ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಸ್ಟಾರ್ ನಟಿ ಕತ್ರಿನಾ ಕೈಫ್ ಅಭಿನಯದ ಮುಂದಿನ ಬಹು ನಿರೀಕ್ಷಿತ ಚಿತ್ರ 'ಟೈಗರ್ 3'. ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದ ಮೊದಲ ಹಾಡಿನ ಶಾರ್ಟ್ ಗ್ಲಿಂಪ್ಸ್ ಅನ್ನು ಇಂದು ಅನಾವರಣಗೊಳಿಸಲಾಗಿದೆ. ''ಲೇಕೆ ಪ್ರಭು ಕಾ ನಾಮ್'' (Leke Prabhu Ka Naam) ಶೀರ್ಷಿಕೆಯ ಈ ಟ್ರ್ಯಾಕ್ ಒಂದು ಪಾರ್ಟಿ ಸಾಂಗ್. ಇಂದು ಅನಾವರಣಗೊಂಡಿರುವ ವಿಡಿಯೋ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆ, ಕುತೂಹಲ, ಉತ್ಸಾಹವನ್ನು ಹೆಚ್ಚಿಸಿದೆ.
ಸಲ್ಮಾನ್ ಖಾನ್ ಹಾಗೂ ಬಾಲಿವುಡ್ನ ಹೆಸರಾಂತ ಗಾಯಕ ಅರಿಜಿತ್ ಸಿಂಗ್ ಕಾಂಬೋದ ಹಾಡಿದು. ಶುಕ್ರವಾರ ಅನಾವರಣಗೊಂಡಿರುವ ಟೀಸರ್, ಸಲ್ಮಾನ್ ಮತ್ತು ಕತ್ರಿನಾ ಅವರ ಮನಮೋಹಕ ನೋಟವನ್ನು ಬಹಿರಂಗಪಡಿಸಿದೆ. ನೋಡಲು ಪಾರ್ಟಿ ಸಾಂಗ್ ಎಂಬಂತೆ ತೋರಿದ್ದು, ಇಬ್ಬರೂ ಸ್ಟಾರ್ಸ್ ಸಖತ್ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. 'ಲೇಕೆ ಪ್ರಭು ಕಾ ನಾಮ್'ಗೆ ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಅವರ ಸಾಹಿತ್ಯವಿದೆ. ಅರಿಜಿತ್ ಸಿಂಗ್ ಮತ್ತು ನಿಖಿತಾ ಗಾಂಧಿ ಕಂಠದಾನ ಮಾಡಿದೆ.
ಸಲ್ಮಾನ್ ಖಾನ್ ಹಾಗೂ ಅರಿಜಿತ್ ಸಿಂಗ್ ಕಾಂಬೋ ಬಗ್ಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಟೀಸರ್ ಕುರಿತು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೀಡಿಯೋ ಸಾಂಗ್ ವೀಕ್ಷಣೆಗೆ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯೊಬ್ಬರು, "ಮೊದಲ ಬಾರಿಗೆ ಅರಿಜಿತ್ ಸಿಂಗ್ ಅವರು ಸಲ್ಮಾನ್ ಖಾನ್‌ಗಾಗಿ ಹಾಡುತ್ತಿದ್ದಾರೆ. ಇದೊಂದು ಎಪಿಕ್. ಎಂದೆಂದಿಗೂ ಸೆಲೆಬ್ರೇಟ್ ಮಾಡಬೇಕಾದ ಹಾಡಿದು" ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, "ಡಬಲ್ ತಡ್ಕಾ, (ಫೈಯರ್ ಎಮೋಜಿಯೊಂದಿಗೆ) ಅರಿಜಿತ್ ಸಿಂಗ್ ಮತ್ತು ಸಲ್ಮಾನ್ ಖಾನ್" ಎಂದು ಹೇಳಿದ್ದಾರೆ. ಅಭಿಮಾನಿಗಳ ರಿಯಾಕ್ಷನ್ಸ್ ಅಂಡ್ ಎಕ್ಸ್ಪೆಕ್ಟೇಶನ್ಸ್ ಗಮನಿಸಿದರೆ ಈ ಹಾಡು ಸೂಪರ್ ಹಿಟ್ ಆಗಲಿದೆ ಎಂಬುದು ಬಹುತೇಕ ಖಚಿತ.