ಕರ್ನಾಟಕ

karnataka

ETV Bharat / entertainment

'ಟೈಗರ್​ 3' ಸಿನಿಮಾದ ಪಾರ್ಟಿ ಸಾಂಗ್​ ಔಟ್​; ಗ್ಲಾಮರಸ್ ಲುಕ್‌ನಲ್ಲಿ ಸಲ್ಮಾನ್-ಕತ್ರಿನಾ ಮೋಡಿ - Tiger 3s dance number

'ಟೈಗರ್​ 3' ಚಿತ್ರದ ಪಾರ್ಟಿ ಸಾಂಗ್​ 'ಲೆಕೆ ಪ್ರಭು ಕಾ ನಾಮ್'​ ವಿಡಿಯೋ ಹಾಡಿನಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಗ್ಲಾಮರಸ್​ ದಿರಿಸಿನಲ್ಲಿ ಅಭಿನಯಿಸಿದ್ದಾರೆ.

leke-prabhu-ka-naam-song-out-salman-khan-and-katrina-kaif-set-dance-floor-ablaze-in-tiger-3-s-dance-number
leke-prabhu-ka-naam-song-out-salman-khan-and-katrina-kaif-set-dance-floor-ablaze-in-tiger-3-s-dance-number

By ETV Bharat Karnataka Team

Published : Oct 23, 2023, 3:11 PM IST

ಬೆಂಗಳೂರು: ಬಾಲಿವುಡ್​ ನಟರಾದ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​​ ನಟಿಸಿರುವ ಮುಂಬರುವ ಹೊಸ ಚಿತ್ರ 'ಟೈಗರ್​​ 3'ಯ ವಿಡಿಯೋ ಹಾಡು ಬಿಡುಗಡೆಯಾಗಿದೆ. ಮನೀಶ್​ ಶರ್ಮಾ ನಿರ್ದೇಶನದ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟ ಇಮ್ರಾನ್​ ಹಶ್ಮಿ ಕೂಡಾ ಅಭಿನಯಿಸಿದ್ದಾರೆ.

'ಲೆಕೆ ಪ್ರಭು ಕಾ ನಾಮ್'​ ಎಂಬ ವಿಡಿಯೋ ಹಾಡಿನಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಅವರನ್ನು ಗ್ಲಾಮರಸ್​ ದಿರಿಸಿನಲ್ಲಿ ನೋಡಬಹುದು. ಟರ್ಕಿ ದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಮಿತಾಬ್​ ಭಟ್ಟಚಾರ್ಯ ಸಾಹಿತ್ಯ ಬರೆದಿದ್ದು, ಅರಿಜಿತ್ ಸಿಂಗ್​ ಮತ್ತು ನಿಖಿತಾ ಗಾಂಧಿ ಹಾಡಿದ್ದಾರೆ. ಪ್ರೀತಂ ಸಂಗೀತ ಸಂಯೋಜಿಸಿದ್ದಾರೆ. 2014ರ ಬಳಿಕ ಸಲ್ಮಾನ್ ​ಖಾನ್​ ಮತ್ತು ಅರಿಜಿತ್‌​​ ಸಿಂಗ್​ ಈ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು ಗಮನಾರ್ಹ.

ಹಾಡು ಬಿಡುಗಡೆಗೂ ಮುನ್ನ ಸಲ್ಮಾನ್​ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪೋಸ್ಟ್​ ಮಾಡಿದ್ದಾರೆ. ಚಿತ್ರದ ಮೊದಲ ಹಾಡಿನ ಮೊದಲ ಝಲಕ್​ ಇದು. ಬಿಟಿಡಬ್ಲ್ಯೂ ಸೂಪರ್​​. ಅರಿಜಿತ್​ ನನಗಾಗಿ ಹಾಡಿದ ಮೊದಲ ಹಾಡು ಇದು ಎಂದು ಬರೆದಿದ್ದಾರೆ.

'ಟೈಗರ್​ 3' ಚಿತ್ರ ನವೆಂಬರ್​ 13 ರಂದು ದೀಪಾವಳಿಗೆ ಬಿಡುಗಡೆ ಆಗಲಿದೆ. ಪ್ರೀಮಿಯರ್​ ಭಾನುವಾರ ನಡೆಯಲಿದೆ. ವೈಆರ್​ಎಫ್​ ಸ್ಪೇ ಯುನಿವರ್ಸ್​​ ಇದರ ಭಾಗವಾಗಿದೆ. ಇದೇ ನಿರ್ಮಾಣ ಸಂಸ್ಥೆ ಈ ಹಿಂದೆ ಎಕ್​ ಥಾ ಟೈಗರ್​, ಟೈಗರ್​ ಜಿಂದಾ ಹೈ, ವಾರ್​ ಮತ್ತು ಪಠಾಣ್​ ಚಿತ್ರಗಳನ್ನು ನಿರ್ಮಿಸಿತ್ತು.

ಶಾರುಖ್​ ಖಾನ್​ ಅವರ 'ಪಠಾಣ್'​ ಬಳಿಕ 'ಟೈಗರ್​ 3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ದಶಕಗಳ ಬಳಿಕ ಈ ನಟರು ಒಟ್ಟಾಗಿ ನಟಿಸುತ್ತಿದ್ದಾರೆ. 'ಟೈಗರ್ 3' ಟ್ರೇಲರ್‌ನಲ್ಲಿ​ ಇಮ್ರಾನ್ ಹಶ್ಮಿ ಅವರನ್ನು ಖಳನಾಯಕನಾಗಿ ತೋರಿಸಲಾಗಿದೆ. ಟೀಸರ್, ಟ್ರೇಲರ್​ಗಳು ಇದೊಂದು ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಎಂದು ತೋರಿಸುತ್ತಿವೆ.

ಇದನ್ನೂ ಓದಿ: ನವರಾತ್ರಿ ಸಂಭ್ರಮಕ್ಕೆ ತಾರಾ ಮೆರಗು; ರಶ್ಮಿಕಾ, ಕತ್ರಿನಾ, ಜಾಹ್ನವಿ ಸೇರಿದಂತೆ ಹಲವರು ಭಾಗಿ

ABOUT THE AUTHOR

...view details