ಕರ್ನಾಟಕ

karnataka

ETV Bharat / entertainment

'ಗುಂಟೂರು ಖಾರಂ' ಸಾಂಗ್​: ಮಹೇಶ್ ಬಾಬು, ಶ್ರೀಲೀಲಾ ಭರ್ಜರಿ ಡ್ಯಾನ್ಸ್ - ಮಹೇಶ್ ಬಾಬು ಶ್ರೀಲೀಲಾ

Kurchi Madathapetti song: 'ಗುಂಟೂರು ಖಾರಂ'ನ ಕುರ್ಚಿ ಮಡತಪೆಟ್ಟಿ ಹಾಡು ಅನಾವರಣಗೊಂಡಿದೆ.

mahesh babu Sreeleela
ಮಹೇಶ್ ಬಾಬು ಶ್ರೀಲೀಲಾ

By ETV Bharat Karnataka Team

Published : Dec 30, 2023, 6:21 PM IST

Updated : Dec 30, 2023, 7:13 PM IST

ಸೌತ್​ ಸೂಪರ್​ ಸ್ಟಾರ್​​ ಮಹೇಶ್ ಬಾಬು ಮತ್ತು ದಕ್ಷಿಣ ಚಿತ್ರರಂಗದ ಯಂಗ್​ ಆ್ಯಂಡ್​ ಎನರ್ಜಿಟಿಕ್​ ನಟಿ ಶ್ರೀಲೀಲಾ ನಟನೆಯ ಬಹು ನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ'. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರ ಶುರುವಾಗಿದೆ. ಇಂದು ಕುರ್ಚಿ ಮಡತಪೆಟ್ಟಿ (Kurchi Madathapetti) ಹಾಡು ಅನಾವರಣಗೊಂಡಿದೆ. ಸಾಂಗ್​ ಬೀಟ್ಸ್ ಮತ್ತು ಮಹೇಶ್ ಬಾಬು, ಶ್ರೀಲೀಲಾ ಭರ್ಜರಿ ಡ್ಯಾನ್ಸ್ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

'ಗುಂಟೂರು ಖಾರಂ'ನ ಕುರ್ಚಿ ಮಡತಪೆಟ್ಟಿ ಸಂಗೀತವನ್ನು ಥಮನ್ ಎಸ್ ಸಂಯೋಜಿಸಿದ್ದಾರೆ. ಶೇಖರ್ ವಿ.ಜೆ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರೆ. ರಾಮಜೋಗಯ್ಯ ಶಾಸ್ತ್ರಿಯವರ ಸಾಹಿತ್ಯವಿದ್ದು, ಸಾಹಿತಿ ಚಗಂಟಿ ಮತ್ತು ಶ್ರೀಕೃಷ್ಣ ಅವರು ದನಿಯಾಗಿದ್ದಾರೆ. ಒಟ್ಟಾರೆ ಇಂದು ಅನಾವರಣಗೊಂಡಿರುವ ಮೂರು ನಿಮಿಷ, 43 ಸೆಕೆಂಡುಗಳ ಲಿರಿಕಲ್ ವಿಡಿಯೋಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈಗಾಗಲೇ ದಮ್ ಮಸಾಲಾ ಮತ್ತು ಓ ಮೈ ಬೇಬಿ ಹಾಡುಗಳು ಬಿಡುಗಡೆ ಆಗಿವೆ. ಕುರಚಿ ಮಡತಪೆಟ್ಟಿ 'ಗುಂಟೂರು ಕಾರಂ'ನ ಮೂರನೇ ಟ್ರ್ಯಾಕ್​​ ಆಗಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ತಂಡ ಯಶಸ್ಸು ಕಂಡಿದೆ.

ಸಿನಿಮಾ 2024ರ ಸಂಕ್ರಾಂತಿ ಸಂದರ್ಭ ತೆರೆಕಾಣಲಿದೆ. ಜನವರಿ 12 ರಂದು ತೆರೆಕಾಣಲಿರುವ ಈ ಸಿನಿಮಾ ತೆಲುಗು ಚಲನಚಿತ್ರೋದ್ಯಮದಲ್ಲಿ ಧೂಳೆಬ್ಬಿಸುವ ನಿರೀಕ್ಷೆಗಳಿವೆ. ಹನುಮಾನ್, ಈಗಲ್ ಮತ್ತು ನಾ ಸಾಮಿ ರಂಗದಂತಹ ಸಿನಿಮಾದೊಂದಿಗೆ ಗುಂಟೂರು ಖಾರಂ ಸ್ಪರ್ಧಿಸಲಿದೆ. ಮಹೇಶ್ ಬಾಬು ಪ್ರಸ್ತುತ ತಮ್ಮ ಕುಟುಂಬಸ್ಥರೊಂದಿಗೆ ಯುಎಸ್​​​​ಎನಲ್ಲಿದ್ದಾರೆ. ನ್ಯೂ ಇಯರ್ ಸೆಲೆಬ್ರೇಶನ್​ ಸಲುವಾಗಿ ಕುಟುಂಬ ಸಮೇತ ವಿದೇಶಕ್ಕೆ ಹಾರಿದ್ದಾರೆ. ಹಿಂದಿರುಗಿದ ಬಳಿಕ ತಮ್ಮ ಈ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:'ಮುಟ್ಟಿನ ಕಪ್​​'ನ ಮಹತ್ವ ಸಾರಲು ಬಿಗ್​ ಬಾಸ್​ಗೆ ಬಂದ 'ಕಾಂತಾರ' ಚೆಲುವೆ ಸಪ್ತಮಿ ಗೌಡ

ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ. 12 ವರ್ಷಗಳ ಬ್ರೇಕ್​ ಬಳಿಕ ಸಿನಿಮಾವೊಂದರಲ್ಲಿ ಮಹೇಶ್​ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಜೊತೆಯಾಗಿದ್ದಾರೆ. ಅತಡು ಮತ್ತು ಖಲೇಜಾ ಚಿತ್ರಗಳಲ್ಲಿ ಈ ನಟ ನಿರ್ದೇಶಕ ಜೋಡಿ ಈಗಾಗಲೇ ಕೆಲಸ ಮಾಡಿದೆ. ಇನ್ನು, ಟಾಲಿವುಡ್​ನಲ್ಲಿ ನೆಲೆಯೂರಿರುವ ಕನ್ನಡ ನಟಿ ಶ್ರೀಲೀಲಾ ಸ್ಟಾರ್ ನಟ-ನಿರ್ದೇಶಕರೊಂದಿಗೆ ಸಿನಿಮಾ ಮಾಡುತ್ತಿದ್ದು, ತಾರೆಯ ಜನಪ್ರಿಯತೆ ದಿನೇ ದಿನೆ ಹೆಚ್ಚುತ್ತಿದೆ. ತೆಲುಗಿನ ಸರಣಿ ಸಿನಿಮಾಗಳು ಬಂದಿದ್ದು, ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಮಹೇಶ್ ಬಾಬು ಮತ್ತು ಶ್ರೀಲೀಲಾ ಜೊತೆಗೆ ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್, ಪ್ರಕಾಶ್​ ರಾಜ್​ ಮತ್ತು ಸುನೀಲ್ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ:2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಭಾರತೀಯ ಸಿನಿಮಾಗಳಿವು

Last Updated : Dec 30, 2023, 7:13 PM IST

ABOUT THE AUTHOR

...view details