ದಕ್ಷಿಣದ ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್ ಕಟ್ ಹೇಳಿರುವ 'ಪೊನ್ನಿಯಿನ್ ಸೆಲ್ವನ್ 2' (Ponniyin Selvan 2) ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಶುಕ್ರವಾರ ಅದ್ಧೂರಿಯಾಗಿ ತೆರೆ ಕಂಡಿರುವ ಈ ಸಿನಿಮಾ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುವ ಜೊತೆಗೆ ಮಿಮರ್ಶಕರು, ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಸ್ವೀಕರಿಸಿದೆ. ಕಳೆದ ಕೆಲ ಸಮಯಗಳಿಂದ ಅತಿ ಕಡಿಮೆ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಈ ಚಿತ್ರದಲ್ಲಿ ರಾಣಿಯಾಗಿ ಮಿಂಚಿದ್ದು, ಚಿತ್ರ ಭಾರಿ ಮೆಚ್ಚುಗೆ ಸಂಪಾದಿಸಿದೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್ನ ಫೇಮಸ್ ತಾರಾ ದಂಪತಿ. ವೈವಾಹಿಕ ಜೀವನ ಆರಂಭಿಸಿ ಇತ್ತೀಚೆಗಷ್ಟೇ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ಅತಿ ಕಡಿಮೆ ಸಿನಿಮಾ ಮಾಡಿದರೂ ಕೂಡ ಅವರ ಬೇಡಿಕೆ ಕಿಂಚಿತ್ತೂ ಕಮ್ಮಿ ಆಗಿಲ್ಲ. ಕಳೆದ ಕೆಲ ವರ್ಷಗಳಿಂದ ಕೆಲವೇ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆ ಪೈಕಿ 'ಪೊನ್ನಿಯಿನ್ ಸೆಲ್ವನ್' ಸರಣಿ ಚಿತ್ರಗಳು ಕೂಡ ಸೇರಿವೆ.
2022ರಲ್ಲಿ 'ಪೊನ್ನಿಯಿನ್ ಸೆಲ್ವನ್' ಮತ್ತು ಇತ್ತೀಚೆಗಷ್ಟೇ ತೆರೆಕಂಡ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದಲ್ಲಿ ರಾಣಿಯಾಗಿ ಅದ್ಭುತ ಅಭಿನಯ ಮಾಡಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಸಹ ಮನ ಸೋತಿದ್ದಾರೆ. ತಮ್ಮ ಮೆಚ್ಚಿನ ನಟಿ ಮತ್ತಷ್ಟು ಸಿನಿಮಾ ಮಾಡಬೇಕೆಂಬುದು ಫ್ಯಾನ್ಸ್ ಆಸೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಈ ಬಗ್ಗೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ನೆಟ್ಟಿಗರೊಬ್ಬರು ಐಶ್ವರ್ಯಾ ಪತಿ, ನಟ ಅಭಿಷೇಕ್ ಬಚ್ಚನ್ ಅವರಿಗೆ ಸಲಹೆ ನೀಡಿದ್ದಾರೆ. ಇದಕ್ಕೆ ಅಭಿಷೇಕ್ ಬಚ್ಚನ್ ಕಡೆಯಿಂದ ಉತ್ತರ ಕೂಡ ಬಂದಿದೆ.
ಅಭಿಷೇಕ್ ಬಚ್ಚನ್ ಟ್ವೀಟ್: 'ಪೊನ್ನಿಯಿನ್ ಸೆಲ್ವನ್ 2' ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಿತ್ರದ ಬಗ್ಗೆ, ಪತ್ನಿ ಐಶ್ವರ್ಯಾ ನಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದರಿಂದ ನಟ ಅಭಿಷೇಕ್ ಬಚ್ಚನ್ ಕೂಡ ಹಿಂದೆ ಸರಿದಿಲ್ಲ. ''ಪೊನ್ನಿಯಿನ್ ಸೆಲ್ವನ್ 2 ಅದ್ಭುತ. ವರ್ಣಿಸಲು ಪದಗಳ ಕೊರತೆ, ಮಣಿರತ್ನಂ ಮತ್ತು ಇಡೀ ತಂಡದ ಪರಿಶ್ರಮಕ್ಕೆ ಭೇಷ್, ಶುಭವಾಗಲಿ. ಶ್ರೀಮತಿ ಅವರ ಬಗ್ಗೆ ಹೆಮ್ಮೆ ಇದೆ. ದಿ ಬೆಸ್ಟ್ ಎಂದು ನಟಿ ಐಶ್ವರ್ಯಾ ರೈ ಪತಿ, ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.