ಎರ್ನಾಕುಲಂ, ಕೇರಳ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿಯೊಬ್ಬನನ್ನು ಎರ್ನಾಕುಲಂ ಕಾನೂನು ಕಾಲೇಜು ಅಮಾನತುಗೊಳಿಸಿದೆ. ವೇದಿಕೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನೊಂದಿಗೆ ನಡೆದುಕೊಂಡ ರೀತಿಗೆ ಸ್ವತಃ ನಟಿಯೇ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದರು. ಕಾನೂನು ವಿದ್ಯಾರ್ಥಿಯೊಬ್ಬ ವೇದಿಕೆಯ ಮೇಲಿದ್ದ ನಟಿಯ ಬಳಿಗೆ ತೆರಳಿದ್ದಾನೆ. ಬಳಿಕ ನಟಿಯನ್ನು ಎದ್ದು ನಿಲ್ಲುವಂತೆ ಮನವಿ ಮಾಡಿದ್ದಾನೆ. ಈ ವೇಳೆ, ಎದ್ದು ನಿಂತ ನಟಿಯ ಭುಜದ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ್ದಾನೆ. ಇದರಿಂದ ನಟಿ ದೂರ ಸರಿದ್ದಿದ್ದರು.
ವೇದಿಕೆ ಮೇಲೆ ನಡೆದ ದೃಶ್ಯಗಳು ಸ್ಥಳೀಯ ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇನ್ನು ಈ ಘಟನೆಯ ವಿಡಿಯೋ ನೆಟ್ಟಿಗರ ಮನೆಯಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ, ನಟಿ ಅಸಮರ್ಥಳಾಗಿದ್ದು, ವಿದ್ಯಾರ್ಥಿಯನ್ನು ದೂರ ತಳ್ಳುತ್ತಿರುವುದು ಕಂಡುಬಂದಿದೆ. ಕ್ಷಮೆಯಾಚಿಸಲು ಯುವಕ ಮತ್ತೆ ಅವಳ ಕೈಗಳನ್ನು ಹಿಡಿಯಲು ಪ್ರಯತ್ನಿಸಿದನು. ಅಪರ್ಣಾ ಬಾಲಮುರಳಿ ನಿರಾಕರಿಸಿ ದೂರ ಸರಿದರು. ಯುವಕನ ದುರ್ವರ್ತನೆ ಹಿನ್ನೆಲೆ, ಕಾನೂನು ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಕಾಲೇಜು ಅಧಿಕಾರಿಗಳು ನಟಿ ಬಳಿ ಕ್ಷಮೆಯಾಚಿಸಿದ್ದಾರೆ. ಯುವಕರ ವರ್ತನೆಯ ವಿರುದ್ಧ ಹಲವು ಪ್ರಮುಖರು, ನಟಿಯನ್ನು ಬೆಂಬಲಿಸಿದ್ದಾರೆ.
ಮಹಿಳೆಯರ ಅನುಮೋದನೆಯನ್ನು ಪಡೆಯದೇ ಸ್ಪರ್ಶಿಸುವುದು ಸರಿಯಲ್ಲ" ಎಂದು ಅಪರ್ಣಾ ಬಾಲಮುರಳಿ ಎಫ್‌ಬಿಯಲ್ಲಿ ಬರೆದಿದ್ದಾರೆ. ಈ ಘಟನೆಯು ಇಡೀ ಕಾಲೇಜ್ ಅನ್ನು ತಲೆ ತಗ್ಗಿಸುವಂತೆ ಮಾಡಿದೆ. ನಂತರ ಕಾಲೇಜು ಅಧಿಕಾರಿಗಳು ಈ ವಿಷಯದ ಬಗ್ಗೆ ಚರ್ಚಿಸಿ ವಿದ್ಯಾರ್ಥಿಯಿಂದ ವಿವರಣೆ ಕೇಳಿದರು. ಕಾಲೇಜು ಸ್ಟಾಫ್ ಕೌನ್ಸಿಲ್ ನೀಡಿದ ವಿವರಣೆಯನ್ನು ಅನುಮೋದಿಸಲಿಲ್ಲ ಮತ್ತು ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ಅಮಾನತುಗೊಳಿಸಲು ನಿರ್ಧರಿಸಲಾಗಿದೆ.