ಕರ್ನಾಟಕ

karnataka

ETV Bharat / entertainment

ವಿಜಯಕಾಂತ್ ಸಿನಿಪಯಣ​: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ

Vijayakanth: ಇಹಲೋಕ ತ್ಯಜಿಸಿರುವ ನಟ ವಿಜಯಕಾಂತ್ ಅವರ ಸಿನಿಪಯಣದ ಮಾಹಿತಿ ಇಲ್ಲಿದೆ.

Vijayakanth
ವಿಜಯಕಾಂತ್

By ETV Bharat Karnataka Team

Published : Dec 28, 2023, 10:56 AM IST

ಕಾಲಿವುಡ್ ಜನಪ್ರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ಇನ್ನು ನೆನಪು ಮಾತ್ರ. ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ವಿಜಯಕಾಂತ್ 71ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆ ಸೇರಿದಂತೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಿಜಯಕಾಂತ್ ನಿಧನಕ್ಕೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಕಂಬನಿ ಮಿಡಿದಿದ್ದಾರೆ.

ವಿಜಯಕಾಂತ್ ಜನನ: ವಿಜಯಕಾಂತ್ ಅವರು ತಮಿಳುನಾಡಿನ ಮಧುರೈನಲ್ಲಿ 1952ರ ಆಗಸ್ಟ್ 25ರಂದು ಜನಿಸಿದರು. ಅವರ ಮೂಲ ಹೆಸರು ನಾರಾಯಣನ್ ವಿಜಯರಾಜ್ ಅಳಗರಸ್ವಾಮಿ. ಚಿತ್ರರಂಗಕ್ಕೆ ಬಂದ ಬಳಿಕ ವಿಜಯಕಾಂತ್ ಎಂದು ಹೆಸರು ಬದಲಾಯಿಸಿಕೊಂಡರು. ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವಿಜಯಕಾಂತ್ ಸಿನಿಪಯಣ:ವಿಜಯಕಾಂತ್ ತಮ್ಮ 27ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1979ರಲ್ಲಿ, ಇನಿಕ್ಕುಂ ಇಳಮೈ ಚಿತ್ರದಲ್ಲಿ ಖಳನಾಯಕನಾಗಿ ಪ್ರೇಕ್ಷಕರಿಗೆ ಪರಿಚಯವಾದರು. ಅಂದಿನಿಂದ 2015ರವರೆಗೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ದಿನಕ್ಕೆ ಮೂರು ಶಿಫ್ಟ್​ನಂತೆ ಕೆಲಸ ಮಾಡಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಸೋಲು ಕಂಡಿದ್ದರು. ಬಳಿಕ ಸಿನಿಮಾಗಳು ಪ್ರೇಕ್ಷಕರನ್ನು ತಲುಪಿದವು. 1984ರಲ್ಲಿ ವಿಜಯಕಾಂತ್ ಅಭಿನಯದ 18 ಚಿತ್ರಗಳು ತೆರೆಕಂಡಿದ್ದವು. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ಸಗಪ್ತಂ (2015) ಚಿತ್ರದಲ್ಲಿ ಅಭಿನಯಿಸಿದ್ದರು.

ಸಂಭಾವನೆ ತೆಗೆದುಕೊಳ್ಳುವವರಲ್ಲ! ನಟ ವಿಜಯಕಾಂತ್ ಸಂದೇಶ ಆಧಾರಿತ ಸಿನಿಮಾಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದರು. ದೇಶಭಕ್ತಿ ಚಿತ್ರಗಳು, ಗ್ರಾಮೀಣ ವಿಷಯಾಧಾರಿತ ಸಿನಿಮಾಗಳು, ದ್ವಿಪಾತ್ರಗಳಿರಲಿ ವಿಜಯಕಾಂತ್ ಸದಾ ಮುಂದಿದ್ದರು. ಕಮರ್ಷಿಯಲ್ ಚಿತ್ರಗಳಲ್ಲೂ ಸದ್ದು ಮಾಡುತ್ತಿದ್ದರು. ಆದ್ರೆ ತಮ್ಮ ಹಣವನ್ನು ಮೊದಲೇ ತೆಗೆದುಕೊಳ್ಳುತ್ತಿರಲಿಲ್ಲ. ನಿರ್ಮಾಪಕರು ಹಣಕಾಸಿನ ಸಮಸ್ಯೆಯಲ್ಲಿದ್ದಾರೆ ಎಂದು ಗೊತ್ತಾದರೆ ಅವರಿಂದ ಸಂಭಾವನೆ ತೆಗೆದುಕೊಳ್ಳುತ್ತಿರಲಿಲ್ಲ ಎಂಬ ಮಾಹಿತಿ ಇದೆ.

