ಕರ್ನಾಟಕ

karnataka

ETV Bharat / entertainment

ಅಬ್ಬಬ್ಬಾ...ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದ 'ಲಿಯೋ': ದೇಶೀಯ ಗಲ್ಲಾಪಟ್ಟಿಗೆಯಲ್ಲೇ 60 ಕೋಟಿ ರೂ. ಕಲೆಕ್ಷನ್​! - ವಿಜಯ್ ಲೇಟೆಸ್ಟ್ ನ್ಯೂಸ್

Leo box office collection: ಗುರುವಾರ ತೆರೆಕಂಡ ಲಿಯೋ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 140 ಕೋಟಿ ರೂ. ಕಲೆಕ್ಷನ್​​ ಮಾಡುವಲ್ಲಿ ಯಶ ಕಂಡಿದೆ.

Leo box office collection
ಲಿಯೋ ಬಾಕ್ಸ್ ಆಫೀಸ್​ ಕಲೆಕ್ಷನ್

By ETV Bharat Karnataka Team

Published : Oct 20, 2023, 11:36 AM IST

Updated : Oct 20, 2023, 11:54 AM IST

ಸೌತ್​ ಸೂಪರ್​ ಸ್ಟಾರ್​ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಲಿಯೋ' ಗುರುವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಮೋಸ್ಟ್ ಎಕ್ಸ್​​ಪೆಕ್ಟೆಡ್​ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಅದಾಗ್ಯೂ ಬಾಕ್ಸ್​ ಆಫೀಸ್​ ಕಲೆಕ್ಷನ್ ಸಂಖ್ಯೆ ಪ್ರೇಕ್ಷಕರು ಸೇರಿದಂತೆ ಚಿತ್ರರಂಗದವರ ಹುಬ್ಬೇರಿಸಿದೆ.

ಮೊದಲ ದಿನದ ಕಲೆಕ್ಷನ್​: 'ಲಿಯೋ' ಸಿನಿಮಾ ಮೊದಲ ದಿನದಂದು ಭಾರತದಲ್ಲಿ 63 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ, ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾವಾಗಿ ಹೊರಹೊಮ್ಮಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ (Sacnilk) ಮಾಹಿತಿ ಪ್ರಕಾರ, ಲಿಯೋ ಮೊದಲ ದಿನ ಜಾಗತಿಕವಾಗಿ 140 ಕೋಟಿ ರೂ. ಕಲೆಕ್ಷನ್​​ ಮಾಡಿದೆ. ಆದಾಗ್ಯೂ, ಸಿನಿಮಾ ತನ್ನ 2ನೇ ದಿನದಂದು ದೇಶೀಯ ಮಾರುಕಟ್ಟೆಯಲ್ಲಿ ಶೇ.48ಕ್ಕೂ ಹೆಚ್ಚು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದ್ದಾರೆ.

ಎರಡನೇ ದಿನ ದೊಡ್ಡ ಮಟ್ಟದ ಕುಸಿತ ಸಾಧ್ಯತೆ:ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಲಿಯೋ ಸಿನಿಮಾ ತನ್ನ ಎರಡನೇ ದಿನದಂದು ಭಾರತದಲ್ಲಿ ಸುಮಾರು 32.51 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಎರಡು ದಿನಗಳ ದೇಶೀಯ ಗಲ್ಲಾಪೆಟ್ಟಿಗೆ ಕಲೆಕ್ಷನ್​​ 95.51 ಕೋಟಿ ರೂಪಾಯಿ ಆಗಲಿದೆ. ಮೊದಲ ದಿನ 63 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ ಎರಡನೇ ದಿನ 32 ಕೋಟಿ ರೂ. ಗಳಿಸಿದರೆ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸರಿಸುಮಾರು ಶೇ. 50 ರಷ್ಟು ಕುಸಿತ ಕಂಡಂತಾಗುತ್ತದೆ. ಚೆನ್ನೈನಲ್ಲಿ ಲಿಯೋ ಸಿನಿಮಾ ಅತಿ ಹೆಚ್ಚು ಸ್ಕ್ರೀನ್​​ಗಳಲ್ಲಿ ಪ್ರದರ್ಶನ ಆಗುತ್ತಿದೆ. 1,282 ಪ್ರದರ್ಶನಗಳನ್ನು ಹೊಂದಿದ್ದರೂ, ಸಿನಿಮಾ ಆರಂಭಿಕ ದಿನದ ಗಳಿಕೆ ವೇಗವನ್ನು ಉಳಿಸಿಕೊಳ್ಳಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಬಿಡುಗಡೆಗೆ ಮುಹೂರ್ತ ಫಿಕ್ಸ್: ಅದ್ಭುತ ಪ್ರೇಮಕಥೆ ವೀಕ್ಷಿಸಲು ಪ್ರೇಕ್ಷಕರ ಕಾತರ

ಲೋಕೇಶ್ ಕನಕರಾಜ್ ಆ್ಯಕ್ಷನ್​ ಕಟ್​​ ಹೇಳಿರುವ ಲಿಯೋ ಮಿಶ್ರ ಪ್ರತಿಕ್ರಿಯೆ ಸ್ವಿಕರಿಸಿದೆ. ಅದಾಗ್ಯೂ ಮೊದಲ ದಿನದ ಗಳಿಕೆ ಎಲ್ಲರ ತಲೆ ತಿರುಗುವಂತೆ ಮಾಡಿದೆ. ಮಾಸ್ಟರ್, ಬೀಸ್ಟ್, ಮತ್ತು ವರಿಸು ಬಳಿಕ ಬಂದ ವಿಜಯ್​ ನಟನೆಯ ಚಿತ್ರವಿದು. ಕೊನೆಯದಾಗಿ ಮಾಸ್ಟರ್ ಸಿನಿಮಾದಲ್ಲಿ ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್​ ಒಟ್ಟಿಗೆ ಕೆಲಸ ಮಾಡಿದ್ದರು. ಇನ್ನು ತ್ರಿಷಾ ಕೃಷ್ಣನ್​ ಜೊತೆ ವಿಜಯ್​ 14 ವರ್ಷಗಳ ಬ್ರೇಕ್​ ಬಳಿಕ ತೆರೆ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಗಿಲ್ಲಿ, ಕುರುವಿ, ತಿರುಪಾಚಿ, ಆತಿ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು.

ಇದನ್ನೂ ಓದಿ:ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ

Last Updated : Oct 20, 2023, 11:54 AM IST

ABOUT THE AUTHOR

...view details