ಕರ್ನಾಟಕ

karnataka

ETV Bharat / entertainment

ರಜನಿಕಾಂತ್​ ಮುಂದಿನ ಸಿನಿಮಾ 'ಲಾಲ್​ ಸಲಾಂ' ಟೀಸರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್​ - ಈಟಿವಿ ಭಾರತ ಕನ್ನಡ

Lal Salaam Teaser: ರಜನಿಕಾಂತ್​ ನಟನೆಯ ಮುಂಬರುವ ಸಿನಿಮಾ 'ಲಾಲ್​ ಸಲಾಂ' ಟೀಸರ್ ನಾಳೆ ಬಿಡುಗಡೆಯಾಗಲಿದೆ.

Lal Salaam movie teaser will be release on november 12th
ರಜನಿಕಾಂತ್​ ಮುಂದಿನ ಸಿನಿಮಾ 'ಲಾಲ್​ ಸಲಾಂ' ಟೀಸರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್​

By ETV Bharat Karnataka Team

Published : Nov 11, 2023, 4:17 PM IST

'ಜೈಲರ್​' ಚಿತ್ರದಿಂದ ಅಭೂತಪೂರ್ವ ಯಶಸ್ಸು ಪಡೆದುಕೊಂಡಿರುವ ಕಾಲಿವುಡ್​ ಹಿರಿಯ ನಟ ರಜನಿಕಾಂತ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಲಾಲ್​ ಸಲಾಂ'. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್​ ಬ್ಲಾಕ್​ಬಸ್ಟರ್​ 'ಕೈ ಪೋ ಚೆ' ಚಿತ್ರದ ರಿಮೇಕ್​ ಆಗಿ ಈ ಸಿನಿಮಾ ತಯಾರಾಗುತ್ತಿದೆ ಎನ್ನಲಾಗಿದೆ. ಮುಂದಿನ ವರ್ಷ ಸಂಕ್ರಾಂತಿಯಂದು ತೆರೆ ಕಾಣಲಿರುವ ಚಿತ್ರದ ಟೀಸರ್​ ಬಿಡುಗಡೆಗೆ ಇದೀಗ ಮುಹೂರ್ತ ಫಿಕ್ಸ್​ ಆಗಿದೆ.

ಯಾವಾಗ ಟೀಸರ್​?:ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್​ ಅಡಿ 'ಲಾಲ್​ ಸಲಾಂ' ಚಿತ್ರ ತಯಾರಾಗುತ್ತಿದೆ. ಟೀಸರ್​ ಅನ್ನು 2023ರ ನವೆಂಬರ್​ 12, ಭಾನುವಾರದಂದು (ನಾಳೆ) ದೀಪಾವಳಿ ಉಡುಗೊರೆಯಾಗಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. 'ಗೆಟ್ ರೆಡಿ ಫಾರ್ ಪ್ರಿಫೇಸ್ ಲಾಲ್ ಸಲಾಂ' ಎಂದು ಎಕ್ಸ್​ನಲ್ಲಿ ಲೈಕಾ ಪ್ರೊಡಕ್ಷನ್ಸ್​ ಪೋಸ್ಟ್​ ಮಾಡಿದೆ. ನಾಳೆ ಬೆಳಗ್ಗೆ 10 ಗಂಟೆ 45 ನಿಮಿಷಕ್ಕೆ ಟೀಸರ್​ ಬಿಡುಗಡೆಯಾಗಲಿದೆ.

