ಕರ್ನಾಟಕ

karnataka

ಗಾನ ಕೋಗಿಲೆ ಲತಾ ಮಂಗೇಶ್ಕರ್​​ಗೆ 94ನೇ ಜನ್ಮದಿನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸ್ಮರಣೆ

By PTI

Published : Sep 28, 2023, 11:44 AM IST

ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ 94ನೇ ಜನ್ಮದಿನವಾಗಿದ್ದು, ಪ್ರಧಾನಿ ಮೋದಿ ಸೇರದಂತೆ ಅನೇಕರು ಗೌರವ ಸಲ್ಲಿಸಿದ್ದಾರೆ.

ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್

ನವದೆಹಲಿ:ಇಂದು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಜನ್ಮದಿನ. ಸಂಗೀತ ಶಾರದೆ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಸುಮಧುರ ಗೀತೆಗಳ ಮೂಲಕ ಎಂದೆಂದಿಗೂ ಅಭಿಮಾನಿಗಳ ಮನದೊಳಗೆ ಜೀವಂತ ಈ ಗಾನ ಕೋಗಿಲೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಎಕ್ಸ್​ನಲ್ಲಿ ಪೋಸ್ಟ್​:ಲತಾ ಮಂಗೇಶ್ಕರ್ ಅವರ 94ನೇ ಜನ್ಮದಿನವನ್ನು ಪ್ರಧಾನಿ ಮೋದಿ ಅವರು ಸ್ಮರಿಸಿದರು. "ಜನ್ಮ ವಾರ್ಷಿಕೋತ್ಸವದಂದು ಲತಾ ದೀದಿ ಅವರನ್ನು ಸ್ಮರಿಸುತ್ತಿದ್ದೇವೆ. ಭಾರತೀಯ ಸಂಗೀತಕ್ಕೆ ಅವರ ಕೊಡುಗೆ ದಶಕಗಳವರೆಗೆ ವ್ಯಾಪಿಸಿದೆ. ಅವರ ಭಾವಪೂರ್ಣ ಚಿತ್ರಣಗಳು ಆಳವಾದ ಭಾವನೆಗಳನ್ನು ಹುಟ್ಟುಹಾಕಿವೆ. ಮತ್ತು ನಮ್ಮ ಸಂಸ್ಕೃತಿಯಲ್ಲಿ ಅವರು ಶಾಶ್ವತವಾಗಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ" ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಿದರು. "ಲತಾ ದೀದಿ ವಿಶ್ವ ವೇದಿಕೆಯಲ್ಲಿ ಸಾಧನೆ ಮೂಲಕ ಭಾರತೀಯ ಸಂಗೀತ ಸಂಪ್ರದಾಯವನ್ನು ಶ್ರೀಮಂತಗೊಳಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು". "ಸಂಗೀತದ ಉತ್ತುಂಗವನ್ನು ತಲುಪಿದ ನಂತರವೂ ಅವರು ಭಾರತೀಯರ ಸಂಬಂಧದೊಂದಿಗೆ ಸಂಪರ್ಕ ಹೊಂದಿದ್ದ ಅವರ ಸರಳತೆ ಮತ್ತು ವಿನಮ್ರತೆಯು ದೇಶದ ಜನತೆಗೆ ವಿಶೇಷ ಉದಾಹರಣೆಯಾಗಿದೆ. ಭಾರತ ರತ್ನ ಲತಾ ದೀದಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮನಗಳು" ಎಂದು ಅಮಿತ್ ಶಾ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

25,000ಕ್ಕೂ ಹೆಚ್ಚು ಹಾಡು: ಸೆಪ್ಟೆಂಬರ್ 28, 1929 ರಂದು ಜನಿಸಿದ ಲತಾ ಮಂಗೇಶ್ಕರ್ ಅವರು 1942 ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಸುಮಾರು 36 ಭಾರತೀಯ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಸಾಧನೆ ಅಪಾರ. ಇವರ ಹಾಡುಗಳೆಲ್ಲವೂ ಅಚ್ಚುಮೆಚ್ಚು. ಖ್ವಾಬ್ ಬನ್​​ಕರ್ ಕೋಯಿ ಆಯೇಗಾ (ರಜಿಯಾ ಸುಲ್ತಾನ್), ಚುನ್ರಿ ಸಂಭಾಲ್ ಗೋರಿ (ಬಾಹರೋನ್ ಕೆ ಸಪ್ನೆ), ಬರ್ಸೆ ಘನ್ ಸಾರಿ ರಾತ್ (ತರಂಗ್), ತು ಆಜ್ ಅಪ್ನಿ ಹಾತ್ ಸೆ ಕುಚ್ ಬಿಗ್ಡಿ ಸವಾರ್​ ದೇ (ಡಾಕು), ರಾಜಾ ಬೇಟಾ ಸೋಯಾ ಮೇರಾ (ರಾಜಾ ಹರಿಶ್ಚಂದ್ರ) ಎಂಬ ಹಾಡುಗಳು ಸಾರ್ವಕಾಲಿಕ ಮೆಚ್ಚುಗೆಯನ್ನು ಪಡೆದಿವೆ.

ಇದನ್ನೂ ಓದಿ:ಅಪ್ರತಿಮ ದೇಶ ಭಕ್ತ ಭಗತ್ ಸಿಂಗ್ ಜನ್ಮದಿನ: ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ABOUT THE AUTHOR

...view details