ಕರ್ನಾಟಕ

karnataka

ETV Bharat / entertainment

Kushi ಗೆದ್ದ ಸಂಭ್ರಮದಲ್ಲಿ ವಿಜಯ್​ ದೇವರಕೊಂಡ: ಅಭಿಮಾನಿಗಳಿಗೆ 1 ಕೋಟಿ ರೂ. ದೇಣಿಗೆ - ಅಭಿಮಾನಿಗಳಿಗೆ ವಿಜಯ್​ ದೇವರಕೊಂಡ ದೇಣಿಗೆ

Kushi success celebrations: ವಿಶಾಖಪಟ್ಟಣಂನಲ್ಲಿ ನಡೆದ 'ಖುಷಿ' ಸಕ್ಷಸ್​ ಸೆಲೆಬ್ರೇಶನ್​ನಲ್ಲಿ ನಟ ವಿಜಯ್​ ದೇವರಕೊಂಡ ಅಭಿಮಾನಿಗಳ ಮೇಲಿನ ತಮ್ಮ ಪ್ರೀತಿ, ಗೌರವ ವ್ಯಕ್ತಪಡಿಸಿದ್ದಾರೆ.

Vijay Deverakonda
ವಿಜಯ್​ ದೇವರಕೊಂಡ

By ETV Bharat Karnataka Team

Published : Sep 5, 2023, 1:53 PM IST

ಸೌತ್​ ಸಿನಿಮಾ ಇಂಡಸ್ಟ್ರಿಯ ಸ್ಟಾರ್​ ಕಲಾವಿದರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ 'ಖುಷಿ' ಸಿನಿಮಾ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶ ಕಂಡಿದೆ. ಸಿನಿಮಾ ಗೆದ್ದ 'ಖುಷಿ'ಯಲ್ಲಿ ಚಿತ್ರತಂಡವಿದೆ. ಚಿತ್ರಮಂದಿರಗಳಳಲ್ಲಿ ಖುಷಿ ಉತ್ತಮ ಪ್ರದರ್ಶನ ಮುಂದುವರಿಸಿದೆ.

ಸೋಮವಾರದಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 'ಖುಷಿ' ಸಕ್ಷಸ್​ ಸೆಲೆಬ್ರೇಶನ್​ ನಡೆಯಿತು. ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಟ್ಟ ಸರ್ವರಿಗೂ ನಾಯಕ ನಟ ವಿಜಯ್​ ದೇವರಕೊಂಡ ಕೃತಜ್ಞತೆ ಸಲ್ಲಿಸಿದ್ದರು. ಖುಷಿ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಸುಮಾರು ವಿಶ್ವದಾದ್ಯಂತ 16 ಕೋಟಿ ರೂ.ನೊಂದಿಗೆ ಓಪನಿಂಗ್​ ಪಡೆದಿರುವ ಈ ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 39.25 ಕೋಟಿ ರೂಪಾಯಿ ಸಂಪಾದಿಸಿದೆ.

'ಖುಷಿ' ಸಕ್ಷಸ್​ ಸೆಲೆಬ್ರೇಶನ್ ಈವೆಂಟ್​ನಲ್ಲಿ ನಟ ವಿಜಯ್​ ದೇವರಕೊಂಡ ಕೇವಲ ಕೃತಜ್ಞತೆ ಸಲ್ಲಿಸಿದ್ದು ಮಾತ್ರವಲ್ಲದೇ, ಅನಿರೀಕ್ಷಿತ ಘೋಷಣೆ ಮೂಲಕ ಜನರ ಮನ ತಲುಪಿದರು. ತಮ್ಮ ಅಭಿಮಾನಿಗಳಿಗೆ ತಮ್ಮ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸಿದರು. ಬಳಿಕ, 100 ಅರ್ಹ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಘೋಷಿಸಿದರು. ಇದಕ್ಕಾಗಿ, ಖುಷಿ ಸಿನಿಮಾದ ತಮ್ಮ ಸಂಪಾದನೆಯಿಂದ 1 ಕೋಟಿ ರೂ. ನೀಡುವುದಾಗಿ ಬಹಿರಂಗಪಡಿಸಿದರು. ಅಭಿಮಾನಿಗಳ ಕುಟುಂಬದ ಬೆಂಬಲಕ್ಕಾಗಿ, ಫ್ಯಾನ್ಸ್ ಮೇಲಿನ ಮೆಚ್ಚುಗೆ ಮತ್ತು ಕೃತಜ್ಞತೆಯ ಸಂಕೇತವಾಗಿ ಪ್ರತೀ ಕುಟುಂಬ 1 ಲಕ್ಷ ರೂ. ಹಣವನ್ನು ಪಡೆಯಲಿದೆ.