ತಮಿಳು ಸಿನಿಮಾಗಳ ಮೇಲೆ ಒಲವು:ವಿಜಯಕಾಂತ್ ನಟಿಸಿದ್ದು ಕೇವಲ ತಮಿಳು ಚಿತ್ರಗಳಲ್ಲಿ ಮಾತ್ರ. ಇತರೆ ಭಾಷೆಗಳಲ್ಲಿ ನಟಿಸಿಲ್ಲ. ಆದರೆ ಅವರ ಚಿತ್ರಗಳು ತೆಲುಗು ಮತ್ತು ಹಿಂದಿಗೆ ಡಬ್ ಆಗಿದ್ದು, ಉತ್ತಮ ಯಶಸ್ಸನ್ನು ಗಳಿಸಿವೆ. ಶಿವಪ್ಪು ಮಲ್ಲಿ (ಎರ್ರಾ ಮಲ್ಲೇಲು ರಿಮೇಕ್), ಜಡಿಕ್ಕೋರು ನೀಧಿ ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ನಟಿಸಿದ ಅವರು ಕಾಲಿವುಡ್‌ನಲ್ಲಿ ಪುರಚಿ ಕಳಿಂಗರ್ (ಕ್ರಾಂತಿಕಾರಿ ನಟ) ಎಂದು ಕರೆಯಲ್ಪಟ್ಟರು. ನಂತರ ಅಭಿಮಾನಿಗಳು ಕ್ಯಾಪ್ಟನ್ ವಿಜಯಕಾಂತ್ ಎಂದು ಕರೆಯತೊಡಗಿದರು. ಅವರ 100ನೇ ಚಿತ್ರ 'ಕ್ಯಾಪ್ಟನ್ ಪ್ರಭಾಕರನ್' ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ವಿಜಯಕಾಂತ್ ಒಂದು ಸಮಯದಲ್ಲಿ ಸೂಪರ್​ ಸ್ಟಾರ್​ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಿಗೆ ಕಠಿಣ ಸ್ಪರ್ಧೆ ನೀಡಿದ್ದರು.

ಇದನ್ನೂ ಓದಿ:ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ: ರಣ್​​ಬೀರ್ ವಿರುದ್ಧ ದೂರು

ನಿರ್ಮಾಪಕ, ನಿರ್ದೇಶಕರಾಗಿಯೂ ಕೆಲಸ: ವಿಜಯಕಾಂತ್ ನಿರ್ದೇಶನದ ಏಕೈಕ ಚಿತ್ರ 'ವಿರುಧಗಿರಿ'. ವಲ್ಲರಸು, ನರಸಿಂಹ, ಸಗಪ್ತಂ ಸೇರಿ ಕೆಲ ಚಿತ್ರಗಳನ್ನು ನಿರ್ಮಿಸಿದ್ದಾರೆ. 1994ರಲ್ಲಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ (MGR) ಮತ್ತು 2001ರಲ್ಲಿ ಕಲೈಮಾಲಿ ಪ್ರಶಸ್ತಿ (ತಮಿಳುನಾಡು ಸರ್ಕಾರ ಕೊಡುವ ಪ್ರಶಸ್ತಿ) ಮುಡಿಗೇರಿಸಿಕೊಂಡರು. 2001ರಲ್ಲಿ ಅತ್ಯುತ್ತಮ ಭಾರತೀಯ ನಾಗರಿಕ ಪ್ರಶಸ್ತಿ, 2009ರಲ್ಲಿ ತಮಿಳು ಸಿನಿಮಾದ ಟಾಪ್ 10 ಲೆಜೆಂಡ್ಸ್ ಪ್ರಶಸ್ತಿ, 2011ರಲ್ಲಿ ಗೌರವ ಡಾಕ್ಟರೇಟ್ (ಇಂಟರ್ನ್ಯಾಷನಲ್ ಇನ್ಸ್​​ಟಿಟ್ಯೂಟ್ ಆಫ್ ಚರ್ಚ್ ಮ್ಯಾನೇಜ್ಮೆಂಟ್) ಸಂದಿದೆ. ಜೊತೆಗೆ ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಇದನ್ನೂ ಓದಿ:ಕೋವಿಡ್​ನಿಂದ ಬಳಲುತ್ತಿದ್ದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ ​

ರಾಜಕೀಯಕ್ಕೆ ಎಂಟ್ರಿ: ಜನಸೇವೆ ಮಾಡುವ ಉದ್ದೇಶದೊಂದಿಗೆ ರಾಜಕೀಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 2005ರಲ್ಲಿ ಡಿಎಂಡಿಕೆ ಪಕ್ಷ ಸ್ಥಾಪಿಸಿದರು. 2006 ಮತ್ತು 2011ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2016ರ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದರು.

ABOUT THE AUTHOR

...view details