ಕರ್ನಾಟಕ

karnataka

ETV Bharat / entertainment

ಜಮ್ಮು-ಕಾಶ್ಮೀರ: ನೂತನ ಚಿತ್ರಮಂದಿರಗಳನ್ನು ಉದ್ಘಾಟಿಸಿದ ಎಲ್​ಜಿ ಮನೋಜ್ ಸಿನ್ಹಾ

ಪುಲ್ವಾಮಾ ಮತ್ತು ಶೋಪಿಯಾನ್​ನಲ್ಲಿ ಇಂದು ವಿವಿಧೋದ್ದೇಶ ಚಿತ್ರಮಂದಿಗಳನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಉದ್ಘಾಟಿಸಿದರು.

LG Sinha inaugurates cinema halls in Pulwama and Shopian on Sunday
ಜಮ್ಮು-ಕಾಶ್ಮೀರ: ನೂತನ ಚಿತ್ರಮಂದಿರಗಳನ್ನು ಉದ್ಘಾಟಿಸಿದ ಎಲ್​ಜಿ ಮನೋಜ್ ಸಿನ್ಹಾ

By

Published : Sep 18, 2022, 5:47 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ದಕ್ಷಿಣ ಕಾಶ್ಮೀರದ ಅವಳಿ ಜಿಲ್ಲೆಗಳಾದ ಪುಲ್ವಾಮಾ ಮತ್ತು ಶೋಪಿಯಾನ್​ನಲ್ಲಿ ನಿನ್ನೆ ವಿವಿಧೋದ್ದೇಶ ಚಿತ್ರಮಂದಿಗಳನ್ನು ಉದ್ಘಾಟಿಸಿದರು.

''ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಜಿಲ್ಲೆಯಲ್ಲೂ ಶೀಘ್ರದಲ್ಲೇ ಇಂತಹ ಬಹೋಪಯೋಗಿ ಸಿನಿಮಾ ಮಂದಿರಗಳನ್ನು ನಿರ್ಮಿಸುತ್ತೇವೆ. ಇಂದು ನಾನು ಈ ಚಿತ್ರಮಂದಿರಗಳನ್ನು ಪುಲ್ವಾಮಾ ಮತ್ತು ಶೋಪಿಯಾನ್‌ನ ಯುವಕರಿಗೆ ಅರ್ಪಿಸುತ್ತೇನೆ'' ಎಂದು ಸಿನ್ಹಾ ಪುಲ್ವಾಮಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಚಿತ್ರಮಂದಿರಗಳ ಉದ್ಘಾಟನೆಯ ದೃಶ್ಯಗಳನ್ನು ಟ್ವೀಟ್ ಮಾಡಿ, ಇದನ್ನು "ಐತಿಹಾಸಿಕ" ದಿನ ಎಂದು ಬರೆದಿದ್ದಾರೆ.

"ಜಮ್ಮು ಮತ್ತು ಕಾಶ್ಮೀರಗೆ ಐತಿಹಾಸಿಕ ದಿನ! ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ವಿವಿಧೋದ್ದೇಶ ಸಿನಿಮಾ ಹಾಲ್‌ಗಳನ್ನು ಉದ್ಘಾಟಿಸಲಾಗಿದೆ. ಇದು ಚಲನಚಿತ್ರ ಪ್ರದರ್ಶನ, ಇನ್ಫೋಟೈನ್‌ಮೆಂಟ್ ಸೇರಿದಂತೆ ಯುವಕರ ಕೌಶಲ್ಯ ಅಭಿವೃದ್ಧಿಗೆ ಸೌಲಭ್ಯಗಳನ್ನು ನೀಡುತ್ತದೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಾಲಿವುಡ್​ ಯುವ ನಟಿ ದೀಪಾ ಆತ್ಮಹತ್ಯೆ.. ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಜಮ್ಮು ಕಾಶ್ಮೀರದ ಮೊದಲ INOX ಮಲ್ಟಿಪ್ಲೆಕ್ಸ್ ಅನ್ನು ಶ್ರೀನಗರದ ಸೋಮ್​​ವಾರ್​ ಪ್ರದೇಶದಲ್ಲಿ ಮುಂದಿನ ವಾರ ಸಾರ್ವಜನಿಕರಿಗೆ ತೆರೆಯಲಾಗುವುದು. ಇದು ಒಟ್ಟು 520 ಆಸನಗಳ ಸಾಮರ್ಥ್ಯದ ಮೂರು ಚಿತ್ರಮಂದಿರಗಳನ್ನು ಹೊಂದಿರುತ್ತದೆ. ಇದು ಮೂರು ದಶಕಗಳ ನಂತರ ಕಾಶ್ಮೀರದಲ್ಲಿ ಬರುತ್ತಿರುವ ಮೊದಲ ಮಲ್ಟಿಪ್ಲೆಕ್ಸ್ ಆಗಿದೆ. ಇದನ್ನು ಕೇವಲ ವಯಸ್ಕರಿಗೆ ಮನೋರಂಜನೆಯ ಕೇಂದ್ರವಾಗಿರದೇ ಮಕ್ಕಳ ಮನೋರಂಜನೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

ABOUT THE AUTHOR

...view details