ಸೂಪರ್ ಸ್ಟಾರ್ ರಜನಿಕಾಂತ್ ಶೀಘ್ರದಲ್ಲೇ ಲೈಕಾ ಪ್ರೊಡಕ್ಷನ್ಸ್ನಡಿ ಸಿನಿಮಾ ಮಾಡಲಿದ್ದಾರೆ. ನಾಯಕನ ಬದಲು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಸುಶಾಂತ್ ಸಿಂಗ್ ಅಭಿನಯದ ಹಿಂದಿಯ ಸೂಪರ್ ಹಿಟ್ ಸಿನಿಮಾದ ರೀಮೇಕ್ ಎನ್ನಲಾಗಿದ್ದು, ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಚಿತ್ರಗಳು ಎಂದ ಮೇಲೆ ಅಭಿಮಾನಿಗಳ ನಿರೀಕ್ಷೆ ಕೊಂಚ ಹೆಚ್ಚೇ. ಪ್ರೇಕ್ಷಕರು ಮಾನಿಕ್ ಭಾಷಾ, ಪಡಯಪ್ಪ ಮತ್ತು ರೋಬೋನಂತಹ ಹಿಟ್ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಸದ್ಯ ಅವರು ನಟಿಸುತ್ತಿರುವ ಜೈಲರ್ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ.
ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ರಜನಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ನಟಿ ರಮ್ಯಾ ಕೃಷ್ಣ, ಕನ್ನಡ ನಟ ಶಿವ ರಾಜ್ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ಸಂಗೀತ ನೀಡಿರುವ ಜೈಲರ್ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.
ಇದನ್ನೂ ಓದಿ:ಅಪ್ಪ ರಜಿನಿ ಸಿನಿಮಾಗೆ ಮಗಳು ಐಶ್ವರ್ಯಾ ಆ್ಯಕ್ಷನ್ ಕಟ್ - ಲಾಲ್ ಸಲಾಮ್ ಪೋಸ್ಟರ್ ರಿಲೀಸ್
ರಜನಿಕಾಂತ್ ಅವರು ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಸತತ ಎರಡು ಚಿತ್ರಗಳನ್ನು ಮಾಡಲು ಹೊರಟಿದ್ದಾರೆ. ಅದರಲ್ಲಿ ಒಂದು ಚಿತ್ರವನ್ನು ಡಾನ್ ಚಿತ್ರ ಖ್ಯಾತಿಯ ವಿನು ಚಕ್ರವರ್ತಿ ನಿರ್ದೇಶಿಸಲಿದ್ದಾರೆ. ಎರಡನೇ ಚಿತ್ರವನ್ನು ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ನಿರ್ದೇಶಿಸಲಿದ್ದಾರೆ. ಇದಕ್ಕೆ ಲಾಲ್ ಸಲಾಂ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ನಟಿಸಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಹಿಂದಿಯಲ್ಲಿ ಸುಶಾಂತ್ ಸಿಂಗ್ ಅಭಿಯಿಸಿದ್ದ ಕೈ ಪೋ ಚೆ ರಿಮೇಕ್ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.