ಕರ್ನಾಟಕ

karnataka

ETV Bharat / entertainment

ಶಕ್ತಿಪ್ರಸಾದ್ ಹುಟ್ಟೂರು ಜಕ್ಕೇನಹಳ್ಳಿಯಲ್ಲಿ ಅರ್ಜುನ್​ ಸರ್ಜಾ ತಾಯಿ ಲಕ್ಷ್ಮಿದೇವಮ್ಮಅಂತ್ಯಸಂಸ್ಕಾರ - Lakshmidevammas last rites at Jakkenahalli Tumkur

ಖ್ಯಾತ ನಟ ಶಕ್ತಿಪ್ರಸಾದ್ ಅವರ ಪತ್ನಿ ಹಾಗೂ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿದೇವಮ್ಮ ಅವರ ಅಂತ್ಯ ಸಂಸ್ಕಾರ ತುಮಕೂರಿನ ಮಧುಗಿರಿ ಬಳಿಯ ಜಕ್ಕೇನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಮಗ ಅರ್ಜುನ್ ಸರ್ಜಾ ಹೇಳಿದ್ದಾರೆ.

lakshmidevammas-last-rites-at-jakkenahalli-tumkur
ಶಕ್ತಿಪ್ರಸಾದ್ ಹುಟ್ಟೂರಾದ ಜಕ್ಕೇನಹಳ್ಳಿಯಲ್ಲಿ ಪತ್ನಿ ಲಕ್ಷ್ಮೀದೇವಮ್ಮ ಅಂತ್ಯಸಂಸ್ಕಾರ

By

Published : Jul 23, 2022, 8:00 PM IST

Updated : Jul 23, 2022, 9:30 PM IST

ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಪತ್ನಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಮ್ಮ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಿ ದೇವಮ್ಮ, ಇಂದು ಬೆಳಗ್ಗೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಶಕ್ತಿಪ್ರಸಾದ್ ಹುಟ್ಟೂರಾದ ಜಕ್ಕೇನಹಳ್ಳಿಯಲ್ಲಿ ಪತ್ನಿ ಲಕ್ಷ್ಮಿ ದೇವಮ್ಮ ಅಂತ್ಯಸಂಸ್ಕಾರ

ಲಕ್ಷ್ಮಿದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ಸದ್ಯ ಲಕ್ಷ್ಮಿದೇವಮ್ಮ ಪಾರ್ಥಿವ ಶರೀರವನ್ನು ಅಪೋಲೋ ಆಸ್ಪತ್ರೆಯಿಂದ, ಧ್ರುವ ಸರ್ಜಾರವರ ಕೆ. ಆರ್ ರಸ್ತೆಯ ನಿವಾಸಕ್ಕೆ ತರಲಾಗಿದ್ದು, ಕುಟುಂಬ ಮತ್ತು ಬಂಧು ಮಿತ್ರರ ಅಂತಿಮದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ನಟ ಶಕ್ತಿ ಪ್ರಸಾದ್ ಹಾಗೂ ಲಕ್ಷ್ಮಿದೇವಮ್ಮ ಅವರಿಗೆ ಮೂವರು ಮಕ್ಕಳು. ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ ಅಮ್ಮಾಜಿ. ಕಿಶೋರ್ ಸರ್ಜಾ ಈಗಾಗಲೇ ಮೃತಪಟ್ಟಿದ್ದಾರೆ. ಎರಡು ವರ್ಷದ ಹಿಂದೆ ಮೊಮ್ಮಗ ಚಿರಂಜೀವಿ ಸರ್ಜಾನ ನಿಧನದಿಂದ ಲಕ್ಷ್ಮಿದೇವಮ್ಮ ಬಹಳವಾಗಿ ನೊಂದಿದ್ದರು.

ಇನ್ನು ಲಕ್ಷ್ಮಿದೇವಮ್ಮ ಅವರ ಅಂತ್ಯ ಸಂಸ್ಕಾರವನ್ನು ನಾಳೆ ಬೆಳಗ್ಗೆ 4 ಗಂಟೆಗೆ ಪತಿ ಶಕ್ತಿ ಪ್ರಸಾದ್ ಅವರ ಹುಟ್ಟೂರಾದ ತುಮಕೂರಿನ ಮಧುಗಿರಿ ಬಳಿಯ ಜಕ್ಕೇನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಮಗ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

ಓದಿ :ನಟ ಅರ್ಜುನ್ ಸರ್ಜಾ ಅವರಿ​ಗೆ ಮಾತೃ ವಿಯೋಗ

Last Updated : Jul 23, 2022, 9:30 PM IST

For All Latest Updates

TAGGED:

ABOUT THE AUTHOR

...view details