'ಲಾಲ್ ಸಲಾಂ' ಚಿತ್ರವು ಕ್ರಿಕೆಟ್ ಮತ್ತು ಆ್ಯಕ್ಷನ್ ಕಥೆಯಾಧಾರಿತವಾಗಿದ್ದು, ಐಶ್ವರ್ಯಾ ರಜನಿಕಾಂತ್​ ಅವರು ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವು ಐಶ್ವರ್ಯಾ ಅವರ ನಾಲ್ಕನೇ ನಿರ್ದೇಶನವಾಗಿದೆ. ಚಿತ್ರದಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ, ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ ತಾರೆ ಜೀವತಾ ರಾಜಶೇಖರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. 33 ವರ್ಷಗಳ ನಂತರ ಅವರು ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಮಗಳ ಸಿನಿಮಾಗೆ ಮೊಯ್ದಿನ್​ ಭಾಯ್ ಆದ್ರು ರಜನಿ: 'ಲಾಲ್​ ಸಲಾಂ' ಫಸ್ಟ್​ ಲುಕ್​ ಔಟ್

ಪಿರಿಯಾಡಿಕಲ್ ಡ್ರಾಮಾವಾಗಿ ತಯಾರಾಗುತ್ತಿರುವ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡುತ್ತಿದ್ದಾರೆ. 'ಲಾಲ್​ ಸಲಾಂ' ಚಿತ್ರವು ಮುಂದಿನ ವರ್ಷ ಜನವರಿ ತಿಂಗಳ ಆರಂಭದಲ್ಲಿ ಪೊಂಗಲ್​ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಜನವರಿ 12ರಂದು ಬಿಡುಗಡೆಯಾಗಲಿರುವ ಮಹೇಶ್ ಬಾಬು ಅವರ ಗುಂಟೂರು ಖಾರಂ ಮತ್ತು ಜನವರಿ 13ರಂದು ತೆರೆ ಕಾಣಲಿರುವ ರವಿತೇಜ ನಟನೆಯ ಈಗಲ್​ ಚಿತ್ರಕ್ಕೆ ಪೈಪೋಟಿ ನೀಡಲಿದೆ. ಚಿತ್ರವು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಹಾರ್ಡ್​ ಡಿಸ್ಕ್​ ಮಿಸ್ಸಿಂಗ್​?... ಶೂಟಿಂಗ್​ ರೆಗ್ಯುಲರ್​ ಶೆಡ್ಯೂಲ್​ಗಳೊಂದಿಗೆ ಶರವೇಗದಲ್ಲಿ ಸಾಗುತ್ತಿದೆ. ಆದರೆ, ಕೆಲವು ದಿನಗಳಿಂದ 'ಲಾಲ್​ ಸಲಾಂ' ಚಿತ್ರದ ಸುದ್ದಿಯೊಂದು ಹರಿದಾಡುತ್ತಿದೆ. ರಜನಿಕಾಂತ್​ ಅವರನ್ನು ಚಿತ್ರೀಕರಿಸಿದ ಕೆಲವು ದೃಶ್ಯಗಳು ಹಾರ್ಡ್​ ಡಿಸ್ಕ್​ನಲ್ಲಿ ಕಾಣಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಚಿತ್ರೀಕರಣ ಬಹುತೇಕ ಅಂತಿಮ ಹಂತ ತಲುಪಿರುವಾಗಲೇ ಹೀಗಾಗಿರುವುದು ಚಿತ್ರತಂಡಕ್ಕೆ ಭಾರಿ ಆಘಾತವಾಗಿದೆ ಎಂದು ವರದಿಯಾಗಿದೆ. ತಲೈವಾ ದೃಶ್ಯಗಳನ್ನು ಹಾರ್ಡ್​ ಡಿಸ್ಕ್​ನಿಂದ ಹೊರತೆಗೆಯಲು ವಿದೇಶದಿಂದ ತಂತ್ರಜ್ಞರನ್ನು ಕರೆಸಲಾಗಿದೆಯಂತೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:ಉದಯನಿಧಿ ಸ್ಟಾಲಿನ್​ ನಿರ್ಮಾಣ ಸಂಸ್ಥೆಯ ಪಾಲಾಯ್ತು 'ಲಾಲ್​ ಸಲಾಂ' ಚಿತ್ರದ ವಿತರಣೆ ಹಕ್ಕು

ABOUT THE AUTHOR

...view details