ವಿಜಯ್​ ದೇವರಕೊಂಡ ಅವರ ಹೃದಯಸ್ಪರ್ಶಿ ಘೋಷಣೆ ಅಭಿಮಾನಿಗಳ ಹರ್ಷೋದ್ಘಾರ ಮತ್ತು ಚಪ್ಪಾಳೆಗಳನ್ನು ಸ್ವೀಕರಿಸಿತು. ಕಾರ್ಯಕ್ರಮದಲ್ಲಿ ನಟ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ತಮ್ಮ ಸಂತೋಷವನ್ನು ಸಮರ್ಪಿತ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದರು. ಈ ದೇಣಿಗೆ ಹಣ ತಮ್ಮ ವೈಯಕ್ತಿಕ ಖಾತೆಯಿಂದ ಬರಲಿದೆ ಎಂಬುದನ್ನೂ ಕೂಡ ಅರ್ಜುನ್​​ ರೆಡ್ಡಿ ಸ್ಟಾರ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ:Jawan: ತಿರುಪತಿಯಲ್ಲಿ ಜವಾನ್ ಜೋಡಿ.. ಚಿತ್ರ​ ಬಿಡುಗಡೆಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್, ನಯನತಾರಾ

ನಟನ ಈ ಉದಾರತೆಯ ಸ್ವಭಾವ ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಅವರು ತಮ್ಮ ಲಕ್ಕಿ ಫ್ಯಾನ್ಸ್​ಅನ್ನು ಮನಾಲಿ ಟ್ರಿಪ್​ಗೆ ಕಳುಹಿಸಿದ್ದರು. ಅಲ್ಲಿನ ಎಲ್ಲಾ ಖರ್ಚುಗಳನ್ನು ಸ್ವತಃ ನಟನೇ ಭರಿಸಿದ್ದರು. ಈ ರೀತಿಯ ಕೆಲಸಗಳು ನಟನನ್ನು ಪ್ರೀತಿಸುವ, ಬೆಂಬಲಿಸುವವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅವರ ಬದ್ಧತೆಗೆ ಹೊಂದಿಕೆಯಾಗುತ್ತವೆ.

ಇದನ್ನೂ ಓದಿ:ಜೈಲರ್​ ಗೆದ್ದ ಖುಷಿ: ಮ್ಯೂಸಿಕ್​ ಡೈರೆಕ್ಟರ್​ ಅನಿರುಧ್ ರವಿಚಂದರ್​ಗೆ ಸಿಕ್ತು ದುಬಾರಿ ಕಾರು

ಒಂದು ವಾರ ಅಥವಾ ಮುಂದಿನ 10 ದಿನಗಳಲ್ಲಿ 100 ಅರ್ಹ ಕುಟುಂಬಗಳಿಗೆ 1 ಲಕ್ಷ ರೂ.ನಂತೆ ಒಟ್ಟು 1 ಕೋಟಿ ರೂ. ವಿತರಿಸುವುದಾಗಿ ವಿಜಯ್​ ದೇವರಕೊಂಡ ಭರವಸೆ ನೀಡಿದ್ದಾರೆ. ಇದು ತಮ್ಮ ಕಟ್ಟಾ ಅಭಿಮಾನಿಗಳಿಗೆ ಹಿಂದಿರುಗಿ ಏನಾದರು ಕೊಡಬೇಕೆಂಬ ನಟನ ಸ್ವಭಾವದ ಕುರಿತು ಒತ್ತಿ ಹೇಳುತ್ತದೆ. ವೃತ್ತಿಜೀವನದುದ್ದಕ್ಕೂ ತಮ್ಮೊಂದಿಗೆ ನಿಂತ ಅಭಿಮಾನಿಗಳಿಗೆ ನಟ ಪ್ರೀತಿ ತೋರಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.

ABOUT THE AUTHOR

...view details