ಪಂಜಾಬಿ ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ ಹೊಸ ಹಾಡು 'ವಾಚ್-ಔಟ್' ಬಿಡುಗಡೆ ಆಗಿದೆ. ಈ ಹಾಡಿನ ಬಗ್ಗೆ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದರು. ದಿವಂಗತ ಗಾಯಕನ ತಂಡ ಇಂದು ಹೊಸ ಹಾಡನ್ನು ಅನಾವರಣಗೊಳಿಸಿದೆ. ಬಿಡುಗಡೆ ಆಗಿರುವ ಹಾಡಿಗೆ ಕೆಲವೇ ಕ್ಷಣದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಯೂಟ್ಯೂಬ್‌ನಲ್ಲಿ 4 ಲಕ್ಷ ಜನರು ಪ್ರೀಮಿಯರ್ ಅನ್ನು ಲೈವ್ ಆಗಿ ವೀಕ್ಷಿಸಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣ ವೈರಲ್ ಆಗಿ ಸಖತ್ ಸದ್ದು ಮಾಡಿದೆ. ಗಾಯಕ ಸಿಧು ಮೂಸೆವಾಲಾ ಸಾವಿನ ನಂತರ ಬಿಡುಗಡೆಯಾಗಿರುವ 5ನೇ ಹಾಡು ಇದಾಗಿದೆ.
ಸಾವಿನ ನಂತರ ಅನಾವರಣಗೊಂಡ ಐದನೇ ಹಾಡು:ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ನಂತರ ಬಿಡುಗಡೆ ಆಗಿರುವ ಐದನೇ ಹಾಡು ಇದು. ತಾಯಿ ಚರಣ್ ಕೌರ್ ಈ ಹಾಡಿಗೆ ಸಂಬಂಧಿಸಿದಂತೆ ಪೋಸ್ಟರ್ ಬಿಡುಗಡೆ ಮಾಡಿದ್ದು, ನನ್ನ ಬಬ್ಬರ್ ಶೇರ್ ಮತ್ತು ನಿಮ್ಮ ಸಹೋದರ ಆಗಮಿಸಿದ್ದಾರೆ. ಅದನ್ನು ಹಿಂದಕ್ಕೆ ತಳ್ಳುವುದು ಸುಲಭವಲ್ಲ, ಹಾಗಾಗಿ ದಾರಿಯನ್ನು ತೆರವುಗೊಳಿಸುವುದು ಉತ್ತಮ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಚೋರ್ನಿ ಬಿಡುಗಡೆಯಾಗಿತ್ತು: 'ವಾಚ್-ಔಟ್' ಹಾಡಿಗೂ ಮೊದಲು ಚೋರ್ನಿ ಎಂಬ ಗೀತೆಯನ್ನು ಬಿಡುಗಡೆಗೊಳಿಸಲಾಗಿತ್ತು. ಚೋರ್ನಿ ಹಾಡನ್ನು 2023ರ ಜುಲೈ 8 ರಂದು ಬಿಡುಗಡೆ ಮಾಡಲಾಗಿದ್ದು, ಯೂಟ್ಯೂಬ್‌ನಲ್ಲಿ 5.4 ಕೋಟಿ ಜನರು ವೀಕ್ಷಿಸಿದ್ದಾರೆ. ಗಾಯಕನ ಮರಣದ ನಂತರ ಐದು ಹಾಡುಗಳು ಅನಾವರನಗೊಂಡಿವೆ. ಪ್ರತೀ ಹಾಡನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಚೋರ್ನಿ ಹಾಡನ್ನು ಮೊದಲ ಎರಡು ಗಂಟೆಯಲ್ಲಿ 2 ಲಕ್ಷ ಮಂದಿ ವೀಕ್ಷಿಸಿ. ಇದಾದ ಬಳಿಕ ಈವರೆಗೆ ಒಟ್ಟು 4 ಹಾಡುಗಳು ಬಿಡುಗಡೆಯಾಗಿವೆ. ಅಲ್ಲಿಗೆ ಗಾಯಕನ ಐದು ಹಾಡುಗಳು ಸಾವಿನ ನಂತರ ಬಿಡುಗಡೆಗೊಂಡಂತಾಗಿದೆ.