ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ವ್ಹೀಲ್ ಚೇರ್ನಲ್ಲಿ ಓಡಾಡುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವ್ಹೀಲ್ ಚೇರ್ನಲ್ಲಿ ಕಾಣಿಸಿಕೊಂಡ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರು ವ್ಹೀಲ್ ಚೇರ್ನಲ್ಲಿ ಹೋಗಲು ಕಾರಣವಾದ ಘಟನೆಯೇನು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವ್ಹೀಲ್ ಚೇರ್ನಲ್ಲಿ ಕೋಲಿನ ಆಶ್ರಯದೊಂದಿಗೆ ಸಂಚರಿಸುವ ಫೋಟೋಗಳು ದೊರೆತಿವೆ. ಇದೇ ಸಂದರ್ಭದಲ್ಲಿ, ಯಾರೂ ಆತಂಕಕ್ಕೆ ಒಳಗಾಗದಂತೆ ಚಿತ್ರತಂಡ ಅಭಿಮಾನಿಗಳಲ್ಲಿ ಮನವಿ ಮಾಡಿದೆಯಂತೆ.
ಕಳೆದ ಕೆಲವು ದಿನಗಳಿಂದ ಬೆನ್ನು ನೋವು ಮತ್ತು ಸಿಯಾಟಿಕಾದಿಂದ ಬಳಲುತ್ತಿರುವ ಟೈಸನ್, ವೈದ್ಯರ ಸಲಹೆಯಂತೆ ಗಾಲಿಕುರ್ಚಿ ಉಪಯೋಗಿಸುತ್ತಿದ್ದಾರೆ. ಹೆಚ್ಚು ಆಯಾಸ ಮಾಡಿಕೊಳ್ಳದಂತೆ ಮತ್ತು ಓಡಾಡದಂತೆ ವೈದ್ಯರು ಸಲಹೆ ನೀಡಿದ್ದು ಕೋಲಿನ ಆಶ್ರಯದೊಂದಿಗೆ ವ್ಹೀಲ್ ಚೇರ್ನಲ್ಲಿ ಸಂಚರಿಸುತ್ತಿದ್ದಾರೆ.
ವ್ಹೀಲ್ ಚೇರ್ನಲ್ಲಿ ಕಾಣಿಸಿಕೊಂಡ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ಚಿತ್ರ 'ಲೈಗರ್' ಇದೇ ತಿಂಗಳ 25 ರಂದು ತೆರೆಗೆ ಬರಲಿದೆ. ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದು ರಮ್ಯ ಕೃಷ್ಣ ಮತ್ತು ಮೈಕ್ ಟೈಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ:ಶೂಟಿಂಗ್ ವೇಳೆ ಬಾಹುಬಲಿ ಬಿಜ್ಜಳದೇವ ಖ್ಯಾತಿಯ ನಟ ನಾಜರ್ಗೆ ಗಾಯ