ಕರ್ನಾಟಕ

karnataka

ETV Bharat / entertainment

Kushi: ಎರಡೇ ದಿನಕ್ಕೆ 50 ಕೋಟಿ ರೂ. ದಾಟಿದ ಖುಷಿ - ಸಮಂತಾ, ದೇವರಕೊಂಡ ಸಿನಿಮಾಗೆ ಪಾಸಿಟಿವ್​ ರೆಸ್ಪಾನ್ಸ್ - ವಿಜಯ್​ ದೇವರಕೊಂಡ

Kushi box office collection: ಖುಷಿ ಸಿನಿಮಾ ವಿಶ್ವದಾದ್ಯಂತ ಎರಡು ದಿನಗಳಲ್ಲಿ 51 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Kushi box office collection
ಖುಷಿ ಬಾಕ್ಸ್​ ಆಫೀಸ್​ ಕಲೆಕ್ಷನ್​​

By ETV Bharat Karnataka Team

Published : Sep 3, 2023, 7:40 PM IST

ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಕಾಂಬೋದ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ ಖುಷಿ ಪ್ರೇಕ್ಷಕರ ಮನ ಮುಟ್ಟಿದೆ. ಶಿವ ನಿರ್ವಾಣ ಮತ್ತು ಆ್ಯಕ್ಷನ್​ ಕಟ್​ ಹೇಳಿರುವ ಲವ್​ ಸ್ಟೋರಿ ಚಿತ್ರ ಶುಕ್ರವಾರ ಅಂದರೆ ಸೆಪ್ಟೆಂಬರ್​ 1 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ರಿಲೀಸ್​ಗೂ ಮುನ್ನವೇ ಚಿತ್ರದ ಕುರಿತು ಪಾಸಿಟಿವ್ ಟಾಕ್​ ಇತ್ತು. ಸದ್ಯ ತೆರೆಕಂಡಿರುವ ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. ​15.25 ಕೋಟಿ ರೂ.ನೊಂದಿಗೆ ಭರ್ಜರಿ ಓಪನಿಂಗ್​ ಪಡೆದ ಖುಷಿ ಸಿನಿಮಾ ವಿಶ್ವದಾದ್ಯಂತ ಎರಡು ದಿನಗಳಲ್ಲಿ 51 ಕೋಟಿ ರೂ. ಸಂಪಾದನೆ ಮಾಡಿದೆ. ಇಂದು ಭಾನುವಾರ ಹಿನ್ನೆಲೆ ಈ ಸಂಖ್ಯೆ ಏರುವ ನಿರೀಕ್ಷೆಗಳಿವೆ.

ಇಂದು ತೆಲುಗು ಮಾರುಕಟ್ಟೆಯಲ್ಲಿ ಖುಷಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶನಿವಾರದಂದು ಯುಎಸ್​ಎಯಲ್ಲಿ $1 ಮಿಲಿಯನ್​ ದಾಟಿದೆ. ಸದ್ಯ 50 ಕೋಟಿ ರೂ. ಗಡಿ ದಾಟಿರುವ ಈ ಸಿನಿಮಾ ಸಂಪೂರ್ಣ ಯಶಸ್ವಿ ಎಂದು ಘೋಷಿಸಲು ಇನ್ನೂ ಬಹುಕೋಟಿ ಸಂಗ್ರಹ ಮಾಡಬೇಕಿದೆ.

ಖುಷಿ ಚಿತ್ರದ ಕಥೆ ವಿಪ್ಲವ್​ (ನಟ ವಿಜಯ್​ ದೇವರಕೊಂಡ) ಮತ್ತು ಆರಾಧ್ಯ (ನಟಿ ಸಮಂತಾ ರುತ್​ ಪ್ರಭು) ಸುತ್ತ ಸುತ್ತುತ್ತದೆ. ವಿಭಿನ್ನ ಹಿನ್ನೆಲೆಯಿಂದ ಬಂದ ಈ ಜೋಡಿ ಪ್ರೀತಿಯಲ್ಲಿ ಬೀಳುತ್ತದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗೋ ಈ ಜೋಡಿ ಬಳಿಕ ಹಲವು ಸವಾಲುಗಳನ್ನು ಎದುರಿಸುತ್ತದೆ. ಅಭದ್ರತೆ, ಅಸೂಯೆ ಸೇರಿದಂತೆ ನಾನಾ ಅಂಶಗಳ ಹೊರತಾಗಿ ಈ ಜೋಡಿ ಹೇಗೆ ಜೀವನ ಸಾಗಿಸುತ್ತಾರೆ ಅನ್ನೋದೇ ಸಿನಿಮಾದ ಪ್ರಮುಖ ಅಂಶ. ಕಂಪ್ಲೀಟ್​ ಎಂಟರ್​ಟೈನ್​ಮೆಂಟ್​ ಸಿನಿಮಾಗೆ ಪ್ರೇಕ್ಷಕರು ಮಣೆ ಹಾಕಿದ್ದಾರೆ. ಸ್ಟೋರಿಲೈನ್​, ಕಥೆ ರವಾನಿಸಿದ ರೀತಿ, ಸಂಗೀತ ಮತ್ತು ನಟನೆಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:Box office battle: ಪಠಾಣ್​ ದಾಖಲೆ ಮುರಿಯುವತ್ತ ಗದರ್​ 2: ಓಎಂಜಿ 2 ಸಂಪಾದನೆ ಹೇಗಿದೆ?

ಕೊನೆಯ ಸಿನಿಮಾಗಳಲ್ಲಿ ಹಿನ್ನಡೆ ಅನುಭವಿಸಿದ್ದ ಟಾಲಿವುಡ್​ ಸ್ಟಾರ್ ನಟರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಅವರಿಗೆ ಗೆಲುವಿನ ಅವಶ್ಯಕತೆ ಇತ್ತು. ಪ್ಯಾನ್​ ಇಂಡಿಯಾ ಸಿನಿಮಾ ಲೈಗರ್​ನಲ್ಲಿ ವಿಜಯ್​ ದೇವರಕೊಂಡ ಮತ್ತು ಶಾಕುಂತಲಂ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಸೋಲಿನ ರುಚಿ ಕಂಡಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮಹಾನಟಿ'ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ ಖುಷಿ ಚಿತ್ರದಲ್ಲಿ ಎರಡನೇ ಬಾರಿ ತೆರೆಹಂಚಿಕೊಂಡಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಖುಷಿ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಎರಡು ದಿನಗಳಲ್ಲಿ 50 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಮುಂದಿನ ದಿನಗಳಲ್ಲಿ ಚಿತ್ರ ಎಷ್ಟು ಗಳಿಸಲಿದೆ ಎಂಬುದರ ಮೇಲೆ ಅಭಿಮಾನಿಗಳ ಗಮನ ನೆಟ್ಟಿದೆ.

ಇದನ್ನೂ ಓದಿ:ಶಾರುಖ್ 'ಜವಾನ್' ಭರ್ಜರಿ ಓಪನಿಂಗ್​​ ನಿರೀಕ್ಷೆ; ಫಸ್ಟ್‌ ಡೇ ಶೋಗೆ ಮಾರಾಟವಾದ ಟಿಕೆಟ್​​ಗಳೆಷ್ಟು?!

ABOUT THE AUTHOR

...view details