ಕರ್ನಾಟಕ

karnataka

ETV Bharat / entertainment

ಚಿತ್ರೀಕರಣದ ವೇಳೆ ಭೀಕರ ಅವಘಡ​: ನಟಿ ಸಮಂತಾ, ವಿಜಯ್ ದೇವರಕೊಂಡಗೆ ಗಾಯ - Samantha Vijay Devarakonda Injured

ಮುಂಬರುವ ಸಿನಿಮಾ 'ಖುಷಿ' ಚಿತ್ರದ ಸಾಹಸಮಯ ದೃಶ್ಯವೊಂದರ ಚಿತ್ರೀಕರಣದ ವೇಳೆ ಭೀಕರ ಅವಘಡ ಸಂಭವಿಸಿದ್ದು, ನಟ ವಿಜಯ್​ ದೇವರಕೊಂಡ ಹಾಗೂ ನಟಿ ಸಮಂತಾ ಗಾಯಗೊಂಡಿದ್ದಾರೆ.

Vijay Deverakonda
Vijay Deverakonda

By

Published : May 23, 2022, 10:17 PM IST

Updated : May 23, 2022, 10:57 PM IST

ಪಹಲ್ಗಾಮ್​​(ಕಾಶ್ಮೀರ):ದಕ್ಷಿಣ ಕಾಶ್ಮೀರದ ಪಹಲ್ಗಾಮ್​ ಪ್ರದೇಶದಲ್ಲಿ ಸಿನಿಮಾದ ಸಾಹಸಮಯ ದೃಶ್ಯದ ಚಿತ್ರೀಕರಣ ಮಾಡ್ತಿದ್ದ ವೇಳೆ ಖ್ಯಾತ ನಟನಾದ ವಿಜಯ್ ದೇವರಕೊಂಡ ಹಾಗೂ ನಟಿ ಸಮಂತಾ ರುತ್ ಪ್ರಭು ಗಾಯಗೊಂಡಿದ್ದಾರೆ. ಅದೃಷ್ಟವಶಾತ್​ ಪ್ರಾಣಾಪಾಯದಿಂದ ಇಬ್ಬರು ಪಾರಾಗಿದ್ದು, ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಜನಪ್ರಿಯ ಪ್ರವಾಸಿ ತಾಣವಾದ ಪಹಲ್ಗಾಮ್​​ನಲ್ಲಿ ಈ ಚಿತ್ರೀಕರಣ ಆಯೋಜನೆ ಮಾಡಲಾಗಿತ್ತು.

'ಖುಷಿ' ಚಿತ್ರದಲ್ಲಿ ಸಮಂತಾ ಹಾಗೂ ವಿಜಯ್​ ದೇವರಕೊಂಡ ಒಟ್ಟಿಗೆ ನಟನೆ ಮಾಡ್ತಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ವೇಳೆ ಸಾಹಸ ಮಯ ದೃಶ್ಯದಲ್ಲಿ ಶೂಟ್​​ ಮಾಡಲಾಗ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಿಡ್ಡರ್​​ ನದಿಯ ಎರಡು ಬದಿಗಳಲ್ಲಿ ಕಟ್ಟಲಾಗಿದ್ದ ಹಗ್ಗದ ಮೇಲೆ ವಾಹನ ರೇಸ್​​​ ಮಾಡಬೇಕಾಯಿತು. ಈ ಕಾರು ನೀರಿನಲ್ಲಿ ಬಿದ್ದಿದ್ದು, ಇಬ್ಬರ ಬೆನ್ನಿಗೂ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಯಾವುದೇ ರೀತಿಯ ದೊಡ್ಡ ಅವಘಡ ನಡೆದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡದಿಂದ ಯಾವುದೇ ರೀತಿಯ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಪೃಥ್ವಿ ಅಂಬರ್ - ಮಿಲನಾ ನಾಗರಾಜ್ ಅಭಿನಯದ 'ಫಾರ್ ರಿಜಿಸ್ಟ್ರೇಷನ್​'

ಲಭ್ಯವಾಗಿರುವ ಮಾಹಿತಿ ಪ್ರಕಾರ, ಇಬ್ಬರನ್ನ ಹೋಟೆಲ್​​ವೊಂದಕ್ಕೆ ಸ್ಥಳಾಂತರ ಮಾಡಲಾಗಿದ್ದು, ಫಿಸಿಯೋಥೆರಪಿಸ್ಟ್​ ಕರೆಯಿಸಿ, ಚಿಕಿತ್ಸೆ ನೀಡಲಾಗ್ತಿದೆ. ಈ ಚಿತ್ರ ಮುಂಬರುವ ಡಿಸೆಂಬರ್​ 23ರಂದು ಬಿಡುಗಡೆಯಾಗಲಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಚಿತ್ರದ ಬಹುಪಾಲು ಚಿತ್ರೀಕರಣ ಕಾಶ್ಮೀರದ ಗುಲ್ಮಾರ್ಗ್​ ಸೋನಾಮಾರ್ಗ್​, ದಾಲ್​ ಲೇಕ್​​ ಮತ್ತು ಪಹಲ್ಗಾಮ್​​ನಲ್ಲಿ ನಡೆದಿದೆ.

ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ದಕ್ಷಿಣ​ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ವೃತ್ತಿ ಜೀವನದಲ್ಲಿ ಸಖತ್​ ಬ್ಯುಸಿಯಾಗಿದ್ದು, ಒಂದರ ನಂತರ ಒಂದರಂತೆ ಚಿತ್ರ ಮಾಡುತ್ತಿದ್ದು, ಸಿನಿಮಾಗಳು ಹಿಟ್​ ಆಗುತ್ತಿವೆ. ಇದೀಗ ನಟ ವಿಜಯ್​ ದೇವರಕೊಂಡ ಅವರೊಂದಿಗೆ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

ಪುಷ್ಪ ಚಿತ್ರದಲ್ಲಿನ 'ಊ ಅಂಟಾವಾ' ಐಟಂ ಸಾಂಗ್​​​ನಲ್ಲಿ ಸೊಂಟ ಬಳುಕಿಸಿ ಮಿಂಚು ಹರಿಸಿದ್ದ ಸಮಂತಾ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಖುಷಿಯಲ್ಲಿ ತೇಲುತ್ತಿದ್ದಾರೆ. ಇದರ ಮಧ್ಯೆ ಈ ಘಟನೆ ಸಂಭವಿಸಿದೆ.

Last Updated : May 23, 2022, 10:57 PM IST

ABOUT THE AUTHOR

...view details