ಕಾಲಿವುಡ್ ಸೂಪರ್ಸ್ಟಾರ್ ನಟ ದಳಪತಿ ವಿಜಯ್ ಅವರ 'ಲಿಯೋ' 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಚಿತ್ರತಂಡ 'ಲಿಯೋ'ದ ಕನ್ನಡ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ 'ಲಿಯೋ' ಸಿನಿಮಾದ ಕನ್ನಡ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.
'ಲಿಯೋ' ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. "ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್" ಎಂಬ ಶೀರ್ಷಿಕೆಯೊಂದಿಗೆ ಲಿಯೋ ಕನ್ನಡ ಪೋಸ್ಟರ್ ಅನಾವರಣಗೊಂಡಿದೆ. ಕ್ರೈಂ ಸೀನ್ನಂತೆ ಕಾಣುವ ಹಿನ್ನೆಲೆಯಲ್ಲಿ ವಿಜಯ್ ಕುಳಿತಿದ್ದಾರೆ. ಗನ್ವೊಂದರ ಒಳಗೆ ಈ ಚಿತ್ರ ಕಾಣುತ್ತದೆ.
ಸಂಜಯ್ ದತ್ ಫಸ್ಟ್ ಲುಕ್ ಔಟ್:ಇದಕ್ಕೂ ಮುನ್ನ 'ಲಿಯೋ' ಚಿತ್ರದಿಂದ ಸಂಜಯ್ ದತ್ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಳ್ಳಲಾಗಿತ್ತು. ಅವರ ಜನ್ಮದಿನದಂದೇ ಪೋಸ್ಟರ್ ಅನಾವರಣಗೊಂಡಿತ್ತು. ಚಿತ್ರದಲ್ಲಿ ಅವರ ಪಾತ್ರದ ಹೆಸರು ಆಂಟೋನಿ ದಾಸ್. ಸೌತ್ ಸಿನಿಮಾದಲ್ಲಿ ಸಂಜಯ್ ದತ್ ಮತ್ತೊಮ್ಮೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಟೋನಿ ದಾಸ್ ಲುಕ್ ಅದ್ಭುತವಾಗಿದೆ.