ ಮತ್ತು ಖ್ಯಾತ ಅಂತಾರಾಷ್ಟ್ರೀಯ ಗಾಯಕ ಜಸ್ಟಿನ್ ಬೈಬರ್ (Justin Bieber) ಅವರ ಪತ್ನಿ ಹೈಲಿ ರೋಡ್ ಬಾಲ್ಡ್ವಿನ್ ಬೈಬರ್ (Hailey Rhode Baldwin Bieber) ಅವರೊಂದಿಗಿನ ಹಾಸ್ಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿರುವ ಕಿರು ವಿಡಿಯೋ ಕ್ಲಿಪ್‌ನಲ್ಲಿ, ಲಿಲ್ಲಿ ಮತ್ತು ಹೈಲಿ ಜೋಡಿ ಹೃತಿಕ್ ರೋಷನ್ ಮತ್ತು ಅಮಿಶಾ ಪಟೇಲ್ ಅವರ ನಟನೆಯ 2000ರಲ್ಲಿ ಬಿಡುಗಡೆಯಾದ ಕಹೋ ನಾ ಪ್ಯಾರ್ ಹೈ ಚಿತ್ರದ ಶೀರ್ಷಿಕೆ ಗೀತೆಗೆ ನೃತ್ಯ ಮಾಡಿದ್ದಾರೆ.
ಸೂಪರ್ ವುಮನ್ ಎಂದು ಜನಪ್ರಿಯವಾಗಿರುವ ಹಾಸ್ಯನಟಿ ಲಿಲ್ಲಿ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಮಾನ್ಯವಾಗಿ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಯೂಟ್ಯೂಬ್ನಲ್ಲಿ 14.6 ಮಿಲಿಯನ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ 12.9 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿರುವ ಖ್ಯಾತ ಯೂಟ್ಯೂಬರ್ ಇವರು. ಹೈಲಿ ರೋಡ್ ಬಾಲ್ಡ್ವಿನ್ ಬೈಬರ್ ಅವರೊಂದಿಗಿನ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಕಾಮಿಡಿಯನ್ ಲಿಲ್ಲಿ ಸಿಂಗ್, "ನೀವು ಹೊಸ ಸ್ನೇಹಿತರನ್ನು ಮಾಡಿಕೊಂಡಾಗ, ಅವರು ಹೈಲಿ ರೋಡ್ ಬಾಲ್ಡ್ವಿನ್ ಬೈಬರ್ನಂತಹ ಸ್ಟನ್ನಿಂಗ್ ಮಾಡೆಲ್ ಕೂಡ ಆಗಿದ್ದಾಗ'' ಎಂದು ಬರೆದುಕೊಂಡಿದ್ದಾರೆ.
ಹಾಸ್ಯನಟಿ ಲಿಲ್ಲಿ ಸಿಂಗ್ ಅವರು ಗಾಯಕ ಜಸ್ಟಿನ್ ಬೈಬರ್ ಅವರ ಪತ್ನಿ ಹೈಲಿ ರೋಡ್ ಬಾಲ್ಡ್ವಿನ್ ಬೈಬರ್ ಅವರೊಂದಿಗಿನ ಈ ಕ್ಷಣವನ್ನು ಆನಂದಿಸಿದ್ದಾರೆ. ಶೂಟಿಂಗ್ ವೇಳೆ ಖುಷಿ ಪಟ್ಟಿದ್ದಾರೆ. ಈ ಮೂಲಕ ಹೈಲಿ ರೋಡ್ ಬಾಲ್ಡ್ವಿನ್ ಬೈಬರ್ ಅವರ ಮೆಚ್ಚಿನ ಕೆನಡಿಯನ್ ಆಗಿ ಹೊರಹೊಮ್ಮಿದ್ದಾರೆ ಲಿಲ್ಲಿ ಸಿಂಗ್. ಈ ಮೊದಲು ಇವರು ಗಾಯಕ ಜಸ್ಟಿನ್ ಬೈಬರ್ ಅವರ ಮೆಚ್ಚುಗೆಯನ್ನೂ ಸಂಪಾದಿಸಿದ್ದಾರೆ.